ನವದೆಹಲಿ : ವಿಶ್ವವನ್ನೇ ನಡುಗಿಸಿರೋ ಕೊರೊನಾ ವೈರಸ್ ಸೋಂಕು ಪ್ರಕರಣ ಇದೀಗ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಸಿಲಿಕಾನ್ ಸಿಟಿಯ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು 3 ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ.

ಕೇರಳದ ಮೂವರು ಕೊರೊನಾ ಸೋಂಕಿತರು ಚೇತರಿಸಿಕೊಂಡಿದ್ದರು, ಆದರೆ ಇದೀಗ ದೆಹಲಿ, ತೆಲಂಗಾಣ ಹಾಗೂ ರಾಜಸ್ಥಾನದಲ್ಲಿ ಮತ್ತೆ ಮೂರು ಪ್ರಕರಣ ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಖಚಿತ ಪಡಿಸಿದೆ. ತೆಲಂಗಾಣದಲ್ಲಿ ಪತ್ತೆಯಾಗಿರೋ ಕೊರೊನಾ ವೈರಸ್ ಪೀಡಿತ ಟೆಕ್ಕಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಿಂದ ಹೈದ್ರಾಬಾದ್ ಗೆ ಬಸ್ಸಿನಲ್ಲಿ ತೆರಳಿದ್ದ, ಈ ವೇಳೆಯಲ್ಲಿ ಟೆಕ್ಕಿ ಹಲವರ ಜೊತೆಗೂ ಮಾತನಾಡಿದ್ದಾನೆ. ಹೀಗಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು 80 ಮಂದಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸೋದಾಗಿ ತೆಲಂಗಾಣ ಸರಕಾರ ಹೇಳಿಕೊಂಡಿದೆ.

ತೆಲಂಗಾಣ ಮೂಲದ ಟೆಕ್ಕಿ ಇತ್ತೀಚಿಗೆ ದುಬೈನಿಂದ ಹಿಂದಿರುಗಿದ್ದರು. ಅಲ್ಲದೇ ದೆಹಲಿಯಲ್ಲಿ ಒಂದು ಮತ್ತು ರಾಜಸ್ಥಾನದಲ್ಲಿ ಇಟಲಿ ಪ್ರವಾಸಿಗರಿಗೆ ಸೋಂಕು ತಗುಲಿದೆ. ಕೊರೊನಾ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.