Chandrayaan-3 Updates : ಚಂದ್ರಯಾನ 3 : ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಅಗಸ್ಟ್ 23 ಕ್ಕೆ ನಿಗದಿಯಾಗಿದ್ದೇಕೆ ? ಇದರ ಹಿಂದಿದೆ ರೋಚಕ ಮಾಹಿತಿ

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಚಂದ್ರಯಾನ-3 (Chandrayaan-3 Updates) ಆಗಸ್ಟ್ 23 ರಂದು ಸಂಜೆ ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧವಾಗಿದೆ.ಇಸ್ರೋ ಚಂದ್ರಯಾನ್ 3 ಅಂತಿಮ ಘಟ್ಟ ತಲುಪಿದ ಹಿನ್ನಲೆಯಲ್ಲಿ ಇಸ್ರೋ ವಿಜ್ಞಾನಿಗಳಲ್ಲಿ ಆತಂಕ ಹೆಚ್ಚಿದೆ. ಅದಕ್ಕೆ ಕಾರಣವೇನೆಂದರೆ ರಷ್ಯಾ ಲೂನ್ 25 ಯಶಸ್ವಿಯಾಗದ ಹಿನ್ನಲೆಯಲ್ಲಿ ಆತಂಕ ಹುಟ್ಟಿಸಿದೆ.

ಆಗಸ್ಟ್ 23 ರಂದು ಸಂಜೆ 5.32 ಕ್ಕೆ ಸೂರ್ಯೋದಯವಾಗಲಿದೆ. ಆಗಸ್ಟ್ 23 ರಿಂದ 14 ದಿನಗಳ ಕಾಲ ಚಂದ್ರನಲ್ಲಿ ಹಗಲು ಇರಲಿದೆ. ನಂತರ 15 ನೇ ದಿನದಿಂದ ಚಂದ್ರನ ಮೇಲೆ ಕತ್ತಲು ಆವರಿಸುವುದರಿಂದ, ಲ್ಯಾಂಡರ್ ಲ್ಯಾಂಡ್ ಆಗುತ್ತಿದ್ದಂತೆ ಸಾಕಷ್ಟು ಧೂಳು ಏಳಲಿದೆ. ಲ್ಯಾಂಡ್ ಆದ ಮೂರು ಗಂಟೆ ವರೆಗೂ ಯಾವುದೇ ಚಟುವಟಿಕೆ ನಡೆಸಲು ಸಾಧ್ಯವಾಗುವುದಿಲ್ಲ ಧೂಳು ಕಡಿಮೆ ಆದ ನಂತರವಷ್ಟೇ ಚಟುವಟಿಕೆ ನಡೆಸಲು ಸಾಧ್ಯವಾಗುತ್ತೆ.

ಚಂದ್ರನ ಮೇಲೆ ಲ್ಯಾಂಡ್ ಆಗಲಿರುವ ವಿಕ್ರಂ ಲ್ಯಾಂಡರ್ ಈಗಾಗಲೇ ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸ್ಪೇಸ್ ಕ್ರಾಫ್ಟ್ ನಿಂದ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದೆ. ಚಂದ್ರನ ಅಂತಿಮ ಕಕ್ಷೆ ತಲುಪಿದ ವಿಕ್ರಂ ಲ್ಯಾಂಡರ್ 8 ಹಂತಗಳಲ್ಲಿ ಪೂರ್ಣಗೊಳ್ಳಲಿದೆ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. 8 ಪ್ರಕ್ರಿಯೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲೆ ಇಳಿಯಲಿರೋ ಲ್ಯಾಂಡರ್ ಚಂದ್ರಯಾನ್ 2 ಆರನೇ ಹಂತದಲ್ಲಿ ವಿಫಲವಾಗಿತ್ತು.

