ಗರ್ಭಕಂಠ ಕ್ಯಾನ್ಸರ್​ ವಿರುದ್ಧ ಕೇಂದ್ರದ ಸಮರ : ಹದಿಹರೆಯದ ಬಾಲಕಿಯರಿಗೆ ಉಚಿತ HPV ಲಸಿಕೆ

HPV Vaccination : ನವದೆಹಲಿ: 2024ರ ಕೇಂದ್ರ ಬಜೆಟ್​ನಲ್ಲಿ ಮಾಡಿರುವ ಘೋಷಣೆಯಂತೆಯೇ ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಗೈಯ್ಯಲು ಸಜ್ಜಾಗಿದೆ. ಗರ್ಭಕಂಠ ಕ್ಯಾನ್ಸರ್​ ತಡೆಗಾಗಿ ಕೇಂದ್ರ ಸರ್ಕಾರವು 14 ವರ್ಷದ ಒಳಗಿನ ಬಾಲಕಿಯರಿಗೆ ಉಚಿತ ಹೂಮನ್ ಪ್ಯಾಪಿಲೋಮವೈರಸ್ ಕ್ಯಾನ್ಸರ್​ ಲಸಿಕೆ ನೀಡಲು ಮುಂದಾಗಿದೆ.

2027ರ ವೇಳೆಗೆ 2.6 ಕೋಟಿ ಡೋಸ್​ ಲಸಿಕೆಗಳನ್ನು ನೀಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಲಸಿಕಾ ಅಭಿಯಾನ ಆರಂಭಗೊಳ್ಳಲಿದೆ. ಜಾಗತಿಕ ಲಸಿಕಾ ಒಕ್ಕೂಟ ಗವಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಸರ್ಕಾರವು ಮೆರ್ಕ್​ ಕಂಪನಿಯ ಗಾರ್ಡಾಸಿಲ್​ ಲಸಿಕೆಗಳನ್ನು ಹದಿಹರೆಯದ ಬಾಲಕಿಯರಿಗೆ ನೀಡಲಿದೆ.

ಇದನ್ನೂ ಓದಿ: ಸರ್ಕಾರದ ವಿರುದ್ಧ ವೈದ್ಯರ ಸಮರ : ಮಾರ್ಚ್​ 11ರಂದು ರಾಜ್ಯಾದ್ಯಂತ ವೈದ್ಯರ ಮುಷ್ಕರ

ಈಗಾಗಲೇ ಜಗತ್ತಿನ 160ಕ್ಕೂ ಅಧಿಕ ದೇಶಗಳು ಗರ್ಭಕಂಠದ ಕ್ಯಾನ್ಸರ್​ ವಿರುದ್ಧದ ಲಸಿಕೆಗಳನ್ನು (HPV Vaccination ) ತಮ್ಮ ರಾಷ್ಟ್ರೀಯ ಲಸಿಕಾ ವೇಳಾಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಸ್ತನಕ್ಯಾನ್ಸರ್​ ಬಳಿಕ ಅತೀ ಹೆಚ್ಚು ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್​ ಇದಾಗಿದ್ದು ಗರ್ಭಕಂಠ ಕ್ಯಾನ್ಸರ್​ಮುಕ್ತ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪಣತೊಟ್ಟಿದೆ.

Aslo Read : ನಾಯಿ ನೆಕ್ಕುವುದರಿಂದ ಪ್ರಾಣಕ್ಕೆ ಕುತ್ತು ಬರಬಹುದು ಎಚ್ಚರ ! ಏನಿದು ‘Dog Lick Sepsis’? ಲಕ್ಷಣ ಮತ್ತು ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories