Champa Shashti 2022: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವ : ಭಕ್ತರಿಂದ ಸಂಭ್ರಮದ ಎಡೆಸ್ನಾನ

ಕುಕ್ಕೆಸುಬ್ರಹ್ಮಣ್ಯ: (Champa Shashti 2022) ರಾಜ್ಯದ ಶ್ರೀಮಂತ ದೇಗುಲ ಎನಿಸಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲೀಗ ಚಂಪಾ ಷಷ್ಠಿಯ ಸಂಭ್ರಮ.ಕಾರ್ತಿಕ ಮಾಸದ ನಿರ್ಗಮನ, ಮಾರ್ಗಶಿರ ಮಾಸದ ಆಗಮನದ ಪರ್ವ ಕಾಲದಲ್ಲಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಚಂಪಾ ಷಷ್ಠಿಯ ಸೊಬಗೆ ಬೇರೆ. ಈ ಸುಸಂದರ್ಭದಲ್ಲಿ ಕೊಪ್ಪರಿಗೆ ಏರುವ ಮೂಲಕ ಚಂಪಾ ಷಷ್ಠಿಯ ಉತ್ಸವ ಪ್ರಾರಂಭವಾಗುತ್ತದೆ. ನಂತರದಲ್ಲಿ ಶೇಷವಾಹನಯುಕ್ತ ಬಂಡಿ ಉತ್ಸವ, ಹೂವಿನ ತೇರಿನ ಉತ್ಸವ ಸೇರಿದಂತೆ ಮುಂತಾದ ಉತ್ಸವವಗಳು ನಡೆಯುತ್ತದೆ. ಈ ಉತ್ಸವಗಳಲ್ಲಿ ಲಕ್ಷ ದೀಪೋತ್ಸವ ವಿಶೇಷವಾದದ್ದು. ದೀಪದ ಬೆಳಕಿನಿಂದಲೇ ಸುಬ್ರಹ್ಮಣ್ಯ ಸ್ವಾಮಿಯು ಕಂಗೊಳಿಸುತ್ತಾನೆ. ಸಾಲು ಸಾಲು ದೀಪಗಳನ್ನು ಬೆಳಗಿಸಿ ದೇವರಿಗೆ ಅರ್ಚಕರು ಅರ್ಚನೆಯನ್ನು ನಡೆಸುತ್ತಾರೆ.

ಚಂಪಾ ಷಷ್ಠಿಯ (Champa Shashti 2022) ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ಸುಬ್ರಹ್ಮಣ್ಯನು ದರ್ಶನ ಭಾಗ್ಯ ನೀಡುತ್ತಾನೆ. ಮೊದಲು ಸುಬ್ರಹ್ಮಣ್ಯ ಸ್ವಾಮಿಯ ಹೂವಿನತೇರು ರಥ ಬೀದಿಯಲ್ಲಿ ಮುಂದೆ ಸಾಗಿದರೆ, ಬಳಿಕ ಸುಬ್ರಹ್ಮಣ್ಯನನ್ನು ಹೊತ್ತು ಬ್ರಹ್ಮರಥ ಸಾಗುತ್ತದೆ. ರಥ ಸಾಗುತ್ತಿರುವಾಗ ತೇರಿಗೆ ಎಳ್ಳು, ನಾಣ್ಯಗಳನ್ನು ಎಸೆದು ಭಕ್ತರು ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ತೇರು ಸಂಪೂರ್ಣವಾದ ನಂತರ ಅರ್ಚಕರು ದೇವರಿಗೆ ಧರಿಸಿದ್ದ ಫಲ ಪುಷ್ಪಗಳನ್ನು ಭಕ್ತರತ್ತ ಎಸೆಯುತ್ತಾರೆ.

