Chandrayaan-3 Updates : ಚಂದ್ರಯಾನ 3 : ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್, ಲ್ಯಾಂಡ್​ಗೆ 8 ಹಂತಗಳು ಯಾವುವು?

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಚಂದ್ರಯಾನ-3 (Chandrayaan-3 Updates) ಆಗಸ್ಟ್ 23 ರಂದು ಸಂಜೆ ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧವಾಗಿದೆ.ಇಸ್ರೋ ಚಂದ್ರಯಾನ್ 3 ಅಂತಿಮ ಘಟ್ಟ ತಲುಪಿದ ಹಿನ್ನಲೆಯಲ್ಲಿ ಇಸ್ರೋ ವಿಜ್ಞಾನಿಗಳಲ್ಲಿ ಆತಂಕ ಹೆಚ್ಚಿದೆ. ಅದಕ್ಕೆ ಕಾರಣವೇನೆಂದರೆ ರಷ್ಯಾ ಲೂನ್ 25 ಯಶಸ್ವಿಯಾಗದ ಹಿನ್ನಲೆಯಲ್ಲಿ ಆತಂಕ ಹುಟ್ಟಿಸಿದೆ.

ಚಂದ್ರನ ಮೇಲೆ ಲ್ಯಾಂಡ್ ಆಗಲಿರುವ ವಿಕ್ರಂ ಲ್ಯಾಂಡರ್ ಈಗಾಗಲೇ ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸ್ಪೇಸ್ ಕ್ರಾಫ್ಟ್ ನಿಂದ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದೆ. ಚಂದ್ರನ ಅಂತಿಮ ಕಕ್ಷೆ ತಲುಪಿದ ವಿಕ್ರಂ ಲ್ಯಾಂಡರ್ 8 ಹಂತಗಳಲ್ಲಿ ಪೂರ್ಣಗೊಳ್ಳಲಿದೆ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. 8 ಪ್ರಕ್ರಿಯೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲೆ ಇಳಿಯಲಿರೋ ಲ್ಯಾಂಡರ್ ಚಂದ್ರಯಾನ್ 2 ಆರನೇ ಹಂತದಲ್ಲಿ ವಿಫಲವಾಗಿತ್ತು.

ಆರನೇ ಹಂತದಲ್ಲಿ ವಿಶೇಷ ಕ್ಯಾಮೆರಾ ಅಳವಡಿಕೆ ಮಾಡಿರುವ ಇಸ್ರೋ, ಈ ಬಾರಿ ಲ್ಯಾಂಡಿಂಗ್ ವಿಫಲವಾಗದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದೆ. ಚಂದ್ರನ ಮೇಲೆ ಲ್ಯಾಂಡ್ ಆದರೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಭಾರತ ಎನ್ನುವ ಹೆಮ್ಮೆಗೆ ಪಾತ್ರಗಲಿದೆ. ಇದೂವರೆಗೂ ಅಮೇರಿಕಾ, ರಷ್ಯಾ, ಹಾಗೂ ಚೀನಾ ದೇಶಗಳು ಈ ಸಾಧನೆ ಮಾಡಿರುತ್ತದೆ. ಸದ್ಯ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಮಾಡಿಸಲು ಇಸ್ರೋ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಇದನ್ನೂ ಓದಿ : PAN-Aadhaar linking : ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ, ಬ್ಯಾಂಕ್ ಖಾತೆಗೆ ಸಂಬಳ ಜಮಾ ಆಗಲಿದೆಯೇ? ಇಲ್ಲಿ ಪರಿಶೀಲಿಸಿ

ಚಂದ್ರನ ಅಂತಿಮ ಕಕ್ಷೆ ತಲುಪಿದ ವಿಕ್ರಂ ಲ್ಯಾಂಡರ್ 8 ಹಂತಗಳು ಯಾವುವು..?

ಮೊದಲನೇ ಹಂತ : ವಿಕ್ರಂ ಲ್ಯಾಂಡರ್ ನ ವೇಗ 100 ಕಿಮೀ ನಿಂದ 7.4 ಕಿಮೀಗೆ ಇಳಿಸುವುದು ( ರಾಕೆಟ್‌ 6000KMPH ನಿಂದ 1200KMPH ಗೆ ಕಡಿಮೆ ಮಾಡುವುದು)
ಎರಡನೇ ಹಂತ : ಲ್ಯಾಂಡಂರ್ ಲ್ಯಾಂಡ್ ಆಗುವ ಸ್ಥಳದ ಫೋಟೋ ಆಧರಿಸಿ ತೀರ್ಮಾನ
ಮೂರನೇ ಹಂತ : ರಾಕೇಟ್ ನ ವೇಗ 6.8 ಕಿಮೀ ನಿಂದ 800 ಮೀಟರ್ ಗೆ ಇಳಿಸುವುದು (ಲ್ಯಾಂಡರ್ ಕಾಲುಗಳನ್ನ 59 ಡಿಗ್ರಿ ಇಳಿಜಾರಿನಿಂದ ನೇರಗೊಳಿಸುವುದು
ನಾಲ್ಕನೇ ಹಂತ : ರಾಕೇಟ್ ನ ಎತ್ತರವನ್ನ 800 ಮೀಟರ್‌ನಿಂದ 150 ಮೀಟರ್‌ಗೆ ಇಳಿಸುವುದು ( ಲ್ಯಾಂಡರ್ ಲ್ಯಾಂಡಿಂಗ್ ಆಗುವಾಗ ತನ್ನ ಸ್ಥಳವನ್ನ ಖಚಿತ ಪಡಿಸಿಕೊಳ್ಳುತ್ತದೆ
ಐದನೇ ಹಂತ : ರಾಕೇಟ್ ನ ಎತ್ತರವನ್ನ 150 ಮೀಟರ್ ನಿಂದ 60 ಮೀಟರ್ ಗೆ ಇಳಿಸುವುದು ( ನಿಗಧಿತ ಸ್ಥಳದ ಕಡೆ ಕೇಂದ್ರಿಕೃತವಾಗುತ್ತೆ)
ಆರನೇ ಹಂತ : ರಾಕೇಟ್ ನ ವೇಗ 800 ಮೀಟರ್ ನಿಂದ 150 ಮೀಟರ್ ಹಾಗೆನೇ 10 ಮೀಟರ್ ಗೆ ಇಳಿಸುವುದು
ಏಳನೇ ಹಂತ : ರಾಕೇಟ್ ನ ವೇಗ 10 ಮೀಟರ್ ನಿಂದ ವೇಗ ತಗ್ಗಿಸಿ ಚಂದ್ರನ ಮೇಲೆ ಲ್ಯಾಂಡ್ ಆಗುವುದು
ಏಂಟನೇ ಹಂತ : ಆಕ್ಟಿವ್ ಆಗಲಿರುವ ಲ್ಯಾಂಡ್ ರೋವರ್‌ನ ಕ್ಯಾಮೆರಾಗಳು ಚಟುವಟಿಕೆ ಆರಂಭಿಸಿ ಚಂದ್ರನ ಮೇಲ್ಮೈನ ಫೋಟೋ ರವಾನೆ ಮಾಡುತ್ತದೆ.

Chandrayaan-3 Updates: Chandrayaan 3: Vikram Lander on the Moon, What are the 8 Steps to Land?

Comments are closed.