Amrutha Prem: ನಾಯಕಿಯಾಗಿ ಪ್ರೇಮ್‌ ಪುತ್ರಿ ಅಮೃತಾ ಸ್ಯಾಂಡಲ್‌ ವುಡ್‌ ಗೆ ಎಂಟ್ರಿ

(Amrutha Prem) ನಟಿ ಮಾಲಶ್ರೀ ಪುತ್ರಿ ಮೊನ್ನೆಯಷ್ಟೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇದರ ಬೆನ್ನಲ್ಲೇ ನಟ ನೆನಪಿರಲಿ ಪ್ರೇಮ್‌ ಮಗಳು ಅಮೃತಾ ಸ್ಯಾಂಡಲ್‌ ವುಡ್‌ ಗೆ ಎಂಟ್ರಿ ನೀಡಲಿದ್ದಾರೆ. ಡಾಲಿ ಧನಂಜಯ್‌ ಇವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ವಿಶೇಷ.

ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ನಟ ಪ್ರೇಮ್‌ ಹಂಚಿಕೊಂಡಿದ್ದು, “ನನ್ನ ಮಗುವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ನಿಮ್ಮ ಆಶೀರ್ವಾದ, ಪ್ರೀತಿ, ಪ್ರೋತ್ಸಾಹ,ಅಭಿಮಾನವಿರಲಿ” ಎಂದು ಬರೆದಿದ್ದಾರೆ. ಡಾಲಿ ಧನಂಜಯ್‌ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿರುವುದರಿಂದ ವಿಭಿನ್ನ ಪಾತ್ರದ ಮೂಲಕವೇ ಪ್ರೇಮ್‌ ಪುತ್ರಿ ಅಮೃತಾ (Amrutha Prem) ಸಿನಿಮಾ ರಂಗಕ್ಕೆ ಪ್ರವೇಶ ಮಾಡಲಿದ್ದಾರೆ. ಅಂದಹಾಗೇ ಅಮೃತಾ ನಾಯಕಿಯಾಗಿ ನಟಿಸಲಿರುವ ಚಿತ್ರಕ್ಕೆ ʼಟಗರು ಪಲ್ಯʼ ಎಂದು ಹೆಸರಿಡಲಾಗಿದೆ.

https://www.instagram.com/p/Clfe8EcPHCD/

ಡಾಲಿ ಧನಂಜಯ್‌ ಸ್ಯಾಂಡಲ್‌ ವುಡ್‌ ನ ಬಹು ಬೇಡಿಕೆಯ ನಟ. ಟಗರು ಸಿನಿಮಾ ಮೂಲಕ ಖ್ಯಾತಿ ಪಡೆದ ಡಾಲಿ ಧನಂಜಯ್‌ ಕೇವಲ ನಟನಾಗಿ ಉಳಿಯದೇ ನಿರ್ಮಾಪಕನಾಗಿಯೂ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಡಾಲಿ ಪಿಕ್ಚರ್ಸ್‌ ನ ಮೊದಲ ಎರಡು ಸಿನಿಮಾವಾಗಿ ʼಬಡವ ರಾಸ್ಕಲ್‌ʼ ಹಾಗೂ ʼಹೆಡ್‌ ಬುಷ್‌ʼ ನಿರ್ಮಾಣ ಮಾಡಲಾಗಿತ್ತು. ಇದು ಡಾಲಿ ಧನಂಜಯ್‌ ನಿರ್ಮಾಣದ ಮೂರನೇ ಸಿನಿಮಾವಾಗಿದ್ದು, ಇದಕ್ಕೆ ʼಟಗರು ಪಲ್ಯʼಎಂದು ಹೆಸರಿಡಲಾಗಿದೆ. ಮೋಷನ್‌ ಪೋಸ್ಟರ್‌ ಮೂಲಕ ಸುದ್ದಿಯಾಗಿದ್ದ ಚಿತ್ರ ಇದೀಗ ಸೆಟ್ಟೇರೋಕೆ ಸಿದ್ದವಾಗಿದೆ.

ಇದನ್ನೂ ಓದಿ : ಪಳನಿಯಲ್ಲಿ ಬಾಯ್ಲರ್ ಸ್ಫೋಟ : ತಪ್ಪಿದ ಬಾರೀ ದುರಂತ

ಇದನ್ನೂ ಓದಿ : Overpass collapse: ಮಹಾರಾಷ್ಟ್ರದಲ್ಲಿ ಮೇಲ್ಸೇತುವೆ ಕುಸಿತ: ಮಹಿಳೆ ಸಾವು, 12 ಜನ ಗಂಭೀರ ಗಾಯ

ಹೊಸ ಹೊಸ ಪ್ರತಿಭೆಗಳಿಗೆ ಟಗರು ಪಲ್ಯ ಚಿತ್ರ ವೇದಿಕೆ ಮಾಡಿಕೊಟ್ಟಿದ್ದು, ಚಿತ್ರದಲ್ಲಿ ನಾಗಬೂಷಣ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಮೇಶ್‌ ಕೆ ಕೃಪ ಈ ಚಿತ್ರದ ನಿರ್ದೇಶಕರಾಗಿದ್ದು, ಸಿನಿಮಾ ಸ್ಕ್ರಿಪ್ಟ್‌ ಕೆಲಸಗಳು ಮುಗಿದಿವೆ. ಡಿಸೆಂಬರ್‌ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲು ತಾಯಾರಾಗಿದೆ ಎಂದು ನಿರ್ದೇಶಕ ಉಮೇಶ್‌ ಕೆ ಕೃಪ ತಿಳಿಸಿದ್ದಾರೆ. ಇದೊಂದು ಕಂಟೆಂಟ್‌ ಆಧಾರಿತ ಸಿನಿಮಾವಾಗಿದ್ದು, ಇದಕ್ಕೆ ವಾಸುಕಿ ವೈಭವ್‌ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅಮೃತಾ ಅವರು ಸಿನಿಮಾದ ನಾಯಕಿಯಾದರೆ, ರಂಗಾಯಣ ರಘು, ನಾಗಭೂಷಣ್‌, ತಾರಾ, ಶರತ್‌ ಲೋಹಿತಾಶ್ವ ಹೀಗೆ ಹಲವು ಕಲಾವಿದರನ್ನು ಈ ಚಿತ್ರ ಒಳಗೊಂಡಿದೆ.

(Amrutha Prem) Actress Malashree Putri had recently entered the film industry. After this, the actor will give entry to Prem’s daughter Amrita Sandalwood. Introducing Dali Dhananjay to the film industry is special.

Comments are closed.