By Election Result  : 7 ವಿಧಾನಸಭೆಗೆ ನಡೆದ ಉಪಚುನಾವಣೆ ಫಲಿತಾಂಶ.. ನಾಲ್ಕು ಕಡೆ ಬಿಜೆಪಿ ಗೆಲುವು

ನವದೆಹಲಿ : By Election Result  ದೇಶದ ಐದು ರಾಜ್ಯಗಳಲ್ಲಿ ನಡೆದ ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಭಾನುವಾರ ಪ್ರಕಟವಾಗಿರುವ ಫಲಿತಾಂಶದಲ್ಲಿ 7 ವಿಧಾನಸಭೆ ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಬಿಜೆಪಿ ಗೆಲುವು ತನ್ನದಾಗಿಸಿಕೊಂಡಿದೆ.

ಹರಿಯಾಣದ ಒಂದು ಕ್ಷೇತ್ರವಾದ ಅದಾಂಪುರ, ಬಿಹಾರದ ಎರಡು ಕ್ಷೇತ್ರಗಳಾದ ಗೋಪಾಲ್ ಗಂಜ್ ಮತ್ತು ಮೋಕಾಮಾ, ಉತ್ತರ ಪ್ರದೇಶದ ಗೋಲಾ ಗೋಕರ್ಣನಾಥ್, ತೆಲಂಗಾಣದ ಮುನಗೋಡೇ, ಮಹಾರಾಷ್ಟ್ರದ ಪೂರ್ವ ಅಂಧೇರಿ, ಓಡಿಶಾದ ಧಾಮ್ ನಗರದ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.

ಈ ಐದು ರಾಜ್ಯಗಳ ಏಳು ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದ ಗೋಲಾ ಗೋಕರ್ಣನಾಥ, ಹರಿಯಾಣದ ಆದಂಪುರ, ಬಿಹಾರದ ಗೋಪಾಲ್‌ಗಂಜ್ ಮತ್ತು ಒಡಿಶಾದ ಧಾಮ್‌ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ರಚನೆ ಆದ್ಮೇಲೂ ಕೇಸರಿ ಪಡೆಗೆ ಭಾರಿ ಮುಖಭಂಗವಾಗಿದ್ದು, ಪೂರ್ವ ಅಂಧೇರಿ ವಿಧಾನಸಭಾ ಕ್ಷೇತ್ರದಲ್ಲಿ ಉದ್ಧವ್ ಠಾಕ್ರೆ ಅವರ ಬಣದ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ಬಿಹಾರದ ಮೊಕಾಮಾದಲ್ಲಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಗೆಲುವು ಸಾಧಿಸಿದೆ. ತೆಲಂಗಾಣದ ಮುನುಗೋಡೆಯಲ್ಲಿ  ಕೆ ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಏಳು ಸ್ಥಾನಗಳಲ್ಲಿ ಬಿಜೆಪಿ ಮೂರು, ಕಾಂಗ್ರೆಸ್ ಎರಡು, ಶಿವಸೇನೆ ಮತ್ತು ಆರ್‌ಜೆಡಿ ತಲಾ ಒಂದನ್ನು ಪಡೆದಿವೆ.

ಅಕ್ರಮವಾಗಿ ಬಂದೂಕು ಇಟ್ಟುಕೊಂಡ ಆರೋಪದಡಿ ಅನರ್ಹಗೊಂಡಿದ್ದ ಅನಂತ್ ಸಿಂಗ್ ಅವರ ಪತ್ನಿ ಆರ್ ಜೆಡಿ ಅಭ್ಯರ್ಥಿ ನೀಲಮ್ ದೇವಿ ಬಿಹಾರದ ಮೊಕಾಮಾದಲ್ಲಿ ಗೆಲುವು ಸಾಧಿಸಿದ್ದಾರೆ. ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ತವರು ಜಿಲ್ಲೆ ಗೋಪಾಲ್‌ಗಂಜ್‌ನಲ್ಲಿ ಬಿಜೆಪಿ ಅಲ್ಪ ಗೆಲುವು ದಾಖಲಿಸಿದೆ. ನಿತೀಶ್ ಕುಮಾರ್ ಅವರು ಬಿಜೆಪಿಯನ್ನು ತ್ಯಜಿಸಿದ ನಂತರ ತೇಜಸ್ವಿ ಯಾದವ್ ಅವರ ಆರ್‌ಜೆಡಿಯೊಂದಿಗೆ ಜೆಡಿಯು ಮೈತ್ರಿಯಲ್ಲಿ ನಡೆದ ಮೊದಲ ಸ್ಪರ್ಧೆ ಇದಾಗಿತ್ತು.

ಇದನ್ನೂ ಓದಿ : ಅಲ್ಲಿ ಹಳ್ಳಿ ಹುಡುಗಿ ಲೀಲಾ, ಇಲ್ಲಿ ಮಾಡರ್ನ್ ಲೈಲಾ: ಇದು ಕಾಂತಾರ ಸಪ್ತಮಿ ಹಾಟ್ ಪೋಟೋಸ್

ಇದನ್ನೂ ಓದಿ : Suryakumar 1000 runs : 550 ಎಸೆತಗಳಲ್ಲಿ 1026 ರನ್, T20Iನಲ್ಲಿ ಒಂದೇ ವರ್ಷ ಸಾವಿರ ರನ್ ಸರದಾರನಾದ ಸೂರ್ಯ

ಇದನ್ನೂ ಓದಿ : Tanzania Plane Crash : ತಾಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ವಿಮಾನ ಪತನ

By Election Result  BJP Wins 4 Key Polls But Loses To KCR, Blow For Team Nitish

Comments are closed.