ಸಿಡಿಎಸ್ ಜನರಲ್ ಬಿಪಿನ್ ರಾವತ್(Bipin Rawat’s Helicopter Crash) ಹಾಗೂ ಇತರೆ 13 ಮಂದಿಯನ್ನು ಹೊತ್ತು ಸಾಗುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಕುನೂರ್ನಲ್ಲಿ ಪತನಗೊಳ್ಳುತ್ತಿರುವ 19 ಸೆಕೆಂಡ್ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ ರೈಲ್ವೆ ಹಳಿ ಬಳಿ ಇರುವ ಜನರ ಗುಂಪು ಕೆಳಗೆ ಬರುತ್ತಿದ್ದ ಹೆಲಿಕಾಪ್ಟರ್ನ್ನು ಕುತೂಹಲದಿಂದ ವೀಕ್ಷಿಸುತ್ತಿರೋದನ್ನು ಕಾಣಬಹುದಾಗಿದೆ. ಜನರು ನೋಡ ನೋಡುತ್ತಿದ್ದಂತೆಯೇ ಎಂಐ 17 ಚಾಪರ್ ದಟ್ಟವಾದ ಮಂಜಿನ ಒಳಗೆ ಕಣ್ಮರೆಯಾಗಿದೆ. ಚಾಪರ್ನ ಎಂಜಿನ್ ಶಬ್ಧ ಕೂಡ ಮೌನವಾಗಿದೆ. ಬಹುಶಃ ಈ ಹೊತ್ತಿಗೆ ಚಾಪರ್ನ ಪತನವಾಗಿರುವ ಸಾಧ್ಯತೆ ಇರಬಹುದು.
ವಿಡಿಯೋದಲ್ಲಿರುವ ಜನರು ಏನಾಯ್ತು..? ಹೆಲಿಕಾಪ್ಟರ್ ಪತನಗೊಂಡಿತೇ..? ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರೋದನ್ನು ಗಮನಿಸಬಹುದಾಗಿದೆ.ಆದರೆ ಈ ವಿಡಿಯೋ ನಿಜವಾಗಿಯೂ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದ್ದೇ ಎಂಬುದರ ಬಗ್ಗೆ ಇನ್ನೂ ಭಾರತೀಯ ವಾಯುಪಡೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
#Watch Video captures #CDS Gen #BipinRawat 's chopper moments before the #crash #HelicopterCrash pic.twitter.com/l2YowoTZMW
— India.com (@indiacom) December 9, 2021
63 ವರ್ಷದ ಸಿಡಿಎಸ್ ಜನರಲ್ ಬಿಪಿನ್ ರಾವತ್ ತಮ್ಮ ಪತ್ನಿ ಹಾಗೂ ಭದ್ರತಾ ಸಿಬ್ಬಂದಿ ಜೊತೆಯಲ್ಲಿ ವೆಲ್ಲಿಂಗ್ಟನ್ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಕುನೂರ್ನ ನೀಲಗಿರಿ ಅರಣ್ಯ ಪ್ರದೇಶದ ಬಳಿ ಈ ಅವಘಡ ಸಂಭವಿಸಿದೆ. ಮರಕ್ಕೆ ಡಿಕ್ಕಿ ಹೊಡೆದ ಕಾಪ್ಟರ್ ಬಳಿಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಪಿನ್ ರಾವತ್ರನ್ನು ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ರಾವತ್ ಹುತಾತ್ಮರಾಗಿದ್ದಾರೆ. ಈ ದುರ್ಘಟನೆಯಲ್ಲಿ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಹುತಾತ್ಮರಾಗಿದ್ದಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
Video Captures CDS Gen Bipin Rawat’s Helicopter Moments Before The Crash | Watch
ಇದನ್ನು ಓದಿ : Mettupalayam : ಸೇನಾ ಕಾಪ್ಟರ್ ದುರಂತ: ಅಪಘಾತಕ್ಕೀಡಾದ ಹುತಾತ್ಮ ಯೋಧರ ಪಾರ್ಥೀವ ಶರೀರ ಸಾಗಿಸುತ್ತಿದ್ದ ಶವವಾಹನ
ಇದನ್ನೂ ಓದಿ : Varun Singh : ವೆಲ್ಲಿಂಗ್ಟನ್ನಿಂದ ಬೆಂಗಳೂರಿನ ಆಸ್ಪತ್ರೆಗೆ ವರುಣ್ ಸಿಂಗ್ ಶಿಫ್ಟ್: ತಂದೆಯಿಂದ ಅಧಿಕೃತ ಮಾಹಿತಿ