Ram Gopal Varma : ದ್ರೌಪದಿ ಮುರ್ಮು ಬಗ್ಗೆ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್ : ಪ್ರಕರಣ ದಾಖಲು

ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ವಿವಾದ ಸದಾ ಒಂದೆಂಬಂತೆ ಇರುತ್ತಾರೆ. ಸದಾ ತಮ್ಮ ಸಿನಿಮಾ ದಿಂದ ವಿವಾದ ಸೃಷ್ಟಿಸೋ ರಾಮ್ ಗೋಪಾಲ್ ವರ್ಮಾ (Ram Gopal Varma) ಈ ಭಾರಿ ತಮ್ಮ ಸೋಷಿಯಲ್ ಮೀಡಿಯಾದಿಂದ ವಿವಾದ ಸೃಷ್ಟಿಸಿದ್ದಾರೆ. ಎನ್ ಡಿಎ ಮಿತ್ರಕೂಟದ ಘೋಷಿತ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದು, ಈ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ ರಾಮ್ ಗೋಪಾಲ್ ವರ್ಮಾ ಬಗ್ಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಮುಂದಿನ ತಿಂಗಳು ದೇಶದಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಎನ್ ಡಿಎ ತಮ್ಮ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲರು ಹಾಗೂ ಬಿಜೆಪಿ ಹಿರಿಯ ನಾಯಕಿ ದ್ರೌಪದಿ ಮುರ್ಮು ಅವರನ್ನು ಘೋಷಿಸಿದೆ. ಆದರೆ ಘೋಷಿತ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ದ್ರೌಪದಿ ರಾಷ್ಟ್ರಪತಿಯಾದರೇ ಪಾಂಡವರು ಯಾರು? ಎಲ್ಲದಕ್ಕಿಂತ ಮುಖ್ಯವಾಗಿ ಕೌರವರು ಯಾರು ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ದೇಶದಾದ್ಯಂತ ಸಂಚಲನ ಮೂಡಿಸಿದ್ದು, ರಾಮ್ ಗೋಪಾಲ್ ವರ್ಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು ಕೂಡ ದಾಖಲಾಗಿದೆ. ಆಂಧ್ರಪ್ರದೇಶದ ಹೈದ್ರಾಬಾದ್ ನಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಬಿಜೆಪಿ ನಾಯಕರಾದ ಗುಡೂರು ನಾರಾಯಣ್ ರೆಡ್ಡಿ ಹಾಗೂ ಟಿ.ನಂದೇಶ್ವರ್ ಗೌಡ ಅವರು ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆದರೆ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವೀಟ್ ನ್ನು ಸಮರ್ಥಿಸಿಕೊಂಡಿದ್ದು, ಇದನ್ನು ನಾನು ವ್ಯಂಗ್ಯವಾಗಿ ಹೇಳಿಲ್ಲ. ಮಹಾ ಭಾರತದಲ್ಲಿರುವ ದ್ರೌಪದಿ ಪಾತ್ರ ನನಗೆ ತುಂಬ ಇಷ್ಟವಾದ ಪಾತ್ರ. ಆದರೆ ಆ ಹೆಸರನ್ನು ಇಟ್ಟುಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ನಾನು ದ್ರೌಪದಿ ಎಂಬ ಹೆಸರು ಕೇಳಿದೊಡನೆ ನಾನು ಮಹಾಭಾರತ ಪಾತ್ರವನ್ನು ನೆನಪಿಸಿಕೊಂಡೆ.‌ಅದರಲ್ಲಿ ಯಾವುದೇ ರೀತಿಯ ಬೇರೆ ಉದ್ದೇಶವಿಲ್ಲ. ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಎಲ್ಲಿಯೂ ರಾಮ್ ಗೋಪಾಲ್ ವರ್ಮಾ ಕ್ಷಮೆಯಾಚಿಸಿಲ್ಲ. ರಾಮ್ ಗೋಪಾಲ್ ವರ್ಮಾ ಈ ಹೇಳಿಕೆ ಈಗ ಸಖತ್ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರುದ್ಧ ಚರ್ಚೆ ತೀವ್ರಗೊಂಡಿದೆ.

ಇದನ್ನೂ ಓದಿ : ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಸುದ್ದಿ: ಮಂತ್ರಿಗಿರಿ ಬದಲು ಸಿಗುತ್ತೆ‌ ನಿಗಮ ಮಂಡಳಿ ಸ್ಥಾನ

ಇದನ್ನೂ ಓದಿ : Vikrant Rona Trailer record : ಕಿಚ್ಚನ ಮೆಚ್ಚಿದ್ರು 72 ಲಕ್ಷ ಜನ : ದಾಖಲೆಯತ್ತ ಮುನ್ನುಗ್ಗಿದ ವಿಕ್ರಾಂತ್ ರೋಣ ಟ್ರೇಲರ್

Complaint filed Against Ram Gopal Varma For controversial Tweet About Draupadi murmu

Comments are closed.