ಈ ಕ್ಷೇತ್ರದ ಬ್ರಹ್ಮರಥವನ್ನು ಬೆತ್ತದಿಂದ ಮಾಡಿರುತ್ತಾರೆ. ರಥದ ಹಾದಿಯನ್ನು ತಪ್ಪದಂತೆ ಜಾಗರೂಕತೆಯಿಂದ ಎಳೆಯುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಕೊನೆಯ ದಿನದಂದು ಕೊಪ್ಪರಿಗೆ ಇಳಿಸುವ ಮೂಲಕ ಜಾತ್ರೆಯು ಕೊನೆಗೊಳ್ಳುತ್ತದೆ. ಇಂದು ಪ್ರಾತಃಕಾಲದಲ್ಲೇ ಚಂಪಾಷಷ್ಠಿಯ ಮಹಾರಥೋತ್ಸವ ನೆರವೇರಿದೆ.

ಎಡೆಸ್ನಾನ ಸೇವೆ:
ಚಂಪಾ ಷಷ್ಠಿಯ ಸಮಯದಲ್ಲಿ ಎಡೆಸ್ನಾನ ಸೇವೆ ಒಂದು ವಿಶೇಷವಾದದ್ದು. ಭಕ್ತರು ಸ್ವಯಂಪ್ರೇರಿತರಾಗಿ ನೆರವೇರಿಸುವ ಸೇವೆ ಇದಾಗಿದೆ. ಎಡೆಸ್ನಾನ ಎಂದರೆ ದೇವರ ನೈವೇದ್ಯವನ್ನು ದೇವಸ್ಥಾನದ ಹೊರಾಂಗಣದಲ್ಲಿ ಗೋವಿಗೆ ತಿನ್ನಿಸಲಾಗುತ್ತದೆ. ಗೋವು ತಿಂದು ಉಳಿಸಿದ ಎಲೆಗಳ ಮೇಲೆ ಭಕ್ತರು ಉರುಳು ಸೇವೆ ನೆರವೇರಿಸುತ್ತಾರೆ. ಇದನ್ನೇ ಎಡೆಸ್ನಾನ ಎನ್ನುತ್ತಾರೆ. ಈ ಸೇವೆ ನೆರವೇರಿಸಿದರೆ ಚರ್ಮವ್ಯಾದಿ ಹಾಗೂ ಇನ್ನೀತರ ರೋಗಗಳು ಉಪಶಮನವಾಗುತ್ತದೆ ಎನ್ನುವ ಅಪಾರವಾದ ನಂಬಿಕೆ ಭಕ್ತರದ್ದು.

ಇದನ್ನೂ ಓದಿ : Sonithapura: ಬಬ್ರುವಾಹನ ಆಳ್ವಿಕೆ ಕಾಲದ ಪರಶುರಾಮ ಸೃಷ್ಟಿಯ ಪುರಾತನ ಕ್ಷೇತ್ರದ ಬಗ್ಗೆ ನಿಮಗೆ ಗೊತ್ತಾ ?

ಇದನ್ನೂ ಓದಿ : History of Barkur: ಒಂದೊಂದು ಕಲ್ಲುಗಳು ಸಾರುತ್ತವೆ ಬಾರ್ಕೂರಿನ ಇತಿಹಾಸ

ಈ ಸೌಂದರ್ಯಮಯ ಜಗತ್ತಿನ ಇನ್ನೊಂದು ವಿಶೇಷತೆ ಏನೆಂದರೆ ಶೇಷ ಪರ್ವತ ಅಥವಾ ಕುಮಾರ ಪರ್ವತ. ಈ ಪರ್ವತವು ಸುಬ್ರಹ್ಮಣ್ಯ ದೇವಾಲಯವನ್ನು ರಕ್ಷಿಸುವ ನಾಗರ ಹಾವಿನಂತೆ ಕಾಣುತ್ತದೆ . ಈ ಭವ್ಯ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದೆನಿಸುತ್ತದೆ. ಕುಕ್ಕೆ ಒಡೆಯನ ಚಂಪಾ ಷಷ್ಠಿಯ ವಿಶೇಷತೆಯೇ ಹಾಗೆ ಮೈ ರೋಮಾಂಚನಗೊಳಿಸುವಂತದ್ದು.

(Champa Shashti 2022) In the presence of Kukke Subrahmanya, which is the richest temple of the state, the celebration of Champa Shashti is different. On this auspicious occasion, the festival of Champa Shashti begins by climbing the Koppari.

Comments are closed.