ಬೀಜಿಂಗ್ : ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನ ಹರಡಿಸಿದ್ದ ಚೀನಾ ಕೊರೊನಾ ಯುದ್ದದಲ್ಲಿ ಗೆದ್ದು ಬೀಗಿತ್ತು. ಆದ್ರೆ ಇದೀಗ ತಾನು ಸೃಷ್ಟಿಸಿದ ಕೊರೊನಾ ವೈರಸ್ ಚೀನಾಕ್ಕೆ ಶಾಕ್ ಕೊಟ್ಟಿದೆ. ಎರಡನೇ ಹಂತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಸಾವಿರಾರು ವಿಮಾನಗಳ ಹಾರಾಟವನ್ನೇ ರದ್ದುಗೊಳಿಸಿದೆ.

ಡೆಡ್ಲಿ ಕೊರೊನಾ ಮಹಾಮಾರಿಯನ್ನು ಸೃಷ್ಟಿಸಿ ಜಗತ್ತಿಗೆ ಅಪಾಯವನ್ನು ತಂದಿಟ್ಟ ಚೀನಾ ಇದೀಗ ಮತ್ತೊಮ್ಮೆ ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ. ಚೀನಾದಲ್ಲಿ ಎರಡನೇ ಹಂತದಲ್ಲಿ ಕೊರೊನಾ ಮಹಾಮಾರಿ ಒಕ್ಕರಿಸಿಕೊಂಡಿದ್ದು, ಬೀಜಿಂಗ್ ನಗರದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ವಿಮಾನ ಹಾರಾಟವನ್ನೂ ಬಂದ್ ಮಾಡಿದೆ.

ವುಹಾನ್ ದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ (ಕೋವಿಡ್-19) ಡೆಡ್ಲಿ ಮಹಾಮಾರಿ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ವಿಶ್ವದ ಪ್ರಮುಖ ರಾಷ್ಟ್ರಗಳೇ ಕೊರೊನಾ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿವೆ. ಈ ನಡುವಲ್ಲೇ ಚೀನಾ ಕೊರೊನಾ ಮಹಾಮಾರಿಯ ವಿರುದ್ದದ ಹೋರಾಟದಲ್ಲಿ ಗೆದ್ದೆ ಎಂದು ಬೀಗಿತ್ತು. ಆದ್ರೀಗ ಕೊರೊನಾ ವೈರಸ್ ಮತ್ತೆ ಚೀನಾದಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದೆ.

ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡು ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು ಕೂಡ ಕೊರೊನಾ ಸೋಂಕಿಗೆ ಬಲಿಯಾದವರ ಕುರಿತು ನಿಖರವಾದ ಮಾಹಿತಿಯನ್ನು ವಿಶ್ವಕ್ಕೆ ನೀಡಿಲ್ಲ. ಅಲ್ಲದೇ ವೈರಸ್ ಸೃಷ್ಟಿಗೂ ಚೀನಾ ಕಾರಣ ಅಂತಾ ಹಲವು ರಾಷ್ಟ್ರಗಳು ಆರೋಪವನ್ನು ಮಾಡಿದ್ದವು. ಈ ನಡುವಲ್ಲೇ ಚೀನಾದಲ್ಲಿ ಸುಮಾರು 10 ಲಕ್ಷ ಜನರನ್ನು ಕೊರೊನಾ ತಪಾಸಣೆ ನಡೆಸಲಾಗಿದೆ ಅಂತಾ ಚೀನಾದ ಮಾಧ್ಯಮಗಳೇ ವರದಿ ಮಾಡಿವೆ.

ಇದೀಗ ಬೀಜಿಂಗ್ ನಗರದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಚೀನಾ ನೀಡಿರುವ ಅಂಕಿ ಅಂಶಗಳ ಪ್ರಕಾರ ಇದುವರೆಗೆ 83,265 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 78,379 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೇವಲ 4,634 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ ಅಂತಾ ಹೇಳುತ್ತಿದೆ. ಆದ್ರೆ ಚೀನಾ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿರುವ ಅಂಕಿ ಅಂಶಗಳಿಗೂ ಚೀನಾದ ವಾಸ್ತವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನವುದನ್ನು ಚೀನಾದ ಮಾಧ್ಯಮಗಳೇ ಬಯಲಿಗೆ ತಂದಿದ್ದವು.

ಜಗತ್ತು ಕೊರೊನಾ ಮಹಾಮಾರಿಯಿಂದ ತತ್ತರಿಸುತ್ತಿದ್ರೆ, ಇತ್ತ ಚೀನಾ ಲಾಕ್ ಡೌನ್ ಆದೇಶವನ್ನ ತೆರವು ಮಾಡುವ ಮೂಲಕ ತಾವು ಕೊರೊನಾ ಯುದ್ದವನ್ನು ಗೆದ್ದಿದ್ದೇವೆ ಅಂತಾ ಘೋಷಣೆ ಮಾಡಿತ್ತು. ಆದ್ರೆ ಚೀನಾದಲ್ಲಿ ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿಲ್ಲಾ ಅನ್ನುವುದು ಬಯಲಾಗಿದೆ. ಚೀನಾದಲ್ಲಿ ದಿನೇ ದಿನೇ ಒಂದೊಂದೆ ಸೇವೆಗಳು ಬಂದ್ ಆಗುತ್ತಿದೆ. ಕೋಟ್ಯಾಂತರ ಜನರಿಗೆ ಕೊರೊನಾ ತಪಾಸಣೆ ನಡೆಸಿರುವ ಚೀನಾ ಇದೀಗ ಶಾಲೆ, ಕಾಲೇಜುಗಳನ್ನು ಬಂದ್ ಮಾಡಿದೆ. ಮಾತ್ರವಲ್ಲ ವಿಮಾನಯಾನ ಸೇವೆಯನ್ನೂ ರದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಚೀನಾಕ್ಕೆ ಕೊರೊನಾ ಬಿಗ್ ಶಾಕ್ ಕೊಡುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು.