Carbon dating of a Shivling: ಜ್ಞಾನವಾಪಿ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆಯ ಅರ್ಜಿಗೆ ಸಮ್ಮತಿ

ವಾರಾಣಸಿ : Carbon dating of a Shivling ಜ್ಞಾನವಾಪಿ ಮಸೀದಿಯೋ ಮಂದಿರವೋ ಅನ್ನೋ ವಿಚಾರದಲ್ಲಿ ಹಿಂದೂ ಸಂಘಟನೆಗಳಿಗೆ ಮತ್ತೊಮ್ಮೆಮೇಲು ಗೈ ಆಗಿದೆ. ಮಸೀದಿಯಲ್ಲಿ ಪತ್ತೆಯಾಗಿದ್ದ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನ ವಾರಾಣಸಿ ಜಿಲ್ಲಾ ಕೋರ್ಟ್ ಒಪ್ಪಿಕೊಂಡಿದೆ.

ಸೆಪ್ಟೆಂಬರ್ 12ರಂದು ಐವರು ಮಹಿಳೆಯರು ಮಸೀದಿಯ ಆವರಣದಲ್ಲಿ ಶೃಂಗಾರ ಗೌರಿ ಮೂರ್ತಿಗೆ ಪೂಜೆ ಸಲ್ಲಿಸಲು ಸಲ್ಲಿಸಲು ಅರ್ಜಿಯನ್ನ ವಿಚಾರಣೆಗೆ ಯೋಗ್ಯ ಎಂದು ವಾರಾಣಸಿ ಜಿಲ್ಲಾಕೋರ್ಟ್ ನ್ಯಾಯಧೀಶ ಎ.ಕೆ.ವಿಶ್ವೇಶ್ವ ಅವರಿದ್ದ ಪೀಠ ಆದೇಶ ನೀಡಿತ್ತು. ಅಲ್ಲದೆ ಸೆಪ್ಟೆಬರ್ 22ಕ್ಕೆ ವಿಚಾರಣೆ ನಡೆಸೋದಾಗಿ ಪ್ರಕರಣವನ್ನ ಮೂಂದೂಡಿತ್ತು. ಗುರುವಾರ ಕೋರ್ಟ್ನಲ್ಲಿ ಹಿಂದೂ ಸಂಘಟನೆಗಳಿಂದ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗ ಕಾರ್ಬನ್ ಡೇಟಿಂಗ್ ಪರೀಕ್ಷೆಯ ಬಗ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಅರ್ಜಿಯನ್ನಕೋರ್ಟ್ ಸ್ವೀಕರಿಸಿದೆ. ಮಸೀದಿಯ ಹೊರ ಗೋಡೆಯ ಮೇಲಿರುವ ಹಿಂದೂ ದೇವತೆಗಳ ವಿಗ್ರಹಗಳನ್ನು ಪ್ರತಿನಿತ್ಯ ಪೂಜಿಸಲು ನ್ಯಾಯಾಲಯದ ಅನುಮತಿಯನ್ನು ಅರ್ಜಿಯಲ್ಲಿ ಕೋರಲಾಗಿದ್ದು,ಮಹಿಳೆಯರ ಪರವಾಗಿ ಹಾಜರಾದ ವಕೀಲ ವಿಷ್ಣು ಶಂಕರ್ ಜೈನ್ ಅವರು “ಶಿವಲಿಂಗ” ದ ಕಾರ್ಬನ್-ಡೇಟಿಂಗ್ ಪರೀಕ್ಷೆಯ ಅರ್ಜಿಯನ್ನ ನ್ಯಾಯಾಲಯದ ಮುಂದೆ ಇರಿಸಿದರು. ಮುಂದಿನ ವಿಚಾರಣೆಯ ದಿನಾಂಕದೊಳಗೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಮಸೀದಿ ಆಡಳಿತವನ್ನು ಕೇಳಿದೆ. ಜೊತೆಗೆ ಜ್ಞಾನವಾಪಿ ಮಸೀದಿಯ ಶೃಂಗಾರ ಗೌರಿ ಮೂರ್ತಿ ಪೂಜೆಗೆ ಸಂಬಂಧಿಸಿದ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮೂಂದೂಡಿ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಆದೇಶಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ವಾರಾಣಸಿ ಜಿಲ್ಲಾಕೋರ್ಟ್ ಆದೇಶದಂತೆ ಮಸೀದಿಯಲ್ಲಿ ವಿಡಿಯೋ ಸರ್ವೆ ನಡೆಸಲಾಗಿತ್ತು. ಈ ವೇಳೆ  ಮಸೀದಿ ಆವರಣದಲ್ಲಿ ನಮಾಜ್ ಮಾಡುವ ಮೊದಲು ಮುಸ್ಲಿಮರು ಕೈ ಕಾಲು ತೊಳೆಯಲು ಬಳಸುತ್ತಿದ್ದ ವಜೂಖಾನಾ ಸ್ಥಳದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಜೊತೆಗೆ ಮಸೀದಿಯಲ್ಲಿ ಹಿಂದೂ ದೇವಾಲಯದ ರೀತಿಯಲ್ಲೇ ಉಬ್ಬು ಕೆತ್ತನೆಗಳು ಕಂಡು ಬಂದಿದ್ವು. ಆದ್ರೆ,ಮಸೀದಿಯಲ್ಲಿ ಪತ್ತೆಯಾಗಿದ್ದ ಶಿವಲಿಂಗದ ಸ್ಥಳವನ್ನ ಮಸೀದಿ ಆಡಳಿತ ಮಂಡಳಿ ಅಲ್ಲಗಳೆದಿತ್ತು. ಅದು ಶಿವಲಿಂಗವಲ್ಲ ಕೈ ಕಾಲು ತೊಳೆದುಕೊಳ್ಳಲು ಬಳಸ್ತಿದ್ದಕಾರಂಜಿಯ ವ್ಯವಸ್ಥೆಯ ಭಾಗವಾಗಿದೆ ಅಂತಾ ಹೇಳಿತ್ತು. ಹೀಗಾಗಿ ಹಿಂದೂ ಸಂಘಟನೆಗಳು ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒತ್ತಾಯಿಸಿದ್ರು.

