ಪೊಲೀಸರ ಮೇಲೆ ಗುಂಡು ಹಾರಾಟ ಪ್ರಕರಣ : ಶಾರುಖ್ ಪಟಾನ್ ಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಸಿಎಎ ಸಂಬಂಧ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದ ಮುಖ್ಯ ಆರೋಪಿ ಶಾರುಖ್ ಪಟಾನ್ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ಜಸ್ಟಿಸ್ ಸುರೇಶ್ ಕೈಟ್ ಅವರಿದ್ದ ಏಕ ಸದಸ್ಯಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ದೆಹಲಿಯ ಜಫ್ರಾಬಾದ್ ನಲ್ಲಿ 2020ರಲ್ಲಿ ಸಿಎಎ ವಿರುದ್ಧ ಹೋರಾಟದಲ್ಲಿ ಶಾರುಖ್ ಪಟಾನ್ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಗುಂಡು ಹಾರಿಸಿದ ಆರೋಪಕ್ಕೆ ಒಳಗಾಗಿದ್ದಾನೆ.

ಈ ಮೊದಲು ದೆಹಲಿಯ ಕಾರ್ಕ ಧೂಮ್ ಜಿಲ್ಲಾ ನ್ಯಾಯಾಲಯ ಆರೋಪಿಗೆ ಜಾಮೀನು ತಿರಸ್ಕರಿಸಿತ್ತು. ನಂತರ ಆರೋಪಿ ದೆಹಲಿ ಹೈಕೋರ್ಟಿನ ಕದ ತಟ್ಟಿದ್ದ. ಈಗ ದೆಹಲಿ ಹೈಕೋರ್ಟ್  ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಕಳೆದ ವರ್ಷ 2020ರಲ್ಲಿ ಫೆಬ್ರವರಿ 24ರಂದು ಶಾರುಖ್ ಪಟಾನ್ ಗಲಭೆ ನಡೆದ ಸ್ಥಳದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಗುಂಡು ಹಾರಿಸಿದ್ದ ಪ್ರಕರಣ ಇದಾಗಿದೆ.

Comments are closed.