ಭಾರತ – ಚೀನಾ ಸಂಘರ್ಷ : ಹಿಮಾಚಲ ಪ್ರದೇಶದ ಗಡಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ

0

ಲಡಾಖ್ : ಭಾರತ ಹಾಗೂ ಚೀನಾ ಸೈನಿಕರ ಸಂಘರ್ಷ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲೀಗ ಹಿಮಾಚಲ ಪ್ರದೇಶ ಗಡಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಗ್ಯಾಲ್ವಾನ್ ಗಡಿಯಲ್ಲಿ ನಡೆದ ಘರ್ಷಣೆಯ ಕುರಿತು ಭಾರತೀಯ ಸೇನೆ ಹೇಳಿಕೆಯನ್ನು ನೀಡಿದೆ.

ಗ್ಯಾಲ್ವಾನ್ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ 3 ಭಾರತೀಯ ಯೋಧರ ಮೇಲೆ ಚೀನಾದ 800 ಮಂದಿ ಸೈನಿಕರು ದಾಳಿ ನಡೆಸಿದ್ದರು. ಈ ವೇಳೆ ಉದ್ವಿಗ್ನತೆಯನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರತಿದಾಳಿ ನಡೆದಿದೆ. ಮೂವರು ಭಾರತೀ ಯೋಧರ ರಕ್ಷಣೆಗೆ ಸುಮಾರು 800 ಮಂದಿ ಯೋಧರು ಧಾವಿಸಿದ್ದರು. ಈ ವೇಳೆಯಲ್ಲಿ ಚೀನಾ ಯೋಧರು ಗುಂಡು ಹಾರಿಸದೇ, ಕಲ್ಲು ತೂರಾಟ, ದೊಣ್ಣೆಯಿಂದ ಬಡಿದಾಟ ಶುರು ಮಾಡಿದ್ದರು.

ಕಬ್ಬಿಣದ ರಾಡ್ ಗಳನ್ನು ಸಹ ತಂದಿದ್ದರು. ಈ ವೇಳೆಯಲ್ಲಿ ಸುಮಾರು 3 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೇ 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ತದನಂತರ 17 ಮಂದಿ ಯೋಧರು ಕೂಡ ಹುತಾತ್ಮರಾಗಿದ್ದಾರೆ. ಭಾರತದ ಗಡಿ ರಕ್ಷಣೆಗೆ ಹಾಗೂ ಸಾರ್ವಭೌಮತ್ವದ ರಕ್ಷಣೆಗೆ ಭಾರತೀಯ ಸೇನೆ ಕಟಿಬದ್ದವಾಗಿದೆ. ಎಲ್ಎಸಿಯಲ್ಲಿ ಮೊದಲು ಭಾರತದ ಮೇಲೆ ದಾಳಿ ನಡೆಸಿದ್ದು ಚೀನಾ ಸೇನೆ ಅಂತಾ ಭಾರತೀಯ ಸೇನೆ ಹೇಳಿಕೆ ನೀಡಿದೆ.

ಇನ್ನು ಗ್ಯಾಲ್ವಾನ್ ನಲ್ಲಿ ನಡೆದ ಸಂಘರ್ಷದ ಬೆನ್ನಲ್ಲೇ ಹಿಮಾಚಲಯ ಪ್ರದೇಶದ ಗಡಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಿಮಾಚಲ ಪ್ರದೇಶದ ಲಾಹುಲ್-ಸ್ಥಿತಿ, ಕಿನ್ನೋರ್ ಜಿಲ್ಲೆಗಳ ಗಡಿಗಳಲ್ಲಿ ಹದ್ದಿನಕಣ್ಣು ಇರಿಸಲಾಗಿದ್ದು, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಹಿಮಾಚಲಯ ಪ್ರದೇಶದ ಗಡಿಭಾಗಗಳಲ್ಲಿ ಹೆಚ್ಚುವರಿ ಸೇನಾ ತುಕಡಿಗಳಿಂದ ಭದ್ರತೆಯನ್ನು ಒದಗಿಸಲಾಗಿದೆ.

ಭಾರತ ಚೀನಾ ಗಡಿಯಲ್ಲಿ ಯಾವುದೇ ಸಂದರ್ಭದಲ್ಲಿಯೂ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಇಲಾಖೆಯ ಅಧಿಕಾರಿಗಳ ಜೊತೆ ತಡರಾತ್ರಿಯವರೆಗೂ ಸಭೆ ನಡೆಸಿದ್ದಾರೆ.

Leave A Reply

Your email address will not be published.