ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಹೇರಿಕೆ ಮಾಡಲಾಗಿದೆ. ಆದರೆ ಕೊರೊನಾ ವೈರಸ್ ಸೋಂಕು ಕಡಿಮೆ ಇರುವ ಜಿಲ್ಲೆಗಳನ್ನು ಅನ್ ಲಾಕ್ ಮಾಡುವಂತೆ ಐಸಿಎಂಆರ್ ಸೂಚಿಸಿದೆ.
ಕೇಂದ್ರ ಸರಕಾರ ಜೂನ್ 30ರ ವರೆಗೂ ಕಠಿಣ ನಿಯಮ ಗಳನ್ನು ಮುಂದುವರಿಕೆ ಮಾಡುವಂತೆ ಸೂಚನೆಯನ್ನು ನೀಡಿದೆ. ಬಹುತೇಕ ರಾಜ್ಯಗಳು ಜೂನ್ 15ರವರೆಗೂ ಲಾಕ್‌ಡೌನ್ ಹೇರಿಕೆ ಮಾಡಿವೆ. ಆದರೆ ಯಾವ ಜಿಲ್ಲೆಗಳಲ್ಲಿ ಶೇ.5ರಷ್ಟು ಪಾಸಿಟಿವ್ ಕೇಸ್ ಹೊಂದಿರುವ ಜಿಲ್ಲೆಗಳಲ್ಲಿ ಹಾಗೂ ಶೇ. 75 ರಷ್ಟು ಕೊರೊನಾ ಲಸಿಕೆ ಪಡೆದುರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ತೆರವು ಮಾಡುವಂತೆ ಐಸಿಎಂಆರ್ ತಿಳಿಸಿದೆ.
ಕೊರೊನಾ ವೈರಸ್ ಸೋಂಕು ತಡೆಗೆ ಲಾಕ್ ಡೌನ್ ಪರಿಹಾರ ಅನ್ನುವ ನಿಟ್ಟಿನಲ್ಲಿ ಬಹುತೇಕ ರಾಜ್ಯಗಳು ಲಾಕ್ ಡೌನ್ ಜಾರಿ ಮಾಡಿವೆ. ಅಲ್ಲದೇ ಕೊರೊನಾ ನಿಯಂತ್ರಣ ಮಾಡುವಲ್ಲಿ ಯಶಸ್ವಿಯೂ ಆಗಿವೆ. ಆದರೆ ಅನ್ ಲಾಕ್ ಮಾಡಲು ಹಿಂದೇಟು ಹಾಕುತ್ತಿವೆ. ಇದೀಗ ಐಸಿಎಂಆರ್ ಸೂಚನೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡುವ ಸಾಧ್ಯತೆಯಿದೆ.