BUS FIRE ACCIDENT : ಖಾಸಗಿ ಬಸ್ ಹೊತ್ತಿ ಉರಿದು 11 ಮಂದಿ ದುರ್ಮರಣ

ನಾಸಿಕ್, ಮಹಾರಾಷ್ಟ್ರ : BUS FIRE ACCIDENT ಪ್ರಯಾಣಿಕರನ್ನ ಹೊತ್ತು ಸಾಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ ವೊಂದು ರಸ್ತೆಯಲ್ಲೇ ಹೊತ್ತಿ ಉರಿದು 11ಕ್ಕೂ ಹೆಚ್ಚು ಮಂದಿ ಮೃತಪಟ್ಟು 8 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಬಳಿ ನಡೆದಿದೆ.

ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಬಸ್ ಎದುರಿನಿಂದ ಬರ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಈ ಅನಾಹುತ ನಡೆದಿದೆ. ಮುಂಬೈ ಮೂಲದ ಖಾಸಗಿ ಬಸ್  ಪುಸಾದ್ ನಿಂದ ಬರ್ತಾ ಇತ್ತು.. ನಾಸಿಕ್ ನಗರದ ಔರಾಂಗಾಬಾದ್ ರಸ್ತೆಯ ಬಳಿಕ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡ್ತಿದ್ದಂತೆ ಇಡೀ ಬಸ್ ಗೆ ಬೆಂಕಿ ಆವರಿಸಿದೆ. ಬಸ್ ನಲ್ಲಿ ಮಲಗಿದ್ದವರೆಲ್ಲ ಹೊರ ಬರಲಾಗದೇ ಬೆಂಕಿಯಲ್ಲೇ ಸಿಲುಕಿದ್ದಾರೆ. ಸ್ಥಳದಲ್ಲೇ 8 ಮಂದಿ ಸಜೀವ ದಹನವಾಗಿದ್ದಾರೆ. ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಟ್ಟು 38 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.

ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ : ಇನ್ನೂ ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇನ್ನು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ರಾಜ್ಯ ಸಚಿವ ದಾದಾ ಭೂಸೆ ಹೇಳಿದ್ದಾರೆ.

ಇದನ್ನೂ ಓದಿ : 12 year old rapes minor :ಐದು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 12 ವರ್ಷದ ಬಾಲಕ ಅರೆಸ್ಟ್​​

ಇದನ್ನೂ ಓದಿ : kerala bus accident:ಕೇರಳದಲ್ಲಿ ಭೀಕರ ರಸ್ತೆ ಅಪಘಾತ : ಒಂಬತ್ತು ವಿದ್ಯಾರ್ಥಿಗಳ ದುರ್ಮರಣ

ಇನ್ಸ್ಟಾಗ್ರಾಂ ನಲ್ಲಿ ಲೈಕ್‌,ಕಮೆಂಟ್‌ ವಿಚಾರಕ್ಕೆ ಜಗಳ: ಇಬ್ಬರ ಕೊಲೆ

ನವದೆಹಲಿ : ಇನ್ಸ್ಟಾಗ್ರಾಂನಲ್ಲಿ ಲೈಕ್‌ ಮತ್ತು ಕಮೆಂಟ್‌ ವಿಚಾರವಾಗಿ ಆರಂಭವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಕಾರಣದಿಂದ ಅನೇಕ ಕೆಟ್ಟ ಘಟನೆಗಳು ನಮ್ಮ ಸುತ್ತಮುತ್ತಲಲ್ಲಿ ನಡೆಯುತ್ತದೆ. ಇನ್ಸ್ಟಾಗ್ರಾಂಂ‌ , ಫೇಸ್ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಸಹವಾಸದಿಂದ ಅದೆಷ್ಟೋ ಜನ ತಮ್ಮ ಜೀವ ಮತ್ತು ಜೀವನವನ್ನು ಕಳೆದುಕೊಂಡಿದ್ದಾರೆ. ಅಂತಹದೇ ಒಂದು ಘಟನೆ ನವದೆಹಲಿಯಲ್ಲಿ ನಡೆದಿದೆ. ಇನ್ಸ್ಟಾಗ್ರಾಂನಲ್ಲಿ ಲೈಕ್‌ ಮತ್ತು ಕಮೆಂಟ್‌ ವಿಚಾರವಾಗಿ ಜಗಳ ನಡೆದು ಇಬ್ಬರು ಕೊಲೆಯಾದ ಘಟನೆಯೊಂದು ನಡೆದಿದೆ.

ಸಾಮಾಜಿಕ ಜಾಲತಾಣವಾಗಿರುವ ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಮಹಿಳೆ ವಿಚಾರವಾಗಿ ದೆಹಲಿ ಹೊರಭಾಗದ ಭಾಲ್ಸ್ವಾ ಡೈರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಮುಕುಂದಪುರ ಭಾಗ-2 ಪ್ರದೇಶದಲ್ಲಿ ಮಹಿಳೆಯು ತನ್ನನ್ನು ಭೇಟಿ ಮಾಡುವುದಾಗಿ ಇಬ್ಬರಿಗೂ ತಿಳಿಸಿದ್ದಳು. ಆದರೆ ಆ ಸ್ಥಳಕ್ಕೆ ಇಬ್ಬರು ವ್ಯಕ್ತಿಗಳು ಬಂದಾಗ ಅವರಿಬ್ಬರ ಮೇಲೆ ಹಲ್ಲೆ ನಡೆದಿದೆ. ಅನೇಕ ಬಾರಿ ಅವರನ್ನು ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಇಬ್ಬರು ಒದ್ದಾಡುತ್ತಿದ್ದರು . ಅರೋಪಿಗಳು ಚಾಕುವಿನಿಂದ ಇಬ್ಬರಿಗೆ ಇರಿಯುವ ಮೊದಲೇ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ.

BUS FIRE ACCIDENT 11 Dead, 38 Injured As Bus Catches Fire In Maharashtra’s Nashik

Comments are closed.