FCRA LICENCE CANCEL: ದೀಪಾವಳಿ ಹೊಸ್ತಿಲಲ್ಲೇ ಸೋನಿಯಾ ಗಾಂಧಿ ಕುಟುಂಬಕ್ಕೆ ಕೇಂದ್ರದಿಂದ ಬಿಗ್ ಶಾಕ್..!

ನವದೆಹಲಿ : (FCRA LICENCE CANCEL): ಸೋನಿಯಾ ಗಾಂಧಿ ಕುಟುಂಬಕ್ಕೆ ಕೇಂದ್ರದ ಮೋದಿ ಸರ್ಕಾರದ ಬಿಗ್ ಶಾಕ್ ನೀಡಿದೆ. ಸರ್ಕಾರೇತರ ಸಂಸ್ಥೆ ಆಗಿರುವ ರಾಜೀವ್‍ಗಾಂಧಿ ಚಾರಿಟೇಬಲ್ ಟ್ರಸ್ಟ್ (Rajiv Gandhi Foundation- RGF)ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(Foreign Contribution Regulation Act- FCRA)ಯ ಪರವಾನಿಗೆಯನ್ನು ಕೇಂದ್ರ ಗೃಹ ಇಲಾಖೆ ರದ್ದುಗೊಳಿಸಿದೆ.

ವಿದೇಶಗಳಿಂದ ದೇಣಿಗೆ ಸಂಗ್ರಹಿಸುವ ವೇಳೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಕೇಂದ್ರ ಸರ್ಕಾರವು RGF ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೀಡಿದ್ದ ಲೈಸೆನ್ಸ್ ರದ್ದು ಮಾಡಿದೆ. ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಪ್ರಭಾವಿ ಮನೆತನ ಎಂದೇ ಗುರುತಿಸಿಕೊಂಡಿರುವ ಗಾಂಧಿ ಕುಟುಂಬದ ಜೊತೆಗೆ ಈ ಪ್ರತಿಷ್ಠಾನವು ಉತ್ತಮ ಸಂಬಂಧವನ್ನು ಹೊಂದಿದೆ.

2020ರ ಜುಲೈನಲ್ಲಿ ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ತನಿಖಾ ಸಮಿತಿ ವಿಚಾರಣೆಯ ಆಧಾರದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಕಳೆದ 2 ವರ್ಷಗಳ ಹಿಂದೆ ಕೇಂದ್ರ ಗೃಹ ಇಲಾಖೆಯು ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿತ್ತು. ಈ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಪ್ರತಿಷ್ಠಾನಕ್ಕೆ ನೀಡಿದ್ದ ಪರವಾನಿಗೆಯನ್ನು ರದ್ದು ಮಾಡಲಾಗಿದೆ.

ಟ್ರಸ್ಟ್ ನ FCRI ಲೈಸೆನ್ಸ್ ರದ್ದು ಮಾಡಿರುವ ಮಾಹಿತಿಯನ್ನು ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕಳುಹಿಸಿಕೊಡಲಾಗಿದೆ. ಆದರೆ ಈ ಬಗ್ಗೆ RGF ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಸಂಸತ್ ಸದಸ್ಯರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸದಸ್ಯರಾಗಿದ್ದಾರೆ.

1991ರಲ್ಲಿ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಗೊಂಡಿತ್ತು. ಅಂದಿನಿಂದ 2009ರವರೆಗೆ ವಿಜ್ಞಾನ ತಂತ್ರಜ್ಞಾನ, ಆರೋಗ್ಯ, ಮಹಿಳೆಯರು ಮತ್ತು ಮಕ್ಕಳು, ಅಂಗವೈಕಲ್ಯರಿಗೆ ನೆರವು ಸೇರಿದಂತೆ ಹಲವು ಜನಪರ ಕೆಲಸಗಳನ್ನು ಮಾಡಿತ್ತು. 2010ರ ಬಳಿಕ ಈ ಟ್ರಸ್ಟ್ ಕೇವಲ ಶಿಕ್ಷಣ ಕೇತ್ರಕ್ಕೆ ಒತ್ತು ನೀಡುತ್ತಾ ಬಂದಿದೆ.

ಇದನ್ನೂ ಓದಿ: Karnataka yellow alert : ದೀಪಾವಳಿ ಹೊತ್ತಲೇ ಆರ್ಭಟಿಸಲಿದೆ ಮಳೆ : ಕರ್ನಾಟಕದಲ್ಲಿ 2 ದಿನ ಯೆಲ್ಲೋ ಅಲರ್ಟ್

ಇದನ್ನೂ ಓದಿ: A terrible fire disaster : ಮನೆಯಲ್ಲಿ ಭೀಕರ ಅಗ್ನ ದುರಂತ : ನಿವೃತ್ತ ಐಪಿಎಸ್‌ ಅಧಿಕಾರಿ ಸಾವು ; ಪತ್ನಿ,ಮಗ ಗಂಭೀರ

Centre cancels FCRA licence of Rajiv Gandhi Foundation headed by Sonia Gandhi

Comments are closed.