BL SANTOSH : ಶಾಸಕರಿಗೆ ಹಣದ ಆಮೀಷ ಕೇಸ್.. ಬಿ.ಎಲ್.ಸಂತೋಷ್ ಗೆ ನೋಟಿಸ್

ಹೈದರಾಬಾದ್ : BL SANTOSH  ಬಿಆರ್ ಎಸ್, ಭಾರತ್ ರಾಷ್ಟ್ರ ಸಮಿತಿಯ ಶಾಸಕರ ಖರೀದಿಗೆ ಹಣದ ಆಮೀಷ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಲ್. ಸಂತೋಷ್ ಗೆ ಸಂಕಷ್ಟ ಎದುರಾಗಿದೆ. ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಹೈದರಾಬಾದ್ ನ ವಿಶೇಷ ತನಿಖಾ ತಂಡ ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ನೋಟಿಸ್ ನೀಡಿದೆ. ನವೆಂಬರ್ 21ರಂದು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಹಾಜರಾಗದೇ ಇದ್ರೆ ಅರೆಸ್ಟ್ ಮಾಡೋ ಎಚ್ಚರಿಕೆಯನ್ನೂ ನೀಡಿದೆ.

ಕಳೆದ ತಿಂಗಳು, ಸೈಬರಾಬಾದ್ ಪೊಲೀಸರು ಮೂವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು ಮತ್ತು ಭಾರತ್ ರಾಷ್ಟ್ರ ಸಮಿತಿಯ ಶಾಸಕರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಆಮಿಷ ಒಡ್ಡಿದ್ದಾರೆ ಎಂದು ಹೇಳಿದರು. ಪೊಲೀಸರ ಪ್ರಕಾರ, ಬಿಆರ್‌ಎಸ್ ಶಾಸಕರಾದ ಪೈಲಟ್ ರೋಹಿತ್ ರೆಡ್ಡಿ, ರೇಗಾ ಕಾಂತರಾವ್, ಗುವ್ವಳ ಬಾಲರಾಜು ಮತ್ತು ಬೀರಂ ಹರ್ಷವರ್ಧನ್ ಅವರನ್ನು ನಗದು, ಚೆಕ್ ಮತ್ತು ಒಪ್ಪಂದಗಳೊಂದಿಗೆ ಖರೀದಿಸಲು ಯತ್ನಿಸಲಾಗಿತ್ತು ಅಂತಾ ಆರೋಪಿಸಲಾಗಿತ್ತು.

