Ramya Dhananjay | ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ ರಮ್ಯ: ಡಾಲಿ ಉತ್ತರಕಾಂಡಕ್ಕೆ ಸ್ಯಾಂಡಲ್ ವುಡ್ ಕ್ವೀನ್ ಹೀರೋಯಿನ್

Ramya Dhananjay : ದೀಪಾವಳಿ, ದಸರಾ ಮುಗಿದ ಬಳಿಕ ಸ್ಯಾಂಡಲ್ ಕ್ವೀನ್ ನಟಿ ರಮ್ಯ ಅಭಿಮಾನಿಗಳಿಗೆ ಎರಡೂ ಹಬ್ಬ ಒಮ್ಮೆಲೇ ಬಂದಷ್ಟು ಸಂಭ್ರಮದ ಸುದ್ದಿ ಸಿಕ್ಕಿದೆ. ಹೌದು ಸ್ವಾಮಿ ಮುತ್ತಿನ ಹನಿಯೇ ಸಿನಿಮಾದಿಂದ ಹೊರಗುಳಿಯುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ರಮ್ಯ ಈಗ ನಟರಾಕ್ಷಸನ ಜೊತೆ ಸೇರಿ ಉತ್ತರಕಾಂಡ ಮೂಲಕ ಭರ್ಜರಿ ಕಮ್ ಬ್ಯಾಕ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಚಂದನವನದ ಪದ್ಮಾವತಿ ನಟಿ ರಮ್ಯ, ಸ್ವಾತಿ ಮುತ್ತಿನ ಸಿನಿಮಾ ಬದಲು ಡಾಲಿ ಧನಂಜಯ್ ಸಿನಿಮಾ ಮೂಲಕ ಬಹು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾ ಮೂಲಕ ನಟಿ ರಮ್ಯ ಸ್ಯಾಂಡಲ್ ವುಡ್ ಗೆ ಮರಳಲಿದ್ದಾರೆ. ಸದ್ದಿಲ್ಲದೇ ಈ ಸಿನಿಮಾ ಮುಹೂರ್ತ ನೆರವೇರಿದೆ. ಉತ್ತರಕಾಂಡ ಸಿನಿಮಾ ಘೋಷಣೆಯನ್ನು ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತಗೊಳಿಸಿದ್ದಾರೆ. ಈ ಬಗ್ಗೆ ವಿವರವಾಗಿ ಡಾಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಒಂದೇ ದಿಕ್ಕಿನಲ್ಲಿ ಆಲೋಚಿಸುವವರು ಒಟ್ಟಿಗೆ ಸೇರಿ ನಿಸ್ವಾರ್ಥವಾಗಿ ಸಿನಿಮಾಕ್ಕಾಗಿ ಒಬ್ಬರು ಇನ್ನೊಬ್ಬರಿಗಾಗಿ ಕಾಂಟ್ರಿಬ್ಯೂಟ್ ಮಾಡಿದಾಗ ಅದ್ಭುತಗಳು ಸಂಭವಿಸುತ್ತವೇ ಎಂದು ನಂಬಿದವನು ನಾನು. ಅದೇ ರೀತಿ ಆಗಿದ್ದು,ಮೈಲಿಗಲ್ಲಾಗಿದ್ದು, ರತ್ನನ್ ಪ್ರಪಂಚ. ರೋಹಿತ್ ಪದಕಿಯಂತಹ ನಿರ್ದೇಶಕ ಹಾಗೂ ಕಾರ್ತೀಕ್ ಯೋಗಿಯಂತಹ ನಿರ್ಮಾಪಕರ ಜೊತೆ ಸತತವಾಗಿ ಮೂರನೆ ಪ್ರಯತ್ನ. ಇನ್ನೊಂದು ಮೈಲಿಗಲ್ಲಿನ ಕಡೆ ಮತ್ತೊಂದು ದಿಟ್ಟ ಹೆಜ್ಜೆ ಉತ್ತರಾಕಾಂಡ ಎಂದು ಧನಂಜಯ್ ಬರೆದಿದ್ದಾರೆ.

ಮಾತ್ರವಲ್ಲ, ಹಾಗೇ ಸ್ಯಾಂಡಲ್ ವುಡ್ ಕ್ವೀನ್ ಜೊತೆ ಸ್ಕ್ರೀನ್ ಶೇರ್ ಮಾಡುವ ಕನಸು ಈ ಸಿನಿಮಾದ ಮೂಲಕ ಕೈಗೂಡುತ್ತಿದೆ ಎಂಬುದು ಇನ್ನೊಂದು ಖುಷಿಯ ವಿಚಾರ ಎಂದು ಬರೆದಿದ್ದಾರೆ. ಇದರೊಂದಿಗೆ ಸರಳವಾಗಿ ನಡೆದ ಉತ್ತರಕಾಂಡ ಸಿನಿಮಾ ಮುಹೂರ್ತದ ಪೋಟೋವನ್ನು ಧನಂಜಯ್ ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿದ್ದಾರೆ. ಉತ್ತರಕಾಂಡ ಸಿನಿಮಾದ ಮುಹೂರ್ತ ದಲ್ಲಿ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಹೊಂಬಾಳೆ ಫಿಲ್ಸ್ಮ್ ನ ವಿಜಯ್ ಕಿರಂಗದೂರು ಸೇರಿದಂತೆ ಹಲವು ಸಿನಿರಂಗದ ಗಣ್ಯರು ಪಾಲ್ಗೊಂಡಿದ್ದರು.

ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾದ ಶೂಟಿಂಗ್ ವೇಳೆ ಶೂಟಿಂಗ್ ಸೆಟ್ ಗೆ ನಟಿ ರಮ್ಯ ಭೇಟಿ ಕೊಟ್ಟಿದ್ದರು. ಮಾತ್ರವಲ್ಲ ಹೆಡ್ ಬುಷ್ ಸಿನಿಮಾದ ಇವೆಂಟ್ ನಲ್ಲೂ ರಮ್ಯ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದು, ಈಗ ನಟಿ ರಮ್ಯ ಡಾಲಿಗೆ ಸ್ಕ್ರಿನ್ ಮೇಲೆ ಜೊತೆಯಾಗಿ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.

ಇದನ್ನೂ ಓದಿ : Rocking star Yash‌ : ಕಾಂತಾರ ನನ್ನದೇ ಸಿನಿಮಾ : ಯಶ್ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ

ಇದನ್ನೂ ಓದಿ : ಅಲ್ಲಿ ಹಳ್ಳಿ ಹುಡುಗಿ ಲೀಲಾ, ಇಲ್ಲಿ ಮಾಡರ್ನ್ ಲೈಲಾ: ಇದು ಕಾಂತಾರ ಸಪ್ತಮಿ ಹಾಟ್ ಪೋಟೋಸ್

Sandalwood Queen Ramya Re Entry Dhananjay Movie Uttarakaanda

Comments are closed.