VOTER ID SCAM: ವೋಟರ್ ಐಡಿ ಹಗರಣ.. ಸಿದ್ದರಾಮಯ್ಯ ಕೊಟ್ರು ಕೆಜಿಎಫ್.. ಕಾಂತಾರ ಲಿಂಕ್

ಬೆಂಗಳೂರು : VOTER ID SCAM  : ರಾಜ್ಯ ಸರ್ಕಾರದ ವಿರುದ್ಧ ವೋಟರ್ ಐಡಿ ಹಗರಣ ಆರೋಪ ಮಾಡಿರೋ ಕಾಂಗ್ರೆಸ್ ಮತ್ತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಗರಣಕ್ಕೆ ಹೊಸ ಟಚ್ ಕೊಟ್ಟಿದ್ದಾರೆ. ವೋಟರ್ ಐಡಿ ಪರಿಷ್ಕರಣೆ ವಿಚಾರವನ್ನ ಕೆ.ಜಿ.ಎಫ್ ಮತ್ತು ಕಾಂತಾರಾ ಚಿತ್ರಗಳಿಗೆ ಲಿಂಕ್ ಮಾಡೋ ಮೂಲಕ ಪರೋಕ್ಷವಾಗಿ ಸಚಿವ ಅಶ್ವತ್ಥ್ ನಾರಾಯಾಣ ವಿರುದ್ಧ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಮತದಾರರಿಗೆ ಜಾಗೃತಿ ಮೂಡಿಸೋದಾಗಿ ಚಿಲುಮೆ ಅನ್ನೋ ಎನ್ ಜಿ ಒ ಮತ್ತು ಡಿಎಪಿ ಹೊಂಬಾಳೆ ಸಂಸ್ಥೆ ಮತದಾರರ ಖಾಸಗಿ ಮಾಹಿತಿಯನ್ನ ಸೋರಿಕೆ ಮಾಡಿವೆ ಎಂದು ಗುರುವಾರ ಕಾಂಗ್ರೆಸ್ ಆರೋಪಿಸಿತ್ತು. ಇದಾದ ಬೆನ್ನೆಲ್ಲೆ ಚಿಲುಮೆ ಸಂಸ್ಥೆ ಮೇಲೆ ಪೊಲೀಸರು ದಾಳಿ ಮಾಡಿದ್ದು ಎಫ್ಐಆರ್ ಕೂಡಾ ದಾಖಲಾಗಿದೆ.

ಇನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಸರಣಿ ಟ್ವೀಟ್ ಮಾಡಿದ್ದು ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ. #operationvoter ಅಡಿ ಟ್ವೀಟ್ ಮಾಡಿರೋ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್ ಆರೋಪವನ್ನ ಸಿಎಂ ಬೊಮ್ಮಾಯಿ ಹಾಸ್ಯಾಸ್ಪದ ಎಂದು ಜರಿದಿದ್ರು. ಇದಕ್ಕೆ ತಿರುಗೇಟು ಕೊಟ್ಟಿರೋ ಸಿದ್ದರಾಮಯ್ಯ,ಆಪರೇಷನ್ ವೋಟರ್ ಹಗರಣವನ್ನ ಹಾಸ್ಯಾಸ್ಪದ ಎಂದು ತಳ್ಳಿ ಹಾಕಿರುವ ಸಿಎಂ ಬೊಮ್ಮಾಯಿ ಹಗರಣದ ರೂವಾರಿಗಳನ್ನ ರಕ್ಷಿಸಲು ಸಂಸ್ಥೆಯ ಒಬ್ಬ ಏಜೆಂಟನ ವಿರುದ್ಧ ಪೊಲೀಸರಿಂದ ಎಫ್ಐಆರ್ ಹಾಕಿಸಿ ತಮ್ಮ ಸರ್ಕಾರದ ಕೆಲಸ ಎಷ್ಟು ಹಾಸ್ಯಾಸ್ಪದ ಎನ್ನುವುದನ್ನ ಸಾಬೀತು ಪಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೇ ದೂರು  ನೀಡಿದ್ದೆವ. ಆದ್ರೆ ಮುಖ್ಯಮಂತ್ರಿಗಳು 20 ಸಾವಿರ ರೂಪಾಯಿ ಸಂಬಳ ಪಡೆಯೋ ಬಡಪಾಯಿ ಏಜೆಂಟ್ ನನ್ನ ಬಲಿಪಶು ಮಾಡಿ ತಾವು ಪಾರಾಗುವ ಸಂಚು ನಡೆಸಿದ್ದಾರೆ ಎಂದು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

ಕೆಜಿಎಫ್ – ಕಾಂತಾರಾ ಸಿನಿಮಾ ಪ್ರಸ್ತಾಪ : ಸರಣಿ ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿರೋ ಸಿದ್ದರಾಮಯ್ಯ, ಮತ್ತೊಂದು ಟ್ವೀಟ್ ನಲ್ಲಿ ಹೊಂಬಾಳೆ ಸಂಸ್ಥೆ ನಿರ್ಮಾಣದ ಕೆ.ಜಿ.ಎಫ್ ಮತ್ತು ಕಾಂತಾರಾ ಸಿನಿಮಾಗಳ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಆರೋಪಿಸಿರುವಂತೆ ವೋಟರ್ ಹಗರಣದಲ್ಲಿ ಚಿಲುಮೆ ಎನ್ ಜಿಒ ಜೊತೆ ಡಿಎಪಿ ಹೊಂಬಾಳೆ ಸಂಸ್ಥೆಯೂ ಶಾಮೀಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದ ಸಿದ್ದರಾಮಯ್ಯ, ಶುಕ್ರವಾರ ಟ್ವೀಟ್ ನಲ್ಲಿ ಮತ್ತೆ ವಿಚಾರವನ್ನ ಪ್ರಸ್ತಾಪಿಸ್ತಿದ್ದಾರೆ. ‘ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕತೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ-ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Revision of Voter ID: ವೋಟರ್‌ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ: ಚಿಲುಮೆ ಕಚೇರಿಗೆ ಪೊಲೀಸರ ದಾಳಿ

ಇದನ್ನೂ ಓದಿ : BL SANTOSH : ಶಾಸಕರಿಗೆ ಹಣದ ಆಮೀಷ ಕೇಸ್.. ಬಿ.ಎಲ್.ಸಂತೋಷ್ ಗೆ ನೋಟಿಸ್

VOTER ID SCAM Siddaramaiah has given KGF and Kantara Link

Comments are closed.