ಕುವೈತ್ ನಲ್ಲಿ ವೀಸಾ ರದ್ದು, ವಿದೇಶಿಗರಿಗೆ ನಿರ್ಬಂಧ : 56ಕ್ಕೇರಿದ ಕೊರೊನಾ ಸೋಂಕಿತರು

0

ವಿಶೇಷ ಪ್ರತಿನಿಧಿ ವರದಿ

ಕುವೈತ್ : ಗಲ್ಪ್ ರಾಷ್ಟ್ರ ಕುವೈತ್ ಕೊರೊನಾ ವೈರಸ್ ಭೀತಿಗೆ ತತ್ತರಿಸಿ ಹೋಗಿದೆ. ಕುವೈತ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಕುವೈತ್ ಸಚಿವಾಲಯ ವಿಸಿಟಿಂಗ್ ವೀಸಾ ರದ್ದು ಮಾಡಿದೆ.

ದಿನೇ ದಿನೇ ಕುವೈತ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆಯ ವರೆಗೆ 46 ಮಂದಿಗೆ ಕೊರೊನಾ ಸೋಂಕು ಹರಡಿದ್ದರೆ, ಇಂದು ಕೊರೊನಾ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಅಲಮ್ರಾ ಟವರ್ ನಲ್ಲಿ ಓರ್ವ ಕೊರೊನಾ ಶಂಕಿತ ಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಅಲಮ್ರಾ ಟವರ್ ಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ ಈ ಕುರಿತು ನ್ಯೂಸ್ ನೆಕ್ಟ್ ಗೆ ಮಾಹಿತಿ ಲಭ್ಯವಾಗಿದೆ.

ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಸ್ಟಮ್ಸ್ ಅಧಿಕಾರಿಯೋರ್ವರಿಗೂ ಕೊರೊನಾ ಸೋಂಕು ತಗುಲಿದೆ. ಅವರನ್ನು ಕೊರೊನಾ ಸೋಂಕಿತರ ಶಿಬಿರಕ್ಕೆ ದಾಖಲಿಸಲಾಗಿದೆ.

ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದಕ್ಕೆ ನಿಷೇಧ ಹೇರಿರೋ ಕುವೈತ್ ಸಚಿವಾಲಯ ಇದೀಗ ಸರಕಾರಿ ನೌಕರರಿಗೆ ಕೊರೊನಾ ಪರೀಕ್ಷೆ ಮಾಡಿಸಿದೆ.

ಮಾತ್ರವಲ್ಲ 3.5 ಮಿಲಿಯನ್ ಮಾಸ್ಕ್ ಗಳನ್ನು ಆಮದು ಮಾಡಿಕೊಂಡಿದ್ದು, ಕುವೈತ್ ನಾಗರೀಕರಿಗೆ ಒದಗಿಸುವ ಕಾರ್ಯವನ್ನು ಆರೋಗ್ಯ ಸಚಿವಾಲಯ ಮಾಡುತ್ತಿದೆ.

ಕುವೈತ್ ಈಗಾಗಲೇ ಇಟಲಿ, ಇರಾನ್ ದೇಶದಲ್ಲಿ ನೆಲೆಸಿದ್ದ ಕುವೈತ್ ಪ್ರಜೆಗಳನ್ನು ಈಗಾಗಲೇ ಸ್ವದೇಶಕ್ಕೆ ಕರೆಯಿಸಿಕೊಳ್ಳಲಾಗುತ್ತಿದೆ. ಮಾತ್ರವಲ್ಲ ಇರಾಕ್ ನಲ್ಲಿಯೂ ನೆಲೆಸಿರೊ ಕುವೈತ್ ನಿವಾಸಿಗಳನ್ನು ಕರೆಯಿಸಿಕೊಳ್ಳಲಾಗುತ್ತಿದ್ದು, ವಿದೇಶದಿಂದ ವಾಪಾಸಾಗುತ್ತಿರೋ ಕುವೈತ್ ಪ್ರಜೆಗಳಿಗೆ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.


ಕೊರೊನಾ ಸೋಂಕು ತಡೆಗಟ್ಟುವ ಕುರಿತು ಆರೋಗ್ಯ ಸಚಿವಾಲಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಕುವೈತ್ ನಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ವಿದೇಶಿ ಪ್ರಜೆಗಳು ಸ್ವದೇಶಕ್ಕೆ ತೆರಳದಂತೆ ಕುವೈತ್ ಸಚಿವಾಲಯ ಮನವಿ ಮಾಡಿಕೊಂಡಿದೆ.

ಇದೀಗ ವಿದೇಶಿ ಪ್ರವಾಸಿಗರಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ, ಅನಿರ್ಧಿಷ್ಟಾವಧಿಗೆ ವಿಸಿಟಿಂಗ್ ವೀಸಾ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಒಟ್ಟಿನಲ್ಲಿ ಕುವೈತ್ ನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರೋದು ಆರೋಗ್ಯ ಇಲಾಖೆಯ ತಲೆನೋವಿಗೆ ಕಾರಣವಾಗಿದ್ದು, ಕುವೈತ್ ನಲ್ಲಿ ನೆಲೆಸಿರೊ ಭಾರತೀಯರು ಆತಂಕಕ್ಕೆ ಒಳಗಾಗಿದ್ದಾರೆ.

Leave A Reply

Your email address will not be published.