ಭಾನುವಾರ, ಏಪ್ರಿಲ್ 27, 2025
HomeCrimeಪಳನಿಯಲ್ಲಿ ಬಾಯ್ಲರ್ ಸ್ಫೋಟ : ತಪ್ಪಿದ ಬಾರೀ ದುರಂತ

ಪಳನಿಯಲ್ಲಿ ಬಾಯ್ಲರ್ ಸ್ಫೋಟ : ತಪ್ಪಿದ ಬಾರೀ ದುರಂತ

- Advertisement -

ಚೆನ್ನೈ : ನೂಲು ತಯಾರಿಕಾ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು (Boiler explosion) ಭೀಕರ ಬೆಂಕಿ ಕಾಣಿಸಿಕೊಂಡಿರುವ ಘಟನೆ ತಮಿಳುನಾಡಿನ ಪಳನಿಯಲ್ಲಿ ನಡೆದಿದೆ. ಕಾರ್ಖಾನೆಯಲ್ಲಿ ಸುಮಾರು ಐದುನೂರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ತಮಿಳುನಾಡಿನ ದಿಂಡಿಗಲ್ ಹಾಗೂ ತಿರುಪುರ್ ಜಿಲ್ಲೆಯ ಗಡಿಯಲ್ಲಿರುವ ಪಳನಿ ಸಮೀಪದ ಸಮಿನಾಥಪುರಂನಲ್ಲಿ ಇರುವ ವೆಂಕಟೇಶ್ವರ ಪೇಪರ್ ಮಿಲ್ ಮತ್ತು ಸ್ಪಿನ್ನಿಂಗ್ ಕಂಪೆನಿಯಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಾಯ್ಲರ್ ಸ್ಪೋಟಗೊಳ್ಳುತ್ತಿದ್ದಂತೆಯೇ ಬೆಂಕಿಯ ತೀವ್ರತೆ ಹೆಚ್ಚಳವಾಗಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳಿಗೂ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ.

ಬಾಯ್ಲರ್ ಬಳಿಯಲ್ಲಿ ಎಣ್ಣೆಯನ್ನು ಸಂಗ್ರಹಿಸಿ ಇಡಲಾಗಿದ್ದು, ಇದರಿಂದಲೇ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಾರ್ಮಿಕರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಎಣ್ಣೆಯಿಂದಾಗಿ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಮನೆಗೆ ಕಾರ್ಖಾನೆಯಿಂದ ಹೊರಗೆ ಕಳುಹಿಸಲಾಗಿದೆ. ಕೆಲವು ಕಾರ್ಮಿಕರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಎಣ್ಣೆಯಿಂದಾಗಿ ಕಾಣಿಸಿಕೊಂಡಿದ್ದ ಬೆಂಕಿಯ ತೀವ್ರತೆ ವೇಗವಾಗಿ ಹರದಿ ಬಾಯ್ಲರ್ ಸ್ಪೋಟಗೊಂಡಿದೆ. ದೊಡ್ಡ ಮಟ್ಟದ ಶಬ್ದದಿಂದಾಗಿ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ. ಸದ್ಯ ಬೆಂಕಿ ತಹಬದಿಗೆ ಬಂದಿದೆ ಎಂದು Tamil.newsnext.live ವರದಿ ಮಾಡಿದೆ.

ಸಾಲದ ಹೊರೆಗಾಗಿ ಮಗಳನ್ನೇ ಬಲಿಕೊಟ್ಟ ಪಾಪಿ ತಂದೆ

ಬೆಂಗಳೂರು : ಬೆಂಗಳೂರಿನಲ್ಲಿ ವಾಸವಿದ್ದು, ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಗುಜರಾತಿ ವ್ಯಕ್ತಿ ತನ್ನ 2 ವರ್ಷದ ಮಗಳನ್ನು ಹಣವಿಲ್ಲದ ಕಾರಣದಿಂದ ಕೊಂದು ಹಾಕಿದ್ದಾನೆ. ಕೆಲಸ ಕಳೆದುಕೊಂಡು ಸಾಲವನ್ನು ತಿರಿಸಲು ಸಾಧ್ಯವಾಗದೇ ಆರೋಪಿ ಇಂತಹ ಕೃತ್ಯವನ್ನು ಮಾಡಿದ್ದಾನೆ.

ಆರೋಪಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಇಂಜಿನಿಯರ್‌ ಕೆಲಸ ಮಾಡುತ್ತಿದ್ದ 45 ವರ್ಷದ ರಾಹುಲ್ ಪರ್ಮಾರ್ ಗುಜರಾತ್‌ ಮೂಲದವನಾಗಿದ್ದಾನೆ. ವ್ಯಕ್ತಿ ತನ್ನ ಕೆಲಸವನ್ನು ಕಳೆದುಕೊಂಡಿದ್ದು, ನಂತರ ಬಿಟ್‌ಕಾಯಿನ್ ಜೂಜಾಟದಲ್ಲಿ ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಿದನು. ಅವನು ಈಗಾಗಲೇ ತನ್ನ ಸಾಲವನ್ನು ತೀರಿಸಲು ಸಾಧ್ಯವಾಗದೇ ತನ್ನ ಹೆಂಡತಿಯ ಆಭರಣಗಳನ್ನು ಅಡಮಾನವಿಟ್ಟಿದ್ದನು. ಆ ಚಿನ್ನ ತನ್ನಯಿಂದ ದರೋಡೆ ಮಾಡಲಾಗಿದೆ ಎಂದು ತನ್ನ ಪತ್ನಿಗೆ ಸುಳ್ಳು ಹೇಳಿದನು. ಕೊನೆಗೆ ಸಾಲದ ಸುಳ್ಳಿಯಲ್ಲಿ ಸಿಲುಕಿದ ವ್ಯಕ್ತಿ ತನ್ನ ಸ್ವಂತ ಮಗಳನ್ನು ಕೊಂದು ತನ್ನ ಪ್ರಾಣವನ್ನು ಸಹ ತೆಗೆದುಕೊಳ್ಳಲು ನಿರ್ಧರಿಸಿದನು.

ಇಂಜಿನಯರ್ ತನ್ನ ಮಗಳನ್ನು ಹಿಂಬದಿಯ ಸೀಟಿನಲ್ಲಿಟ್ಟುಕೊಂಡು ಆತ್ಮಹತ್ಯೆಯ ಆಲೋಚನೆಯೊಂದಿಗೆ ನಗರವನ್ನು ಸುತ್ತಾಡಿದ್ದನು. ತುಂಬಾ ಸಮಯದವರೆಗೂ ಮಗು ಏನನ್ನೂ ತಿನ್ನದೇ ಇದ್ದುದರಿಂದ ನೊಂದುಕೊಂಡು ಅಳಲು ಶುರು ಮಾಡಿತು. ಮಗುವಿಗೆ ತಿನ್ನಿಸಲು ಹತ್ತಿರದ ಅಂಗಡಿಯಿಂದ ತಿಂಡಿಗಳನ್ನು ತರಲು ಹೋದ ರಾಹುಲ್, ಆ ಕ್ಷಣದಲ್ಲಿ ಈ ಅಪರಾಧ ಮಾಡಲು ನಿರ್ಧರಿಸಿದನು. ಆರೋಪಿ ಸಾಲ ಪಡೆದವರ ಕಾಟದಿಂದ ಮುಂದಿನ ಜೀವನಕ್ಕೆ ಹೆದರುತ್ತಿದ್ದು, ಅವರಿಂದ ಪೊಲೀಸ್ ಕ್ರಮವನ್ನೂ ಎದುರಿಸಿದನು. ಸಾಲಗಾರರ ಒತ್ತಡದಿಂದ ಚಿಂತೆಗೆ ಒಳಗಾಗಿದ್ದ ರಾಹುಲ್‌ ತಾನು ಆತ್ಮಹತ್ಯೆಗೆ ಮಾಡಿಕೊಳ್ಳುವ ಮೊದಲು ಮಗಳನ್ನು ಕೊಲ್ಲುವ ತಿರ್ಮಾನ ಮಾಡಿ ಚಿಕ್ಕ ಮಗುವನ್ನು ಕೊಂದನು.

ವಿಚಾರಣೆ ವೇಳೆಯಲ್ಲಿ ಆರೋಪಿಯು, “ಅವಳು ಅಳಲು ಪ್ರಾರಂಭಿಸಿದಳು ಮತ್ತು ನನ್ನ ಬಳಿ ಯಾವುದೇ ಹಣವಿರಲಿಲ್ಲ. ನಾನು ಮನೆಗೆ ಹಿಂದಿರುಗಿದರೆ ಕೆಟ್ಟ ಪರಿಸ್ಥಿತಿ ನನಗೆ ಕಾದಿತ್ತು. ನಾನು ಅವಳನ್ನು ಬಿಗಿಯಾಗಿ ತಬ್ಬಿಕೊಂಡು ಸಾಯಿಸಿದೆ. ಅವಳ ಆಹಾರವನ್ನು ಖರೀದಿಸಲು ನನ್ನ ಅಸಹಾಯಕತೆ ನನ್ನನ್ನು ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಅವಳೊಂದಿಗೆ ಕೆರೆಗೆ ಹಾರಿದೆ, ಆದರೆ ಮುಳುಗಲಿಲ್ಲ, ”ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ : China Lock down Protest: ಲಾಕ್ ಡೌನ್ ವಿರುದ್ಧ ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ.. ಕ್ಸಿ ಸರ್ಕಾರದ ವಿರುದ್ಧ ಸಮರ

ಇದನ್ನೂ ಓದಿ : Overpass collapse: ಮಹಾರಾಷ್ಟ್ರದಲ್ಲಿ ಮೇಲ್ಸೇತುವೆ ಕುಸಿತ: ಮಹಿಳೆ ಸಾವು, 12 ಜನ ಗಂಭೀರ ಗಾಯ

Boiler explosion near Palani in Tami Naadu

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular