Twitter : ಭಾರತದಲ್ಲಿ ಅತಿ ಹೆಚ್ಚು ಅತಿ ಹೆಚ್ಚು ಲೈಕ್, ರಿಟ್ವೀಟ್ ಆದ ಟ್ವೀಟ್‌ಗಳಿವು

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟರ್ ಗುರುವಾರ( ಡಿಸೆಂಬರ್9) ರಂದು ಭಾರತದ ಅತಿ ಹೆಚ್ಚು ರಿಟ್ವೀಟ್ ( Most Retweeted ) ಆದ ಟ್ವೀಟ್‌ಗಳು, ಅತಿ ಹೆಚ್ಚು ಜನರು ಲೈಕ್ ಒತ್ತಿದ ಟ್ವೀಟ್, ಇಮೋಜಿಗಳ ಮಾಹಿತಿಯನ್ನು ರಿವೀಲ್ ಮಾಡಿದೆ. ಇವುಗಳಲ್ಲಿ ಭಾರತದಲ್ಲಿ ಕೋವಿಡ್-19 ಪರಿಹಾರಕ್ಕೆ ನೀಡಿದ ದೇಣಿಗೆ ಕುರಿತು ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಅವರ ಸಂದೇಶವು 2021 ರಲ್ಲಿ ದೇಶದಲ್ಲಿ ಹೆಚ್ಚು ರೀಟ್ವೀಟ್ ಮಾಡಿದ ಟ್ವೀಟ್ ಆಗಿದೆ ಎಂದು ಟ್ವಿಟರ್ ಹೇಳಿದೆ.

ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮಗಳು ಹುಟ್ಟಿದ ಟ್ವೀಟ್ ಮೋಸ್ಟ್ ಲೈಕ್ಡ್ ಟ್ವೀಟ್ ಆಗಿ ಹೊರಹೊಮ್ಮಿದೆ. ಮೋಸ್ಟ್ ರಿಟ್ವೀಟೆಡ್ ಟ್ವೀಟ್ ಆಫ್ 2021 (Most Retweeted Liked Tweets of 2021 in India) ಭಾರತದಲ್ಲಿ ಕೋವಿಡ್-19ನ ಎರಡನೇ ಅಲೆಯ ಸಮಯದಲ್ಲಿ ಟ್ವಿಟರ್‌ಅನ್ನು ಅದೆಷ್ಟೋ ಮಂದಿ ಸಹಾಯಕ್ಕಾಗಿ ಬಳಸಿದ್ದಾರೆ. ಅವರಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಅವರು ಏಪ್ರಿಲ್‌ನಲ್ಲಿ ಭಾರತದಲ್ಲಿ ಕೋವಿಡ್-19 ಪರಿಹಾರಕ್ಕಾಗಿ ತಮ್ಮ ದೇಣಿಗೆಯನ್ನು ಘೋಷಿಸಲು ಟ್ವೀಟ್ ಮಾಡಿದ್ದಾರೆ. ಅವರ ಸಂದೇಶವು 2021 ರಲ್ಲಿ ಭಾರತದಲ್ಲಿ ಹೆಚ್ಚು ರಿಟ್ವೀಟ್ ಮಾಡಿದ ಟ್ವೀಟ್ ಆಗಿದೆ, ಇದು 114000 ರಿಟ್ವಿಟ್ ಪಡೆದಿದೆ.

ಮೋಸ್ಟ್ ಲೈಕ್ಡ್ ಟ್ವಿಟ್ 2021

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಮಗಳ ಹುಟ್ಟಿದ ಖುಷಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. 5,38,200 ಲೈಕ್ಸ್ ಪಡೆದು ಮೋಸ್ಟ್ ಲೈಕ್ಡ್ ಟ್ವೀಟ್‌ ಎನಿಸಿಕೊಂಡಿದೆ. ಹಾಗೆ ಕಳೆದ ವರ್ಷ ಕೊಹ್ಲಿ, ತನ್ನ ಪತ್ನಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಕುರಿತ ಟ್ವೀಟ್ 2020 ರ ಮೋಸ್ಟ್ ಲೈಕ್ಡ್ ಟ್ವೀಟ್ ಎನಿಸಿಕೊಂಡಿದೆ. ಸರ್ಕಾರಕ್ಕೆ ಸಂಬಂಧಿಸಿದ ಟ್ವೀಟ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಲಸಿಕೆ ಕುರಿತಾದ ಟ್ವೀಟ್ 45100 ಬಾರಿ ರಿಟ್ವೀಟ್ ಪಡೆದು ಅತಿ ಹೆಚ್ಚು ರಿಟ್ವೀಟ್ ಪಡೆದಿದೆ.


ವಿಭಿನ್ನ ವಿಷಯಗಳಲ್ಲಿ ಅತಿ ಹೆಚ್ಚು ರಿಟ್ವೀಟ್ ಪಡೆದ ಟ್ವೀಟ್ ಕುರಿತು ಇಲ್ಲಿವೆ ಫುಲ್ ಡೀಟೇಲ್ಸ್

ಬ್ಯುಸಿನೆಸ್‌: ಏರ್ ಇಂಡಿಯಾವನ್ನು ಮತ್ತೆ ಟಾಟಾ ಗ್ರೂಪ್‌ಗೆ ಸೇರಿಸುವ ಕುರಿತ ರತನ್ ಟಾಟಾ ಟ್ವೀಟ್ 82900 ರಿಟ್ವೀಟ್ ಹಾಗೂ 403900 ಲೈಕ್ಸ್ ಪಡೆದಿದೆ
ಮನರಂಜನೆ: ತಮಿಳ್ ಸಿನೆಮ ನಟ ವಿಜಯ್ ತಮ್ಮ ಬಿಸ್ಟ್ ಸಿನೆಮಾ ಪೋಸ್ಟರ್ ಮಾಡಿದ್ದರು. 139400 ರಿಟ್ವೀಟ್ ಹಾಗೂ 341500 ಲೈಕ್ಸ್ ಪಡೆದಿದೆ.
ಕ್ರೀಡೆ: ಧೋನಿಯ ಮ್ಯಾಚ್ ವಿನ್ನಿಂಗ್ ಕುರಿತು ಕೊಹ್ಲಿ ಮಾಡಿದ ಟ್ವೀಟ್ 91600 ರಿಟ್ವೀಟ್ ಹಾಗೂ 529590 ಲೈಕ್ಸ್ ಪಡೆದಿದೆ.

2021ರ ಮೋಸ್ಟ್ ಟ್ವೀಟೆಡ್ ಹಾಷ್ ಟ್ಯಾಗ್

2021 ರಲ್ಲಿ ಕೋವಿಡ್ ಸಂಕಷ್ಟ ಎದುರಾದ್ದರಿಂದ ಹೆಚ್ಚಿನ ಜನ #ಕೋವಿಡ್19 (#covid19 ) ಬಳಸಿದ್ದಾರೆ. ನಂತರದ ಸ್ಥಾನದಲ್ಲಿ #ಫಾರ್ಮೇರ್ಸ್ ಪ್ರೊಟೆಸ್ಟ್ ( #farmers protest) #ಟೀಮ್ ಇಂಡಿಯಾ ( #teamindia) ಇವೆ.

ಮೋಸ್ಟ್ ಟ್ವೀಟೆಡ್ ಇಮೋಜಿ

ನಮಸ್ಕರಿಸುತ್ತಿರುವ ಕೈಗಳು(🙏) ಇಮೋಜಿ ಅತೀ ಹೆಚ್ಚು ಬಳಸಲ್ಪಟ್ಟ ಇಮೋಜಿ ಆಗಿದೆ. ನಂತರದ ಸ್ಥಾನಗಳಲ್ಲಿ ನಗು (😂)ಹಾಗು ಬೆಂಕಿ ಇಮೋಜಿಗಳು ಬಳಸಲ್ಪಟ್ಟಿವೆ.
ಈ ಸ್ಥಾನವನ್ನು ಜನವರಿ 2021 ರಿಂದ ನವೆಂಬರ್ 15 2021 ರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಟ್ವೀಟ್ ಗಮನಿಸಿ ನೀಡಲಾಗಿದೆ.

ಇದನ್ನೂ ಓದಿ : RRR Trailer Twitter Review: ಆರ್‌ಆರ್‌ಆರ್‌ ದೃಶ್ಯ ಕಥನ ವೈಭವ; ಟ್ರೇಲರ್ ಹುಟ್ಟಿಸಿದ ರೋಚಕತೆ; ಇಲ್ಲಿದೆ ಟ್ವಿಟರ್ ರಿವ್ಯೂ

ಇದನ್ನೂ ಓದಿ : Gmail Voice Call: ಜೀಮೇಲ್‌ನಲ್ಲಿ ಇದೀಗ ಕರೆ ಮಾಡಬಹುದು, ಹೇಗೆ ಎಂದು ತಿಳಿದು ನೀವೂ ಪ್ರಯತ್ನಿಸಿ

(Twitter Reveals Most Retweeted Liked Tweets of 2021 in India Folded Hands Most Tweeted Emoji)

Comments are closed.