Communal clash : ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕೋಮು ಸಂಘರ್ಷ : 13 ಮಂದಿ ಬಂಧನ

ವಡೋದರಾ : Communal clash : ಗಣೇಶನ ಮೂರ್ತಿಯನ್ನು ಹೊತ್ತು ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವೆ ಪರಸ್ಪರ ಕೋಮು ಘರ್ಷಣೆ ಸಂಭವಿಸಿದ್ದು ಪರಸ್ಪರ ಕಲ್ಲು ಎಸೆದುಕೊಂಡು ಹಲ್ಲೆ ನಡೆಸಿದ ಘಟನೆಯು ಗುಜರಾತ್​​ನ ವಡೋದರಾ ಮೈದಾನದಲ್ಲಿ ಸಂಭವಿಸಿದೆ. ಈ ಸಂಬಂಧ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.

ಸೋಮವಾರ ತಡರಾತ್ರಿ ಈ ಗಲಭೆ ಸಂಭವಿಸಿದ್ದು ಈ ಸಂಬಂಧ ಪೊಲೀಸರು ಈವರೆಗೆ 13 ಮಂದಿಯನ್ನು ಬಂಧಿಸಿದ್ದಾರೆ. ಕಲ್ಲು ತೂರಾಟದಲ್ಲಿ ಯಾವುದೇ ವ್ಯಕ್ತಿಗೆ ಗಾಯಗಳು ಉಂಟಾಗಿಲ್ಲ. ಗಲಭೆ ಹಾಗೂ ಕಾನೂನುಬಾಹಿರ ಸಭೆ ಆರೋಪದ ಅಡಿಯಲ್ಲಿ ಎರಡೂ ಸಮುದಾಯಕ್ಕೆ ಸೇರಿದ ಸದಸ್ಯರ ವಿರುದ್ಧ ವಡೋದರಾ ನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾತ್ರಿ 11:15ರ ಸುಮಾರಿಗೆ ಕೋಮು ಸೂಕ್ಷ್ಮ ಪ್ರದೇಶವಾದ ಮಾಂಡವಿಯ ಪಾಣಿಗೇಟ್​ ದರ್ವಾಜಾ ಮೂಲಕ ಗಣೇಶ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಇದಾದ ಬಳಿಕ ಎರಡು ಸಮುದಾಯದ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ನಗರ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಎರಡು ಸಮುದಾಯಗಳ ಜನರು ಪರಸ್ಪರ ಜಗಳವಾಡಲು ಆರಂಭಿಸಿದರು. ಎರಡೂ ಗುಂಪಿನ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ಘಟನೆ ವೇಳೆ ಮಸೀದಿಯ ಮುಖ್ಯ ದ್ವಾರದ ಗಾಜಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : Shashi Tharoor : ಕಾಂಗ್ರೆಸ್ ಅಧ್ಯಕ್ಷ ಗದ್ದುಗೆ ಮೇಲೆ ಶಶಿ ಕಣ್ಣು..?

ಇದನ್ನೂ ಓದಿ : Fishing boat : ಭಟ್ಕಳ, ಮಂಗಳೂರಿನಲ್ಲಿ ಮೀನುಗಾರಿಕಾ ದೋಣಿ ಪಲ್ಟಿ: ಓರ್ವ ನಾಪತ್ತೆ

Communal clash in Vadodara during Ganesh procession; no one injured

Comments are closed.