ಅನಾನುಕೂಲ ಅಂಶ ಇದ್ದರೆ ಲ್ಯಾಂಡಿಂಗ್ ಮುಂದೂಡಿಕೆ..!?
ಚಂದ್ರನ ಮೇಲೆ ಲ್ಯಾಂಡಿಂಗ್ ದಿನಾಂಕ ಇನ್ನೂ ಖಚಿತವಾಗಿಲ್ಲ. ಆದರೆ ಅನುಕೂಲ ವಾತಾವರಣವಿದ್ದರೆ ಚಂದ್ರನ ಮೇಲೆ ಲ್ಯಾಂಡಿಂಗ್ ಇಂದು ಸಾಧ್ಯವಾಗುತ್ತದೆ. ಅನಾನುಕೂಲ ಅಂಶ ಇದ್ದರೆ ಆಗಸ್ಟ್ 23 ರ ಬದಲು 27 ರಂದು ಲ್ಯಾಂಡಿಂಗ್ ಆಗಲಿದೆ. ಲ್ಯಾಂಡ್ ಆಗುವ ಎರಡು ಗಂಟೆ ಲ್ಯಾಂಡರ್ ಮಾಡ್ಯೂಲ್ ನ ಆರೋಗ್ಯ ನೋಡಲಾಗುತ್ತೆ. ಈ ಎಲ್ಲಾ ಕಾರಣಗಳಿಂದ ಲ್ಯಾಂಡರ್ ನ ಆರೋಗ್ಯ ಅನುಕೂಲವಾಗಿದ್ದರೆ ನಿಗದಿಯಂತೆ ಲ್ಯಾಂಡಿಂಗ್ ಸಾಧ್ಯವಾಗುತ್ತದೆ. ಹಾಗಾಗಿ ಲ್ಯಾಂಡರ್ ನ ಆರೋಗ್ಯ ಉತ್ತಮವಾಗಿಲ್ಲದಿದ್ರೆ ಲ್ಯಾಂಡಿಂಗ್ ಪ್ರಕ್ರಿಯೆ ಮುಂದೂಡಿಕೆ ಮಾಡಲಾಗುತ್ತದೆ ಎಂದು ಇಸ್ರೋ ಬಾಹ್ಯಾಕಾಶ ಅನ್ವಯಿಕೆ ಕೇಂದ್ರದ ನಿರ್ದೇಶಕ ನೀಲೇಶ್ ಎಂ. ದೇಸಾಯಿ ಮಾಹಿತಿ ನೀಡಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಏಕೆ ಇಳಿಯುತ್ತಿದೆ?
ವಿಜ್ಞಾನಿಗಳ ಪ್ರಕಾರ ಉತ್ತರ ಧ್ರುವದಲ್ಲಿ ಹೆಚ್ಚು ನೀರು ಸಿಗುವ ಸಾಧ್ಯತೆಯಿದೆ. ಹೀಗಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಲಿರುವ ವಿಕ್ರಂ ಲ್ಯಾಂಡರ್‌ ದಕ್ಷಿಣ ಧ್ರುವದಲ್ಲಿ ಇಳಿಸೋಕೆ ಇಸ್ರೋ ತೀರ್ಮಾನ ಮಾಡಿದೆ. ಇದನ್ನೂ ಓದಿ : Chandrayaan-3 Updates : ಚಂದ್ರಯಾನ 3 : ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್, ಲ್ಯಾಂಡ್​ಗೆ 8 ಹಂತಗಳು ಯಾವುವು?

ಚಂದ್ರಯಾನ-2ನಲ್ಲಾದ ತಪ್ಪುಗಳೇನು?
ಚಂದ್ರನ ಮೇಲೆ ಲ್ಯಾಂಡರ್ ಲ್ಯಾಂಡಿಂಗ್ ಆಗುವಾಗ ವೇಗ ಕಡಿಮೆ ಆಗಬೇಕಿತ್ತು. ಕೊನೆ ಕ್ಷಣದಲ್ಲಿ ವೇಗ ಕಡಿಮೆಯಾಗದೆ ಇರೋದ್ರಿಂದ ಕಕ್ಷೆ ಬಿಟ್ಟು ಹೋಗಿರುತ್ತದೆ. ಪ್ಯಾರಾಮೀಟರ್ ಪ್ರಸರಣ ನಿರ್ವಹಿಸುವ ಸಾಮರ್ಥ್ಯ ತುಂಬಾ ಕಡಿಮೆ ಇತ್ತು. ಈ ಎಲ್ಲಾ ಕಾರಣಗಳಿಂದ ಚಂದ್ರಯಾನ್ 2 ವಿಫಲವಾಗಿದೆ.

ಲ್ಯಾಂಡಿಂಗ್‌ ಸ್ಥಳ ವಿಶಾಲಗೊಳಿಸಿದ ಇಸ್ರೋ :
ಚಂದ್ರಯಾನ 3 ರಲ್ಲಿ ಲ್ಯಾಂಡಿಂಗ್ ಪ್ರದೇಶ ವಿಸ್ತರಿಸಿದ ಇಸ್ರೋ
500m x 500m ಬದಲಾಗಿ 4 m ‍X 2.5 km ಗೆ ವಿಸ್ತರಿಸಿದ ಇಸ್ರೋ
ಚಂದ್ರಯಾನ 2 ನಲ್ಲಿ ಲ್ಯಾಂಡಿಂಗ್ ಸ್ಥಳ 500m x 500m ಇತ್ತು

Chandrayaan-3 Updates: Chandrayaan 3: Vikram Lander landing scheduled for August 23? There is interesting information behind this

Comments are closed.