ಏನಿದು ಪ್ರಕರಣ : ಅಕ್ಟೋಬರ್ 26ರಂದುತೆಲಂಗಾಣದ ಸೈಬರಾಬಾದ್ ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಮೇಲೆ‌ ದಾಳಿ ಮಾಡಿದ್ದರು. ಈ ವೇಳೆ ಬರೋಬ್ಬರಿ 15 ಕೋಟಿ ರೂಪಾಯಿ. ಹಣವನ್ನು ಸೀಜ್ ಮಾಡಿದ್ದರು. ಅಲ್ಲದೇ ಆಪರೇಷನ್ ಕಮಲಕ್ಕೆ ಈ ಹಣ ತರಲಾಗಿತ್ತು ಎನ್ನಲಾಗಿತ್ತು. ಸದ್ಯ ಬಿಆರ್ ಎಸ್ ಭಾರತ್ ರಾಷ್ಟ್ರ ಸಮಿತಿ ಪಕ್ಷವಾಗಿ ಬದಲಾಗಿರೋ ಟಿಆರ್‌ಎಸ್ನ ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಬಿಜೆಪಿ ಹಣದ ಆಮಿಷ ಒಡ್ಡಲಾಗಿತ್ತು. ಶಾಸಕರನ್ನು ಖರೀದಿಸಲು ತಂದಿದ್ದ ಎನ್ನಲಾದ 15 ಕೋಟಿ ರೂ. ಹಣದ ಜೊತೆಗೆ ಮೂವರನ್ನು ಪೊಲೀಸರ ಬಂಧಿಸಿದ್ದರು. ಅಲ್ಲದೇ ಆಪರೇಷನ್ ಕಮಲದ ಬಗ್ಗೆ ಆಡಿಯೋವೊಂದು ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಪ್ರಸ್ತಾಪಿಸಲಾಗಿತ್ತು. ಈ ಪ್ರಕರಣ ತೆಲಂಗಾಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಶಾಸಕ ರೋಹಿತ್ ರೆಡ್ಡಿ ಹಾಗೂ ರಾಮಚಂದ್ರ ಭಾರತಿ ಸ್ವಾಮಿಜಿ ನಡುವಿನ ಸಂಭಾಷಣೆ ಆಡಿಯೋನಲ್ಲಿ, ಬಿ.ಎಲ್‌ ಸಂತೋಷ್‌ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಸ್ವಾಮೀಜಿ ಹೇಳಿಕೊಂಡಿದ್ದರು. ನೀವು ಬಿಜೆಪಿ ಸೇರಿ. ನಮ್ಮ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ಸಂತೋಷ್ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎನ್ನುವ ಆಡಿಯೋ ವೈರಲ್ ಆಗಿತ್ತು. ಇದೀಗ ಇದೇ ಪ್ರರಕಣದ ತನಿಖೆ ನಡೆಸ್ತಿರುವ ಎಸ್.ಐಟಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 (ಎ) ಅಡಿಯಲ್ಲಿ ಬಿ.ಎಲ್. ಸಂತೋಷ್ ಅವರಿಗೆ ನೋಟಿಸ್ ನೀಡಿದೆ. ಸಂತೋಷ್ ಅವರು ಹೇಳಿದ ದಿನಾಂಕ ಮತ್ತು ಸಮಯದಂದು ಎಸ್‌ಐಟಿ ಮುಂದೆ ಹಾಜರಾಗಲು ವಿಫಲವಾದರೆ ಅವರನ್ನು ಬಂಧಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ, ಬಿಜೆಪಿಯ ತೆಲಂಗಾಣ ಘಟಕವು ಬಿಎಲ್ ಸಂತೋಷ್‌ಗೆ ಎಸ್‌ಐಟಿ ನೋಟಿಸ್ ನೀಡಿರುವುದನ್ನು ವಿರೋಧಿಸಿ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತು. ಬಿಜೆಪಿ ಪರವಾಗಿ ಪ್ರಧಾನ ಕಾರ್ಯದರ್ಶಿ ಪ್ರೇಮೇಂದ್ರ ರೆಡ್ಡಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಸೆಕ್ಷನ್ 41 ರ ಅಡಿಯಲ್ಲಿ ಬಿಜೆಪಿ ನಾಯಕನನ್ನು ಸಮನ್ಸ್ ಮಾಡಲು ಯಾವುದೇ ಆಧಾರವಿಲ್ಲ ಎಂದು ತಿಳಿಸಿದ ಪ್ರೇಮೇಂದ್ರ ರೆಡ್ಡಿ ಬಿಎಲ್ ಸಂತೋಷ್‌ಗೆ ನೀಡಲಾದ ನೋಟಿಸ್‌ಗೆ ತಡೆ ಕೋರಿದ್ದಾರೆ. ಎಸ್‌ಐಟಿ ತನಿಖೆಯ ಹೆಸರಿನಲ್ಲಿ ಪ್ರಕರಣಕ್ಕೆ ಸಂಬಂಧವಿಲ್ಲದ ಜನರಿಗೆ ಕಿರುಕುಳ ನೀಡುತ್ತಿರುವ ಕಾರಣ ನಾವು ಅರ್ಜಿ ಸಲ್ಲಿಸಿದ್ದೇವೆ ಎಂದು ರೆಡ್ಡಿ ಹೇಳಿದರು.

ಇದನ್ನೂ ಓದಿ : Revision of Voter ID: ವೋಟರ್‌ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ: ಚಿಲುಮೆ ಕಚೇರಿಗೆ ಪೊಲೀಸರ ದಾಳಿ

ಇದನ್ನೂ ಓದಿ : Wimbledon dress code: ವಿಂಬಲ್ಡನ್ ಆಡುವ ಮಹಿಳಾ ಆಟಗಾರ್ತಿಯರಿಗೆ ಬಿಗ್ ರಿಲೀಫ್; ಡ್ರೆಸ್ ಕೋಡ್ ನಿಯಮದಲ್ಲಿ ಬದಲಾವಣೆ

BL SANTOSH Bharat Rashtra Samiti Party MLA purchase case BJP senior leader B.L. Santosh is trouble

Comments are closed.