A terrible fire disaster : ಮನೆಯಲ್ಲಿ ಭೀಕರ ಅಗ್ನ ದುರಂತ : ನಿವೃತ್ತ ಐಪಿಎಸ್‌ ಅಧಿಕಾರಿ ಸಾವು ; ಪತ್ನಿ,ಮಗ ಗಂಭೀರ

ಲಖನೌ : (A terrible fire disaster)ಮನೆಯೊಂದರಲ್ಲಿ ನಡೆದ ಭೀಕರ ಅಗ್ನಿ ಅವಘಡ ನಿವೃತ್ತ ಐಪಿಎಸ್‌ ಅಧಿಕಾರಿ ಸಾವನ್ನಪ್ಪಿದ್ದು, ಪತ್ನಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಲಖನೌದ ಇಂದಿರಾ ನಗರದಲ್ಲಿ ನಡೆದಿದೆ.

ಮಾಜಿ ಐಪಿಎಸ್‌ ಅಧಿಕಾರಿ ದಿನೇಶ್‌ ಚಂದ್ರ ಪಾಂಡೆ ಎಂಬವರೇ ಮೃತಪಟ್ಟವರು. ಪತ್ನಿ ಅರುಣಾ ಮತ್ತು ಮಗ ಶಶಾಂಕ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಪತ್ನಿ ಹಾಗೂ ಮಗನ ಜೊತೆಗೆ ಕುಳಿತಿದ್ದ ವೇಳೆಯಲ್ಲಿ ಒಮ್ಮಿಂದೊಮ್ಮೆಲೆ ಬೆಂಕಿ(A terrible fire disaster) ಕಾಣಿಸಿಕೊಂಡಿದೆ. ಕೂಡಲೇ ಮನೆಯಲ್ಲಿದ್ದ ಮೂವರು ಹೊರಗೆ ಓಡಿ ಬರಲು ಯತ್ನಿಸಿದ್ದಾರೆ. ಆದರೆ ಮೂವರಿಗೂ ಮನೆಯಿಂದ ಹೊರಗೆ ಬರಲು ಸಾಧ್ಯವಾಗಲೇ ಇಲ್ಲ. ಐಪಿಎಸ್ ಅಧಿಕಾರಿ ದಿನೇಶ್ ಚಂದ್ರ ಪಾಂಡೆ ಅವರು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Karnataka yellow alert : ದೀಪಾವಳಿ ಹೊತ್ತಲೇ ಆರ್ಭಟಿಸಲಿದೆ ಮಳೆ : ಕರ್ನಾಟಕದಲ್ಲಿ 2 ದಿನ ಯೆಲ್ಲೋ ಅಲರ್ಟ್

ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೂವರು ವಾಹನಗಳನ್ನು ಬಳಸಿಕೊಂಡು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಅಲ್ಲದೇ ಇಂದಿರಾನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವಲ್ಲಿ ಸಹಕಾರ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮನೆಗೆ ಆಗಮಿಸುವ ವೇಳೆಯಲ್ಲಿ ಮನೆಯ ತುಂಬೆಲ್ಲಾ ದಟ್ಟ ಹೊಗೆ ಆವರಿಸಿತ್ತು. ಮನೆಯೊಳಗೆ ಏನು ಕಾಣಿಸುತ್ತಿರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಆಕ್ಸಿಜನ್ ಮಾಸ್ಕ್ ತೊಟ್ಟು ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಇದನ್ನೂ ಓದಿ : 7th Pay Commission : ದೀಪಾವಳಿ ಭರ್ಜರಿ ಗಿಫ್ಟ್ : ಸರಕಾರಿ ನೌಕರರ ಡಿಎ ಹೆಚ್ಚಳ

ಇದನ್ನೂ ಓದಿ : Chhattisgarh Nurse Gang Raped : ಆರೋಗ್ಯ ಕೇಂದ್ರದಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತ ಸೇರಿ 3 ಮಂದಿಯ ಬಂಧನ

ಮೊದಲ ಮಹಡಿಯಲ್ಲಿಯನ ಕೋನೆಯಲ್ಲಿ ದಿನೇಶ್‌ ಪಾಂಡೆ, ಹೆಂಡತಿ ಹಾಗೂ ಮಗ ಕೋಣೆಯ ಒಳಗೆ ಪ್ರಜ್ನಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ತಿಳಿದ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ಮೂವರನ್ನು ಮನೆಯಿಂದ ಹೊರಗೆ ತಂದಿದ್ದಾರೆ. ಆದರೆ ದಿನೇಶ್ ಚಂದ್ರ ಅವರು ಸಾವನ್ನಪ್ಪಿರುವ ಕುರಿತು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತ್ನಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅಗ್ನಿದುರಂತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪಾಂಡೆ ಅವರ ಸಾವಿನ ಬೆನ್ನಲ್ಲೇ ಘಟನೆಯ ಹಿಂದಿನ ಕಾರಣವನ್ನು ಹುಡುಕಲು ಅಧಿಕಾರಿಗಳು ಸಜ್ಜಾಗಿದ್ದಾರೆ.

(A terrible fire disaster) A terrible fire accident in a house killed a retired IPS officer and seriously injured his wife and son. The incident took place in Indira Nagar, Lucknow, Uttar Pradesh.

Comments are closed.