ಮತ್ತೊಂದು ಸಾಧನೆಗೆ ಪಾತ್ರವಾದ ನ್ಯಾಶನಲ್ ಕ್ರಶ್…! ರಶ್ಮಿಕಾ ಮುಡಿಗೆ ಮೋಸ್ಟ್ ಡಿಸೈರಬಲ್ ವುಮನ್ ಪಟ್ಟ…!!

ಸ್ಯಾಂಡಲ್ ವುಡ್ ನಿಂದ ತಮಿಳು,ತೆಲುಗು ಚಿತ್ರರಂಗಕ್ಕೆ ಹಾರಿ ಅಲ್ಲಿಂದ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ ಕೀರಿಟಕ್ಕೆ ಮತ್ತೊಂದು ಹಿರಿಮೆ ಸಂದಿದೆ. ರಶ್ಮಿಕಾ ಮಂದಣ್ಣ ನ್ಯಾಶನಲ್ ಕ್ರಶ್ ಪಟ್ಟದ ಜೊತೆಗೆ ಇದೀಗ ಮೋಸ್ಟ್ ಡಿಸೈರಬಲ್ ವುಮನ್ ಪಟ್ಟಕ್ಕೇರಿದ್ದಾರೆ.

https://kannada.newsnext.live/rural-hospital-apointed-doctors-governament/

ಟೈಮ್ಸ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ರಶ್ಮಿಕಾ ಮಂದಣ್ಣ, ಮೊದಲ ಸ್ಥಾನಕ್ಕೇರಿದ್ದು, ಹೊಸ ಸಾಧನೆ ಮಾಡಿದ್ದಾರೆ. ಎರಡನೇ ಭಾರಿಗೆ ರಶ್ಮಿಕಾ ಟೈಮ್ಸ್ ಪಟ್ಟಿಯಲ್ಲಿ ಬಂದಿದ್ದು, ಮೊದಲ ಸಲ ರಶ್ಮಿಕಾ ಮಂದಣ್ಣ 2014 ರಲ್ಲಿ ಪ್ರೆಶ್ ಪೇಸ್ ಗೌರವಕ್ಕೆ ಪಾತ್ರವಾಗಿದ್ದರು.

ಬೆಂಗಳೂರಿನ ಟೈಮ್ಸ್ ಪತ್ರಿಕೆ ಪ್ರತಿವರ್ಷದಂತೆ ಈ ವರ್ಷವೂ ಮೋಸ್ಟ್ ಡಿಸೈರಬಲ್ ವುಮನ್ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ರಶ್ಮಿಕಾ ಮೋಸ್ಟ್ ಡಿಸೈರಬಲ್ ವುಮನ್ 2020 ಪಟ್ಟ ಅಲಂಕರಿಸಿದ್ದಾರೆ.

https://kannada.newsnext.live/rural-hospital-apointed-doctors-governament/

ಈಗಾಗಲೇ ರಶ್ಮಿಕಾ ಮಂದಣ್ಣ ಅವರನ್ನು ಗೂಗಲ್ ನ್ಯಾಶನಲ್ ಕ್ರಶ್ ಎಂದು ಘೋಷಿಸಿದೆ. ತಮ್ಮ ಮುದ್ದಾದ ಅಭಿನಯದಿಂದ ಮನೆಮಾತಾಗಿರುವ ರಶ್ಮಿಕಾ, ತೆಲುಗು,ತಮಿಳಿನಲ್ಲಿ ಬಹುಬೇಡಿಕೆಯ ನಟಿಯಾಗಿದ್ದು, ಬಾಲಿವುಡ್ ನಲ್ಲಿ ಎರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

https://kannada.newsnext.live/sandalwood-shree-harsha-singer-marriage-gouthami-mysore/

ಬಾಲಿವುಡ್ ಗೆ ಕಾಲಿಟ್ಟ ರಶ್ಮಿಕಾ ಎರಡನೇ ಸಿನಿಮಾದಲ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್  ಜೊತೆ  ನಟಿಸುವ ಅವಕಾಶ ಪಡೆದಿದ್ದು, ಗುಡ್ ಬೈ ಸಿನಿಮಾದಲ್ಲಿ ರಶ್ಮಿಕಾ ಬಿಗ್ ಬಿ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ .

ಟೈಂ ಗ್ರೂಪ್ಸ್ ನ ಇದೇ ಸ್ಪರ್ಧೆಯಲ್ಲಿ ಯಶ್ ಮೋಸ್ಟ್ ಡಿಸೈರಬಲ್ ಮ್ಯಾನ್ ಗೌರವಕ್ಕೆ ಪಾತ್ರವಾಗಿದ್ದು, ಎರಡನೇ ಸ್ಥಾನದಲ್ಲಿ ಕನ್ನಡಿಗರ ಕ್ರಿಕೆಟರ್ ಕೆ.ಎಲ್.ರಾಹುಲ್ ಸ್ಥಾನ ಪಡೆದಿದ್ದಾರೆ.

Comments are closed.