ಕಾರ್ಬನ್ ಡೇಟಿಂಗ್ ಪರೀಕ್ಷೆ ಎಂದರೇನು : ಕಾರ್ಬನ್ ಡೇಟಿಂಗ್ ಪರೀಕ್ಷೆ ಎನ್ನುವುದು ರಸಾಯನ ಶಾಸ್ತ್ರದ ಒಂದು ಭಾಗವಾಗಿದೆ. ಯಾವುದೇ ಜೀವಿ ಜೀವಂತವಾಗಿರಲು ಆಮ್ಲಜನಕ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಇಂಗಾಲದ ಡೈಆಕ್ಸೈಡ್. ಒಮ್ಮೆ ಜೀವಿಯು ನಿರ್ಜಿವಿಯಾದ್ರೆ ಆಮ್ಲಜನಕವನ್ನ ಸ್ವೀಕರಿಸೋದನ್ನ ಬಿಟ್ಟು ಬಿಡುತ್ತದೆ. ಆದ್ರೆ ನಿರ್ಜಿವಿಯಲ್ಲಿ ಇಂಗಾಲದ ಪ್ರಮಾಣ ಇದ್ದೆ ಇರುತ್ತದೆ. ಕಲ್ಲು, ಕಟ್ಟಿಗೆ, ಇದ್ದಿಲು, ಸೇರಿದಂತೆ ಅನೇಕ ಲೋಹಗಳಲ್ಲಿ ಕಾರ್ಬನ್ ಪ್ರಮಾಣ ವರ್ಷಗಳ ವರೆಗೆ ಇದ್ದೇ ಇರುತ್ತದೆ. ಮತ್ತು ಅದು ಕ್ರಮೇಣ ಕಡಿಮೆ ಆಗುತ್ತಾ ಹೋಗುತ್ತದೆ. ಹೀಗಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆ ವೇಳೆ ಆಯಾ ವಸ್ತುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಇಂಗಾಲ ಇರುತ್ತದೆಯೋ ಅದರ ಆಧಾರದ ಮೇಲೆ ಆ ವಸ್ತು ಎಷ್ಟು ವರ್ಷ ಹಳೆಯದು ಅಂತಾ ನಿರ್ಧರಿಸಲಾಗುತ್ತದೆ. ಈ ಪರೀಕ್ಷಾ ಪದ್ಧತಿಯನ್ನ 1940ರ ದಶಕದಲ್ಲಿ ರಾಸಾಯನ ವಿಜ್ಞಾನಿ ವಿಲರ್ಡ್ ಲಿಬಿ ಅವರು ಸಂಶೋಧಿಸಿದ್ರು, ವಿಲರ್ಡ್ ಲಿಬಿ ಅವರಿಗೆ 1960ರಲ್ಲಿ ನೊಬೆಲ್ ಪಾರಿತೋಷಕ ದೊರೆಯಿತು. ಆದ್ರೆ ಕಾರ್ಬನ್ ಡೇಟಿಂಗ್ ಪದ್ಧತಿಯಿಂದ 50,000 ವರ್ಷಗಳಿಗಿಂತ ಹಿಂದಿನ ಆರ್ಗಾನಿಕ್ ವಸ್ತುಗಳ ವಯಸ್ಸನ್ನು ಕಂಡುಹಿಡಿಯಲು ಸಾಧ್ಯವಿಲ್ಲ ಎನ್ನಲಾಗಿದೆ.

ಇದನ್ನೂ ಓದಿ PFI leaders arrested :ಎನ್ ಐಎಯಿಂದ ಬಂಧನಕ್ಕೊಳಗಾದ ಪಿಎಫ್ಐ ನಾಯಕರನ್ನು 24 ಗಂಟೆಯೊಳಗೆ ಬಿಡದಿದ್ದರೆ ಉಗ್ರ ಹೋರಾಟ

ಇದನ್ನೂ ಓದಿ HD Deve Gowda :‘ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲೇ ಪಕ್ಷದ ಕಚೇರಿಗೆ ಭೇಟಿ ನೀಡುವೆ’ : ಮಾಜಿ ಪ್ರಧಾನಿ ಹೆಚ್​ಡಿಡಿ

Carbon dating of a Shivling Court Admits Plea For Carbon-Dating ‘Shivling’ In Gyanvapi Case

Comments are closed.