ಕೊರೊನಾ ಲಸಿಕೆ ಹಾಕಿಸಿ ಕೊಂಡ್ರೆ ಕೇಂದ್ರ ಸರಕಾರ ಕೊಡುತ್ತೆ 5,000 ರೂಪಾಯಿ…!!!

ನವದೆಹಲಿ : ಕೊರೊನಾ ವೈರಸ್ ಸೋಂಕು ಆರ್ಭಟಿಸುತ್ತಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇದೀಗ ಲಸಿಕೆ ಹಾಕಿಸುವ ಕಾರ್ಯ ಆರಂಭಗೊಂಡಿದೆ. ಈ ನಡುವಲ್ಲೇ ಲಸಿಕೆ ಹಾಕಿಸಿಕೊಂಡ್ರೆ ನಿಮಗೆ 5 ಸಾವಿರ ರೂಪಾಯಿ ಬಹುಮಾನ ಸಿಗೋದು ಗ್ಯಾರಂಟಿ.

ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಕೂಡ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಕೇಂದ್ರ ಸರಕಾರ ಕೊರೊನಾ ಲಸಿಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯು ತ್ತಿದೆ‌. ಇದೀಗ ಕೇಂದ್ರ ಸರಕಾರವೇ ಲಸಿಕೆ ಪಡೆದು ಕೊಳ್ಳುವವರಿಗೆ 5,000 ರೂಪಾಯಿ ಬಹುಮಾನವನ್ನು ಗೆಲ್ಲುವ ಅವಕಾಶ ಕಲ್ಪಿಸಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವನ್ನ ಕಲ್ಪಿಸಲಾಗಿದೆ. mygov.in ವೆಬ್ ಸೈಟ್ ಮೂಲಕ‌ ಈ ಸ್ಪರ್ಧೆಯಲ್ಲಿ ಭಾಗವಹಿಸ ಬಹು ದಾಗಿದೆ. ಲಸಿಕೆ ಪಡೆದವರು ಹಾಗೂ‌ ಮನೆಯವರು ಕೂಡ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸ್ಪರ್ಧೆ ಯಲ್ಲಿ ‌ಭಾಗವಹಿಸಲು ನಿಮ್ಮ ಪೋಟೋ ಅಪ್‌ಲೋಡ್ ಮಾಡಬೇಕು. ಜೊತೆಗೆ ಲಸಿಕೆಯ ಪ್ರಾಮುಖ್ಯತೆಯ ಜೊತೆಗೆ ಜನರಿಗೆ ಲಸಿಕೆಯನ್ನು ಪಡೆಯಲು ಜನರನ್ನು ಪ್ರೇರೆಪಿಸುವ ಟ್ಯಾಗ್ ಲೈನ್ ಬರೆಯಬೇಕು.

mygov.in ವೆಬ್ ಸೈಟ್ ನಲ್ಲಿ ಈ ಸ್ಪರ್ಧೆಯ ಆಯ್ಕೆಯಲ್ಲಿ ಕೋರಲಾದ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ನಿಮ್ಮ ಪ್ರವೇಶವನ್ನು ಸಲ್ಲಿಸಿ. ಇದರ ನಂತರ ಸರ್ಕಾರದಿಂದ ಅತ್ಯುತ್ತಮ ಫೋಟೋಗಳು ಮತ್ತು ಟ್ಯಾಗ್ ಲೈನ್ ಆಯ್ಕೆ ಮಾಡಲಾಗುತ್ತದೆ.

10 ಅತ್ಯುತ್ತಮ ಬರಹಗಳಿಗೆ  ಬಹುಮಾನವಾಗಿ ತಿಂಗಳಿಗೆ 5000 ರೂ. ನೀಡಲಾಗುವುದು ಎಂದು mygov ನ ಅಧಿಕೃತ ಟ್ವೀಟ್ ನಲ್ಲಿ ತಿಳಿಸ ಲಾಗಿದೆ. ಇನ್ಯಾಕೆ ತಡ ಲಸಿಕೆ ಪಡೆಯಿರಿ, ಬಹುಮಾನವನ್ನು ಗಳಿಸಿಕೊಳ್ಳಿ. ಅಂದಹಾಗೆ ಈ ಸ್ಪರ್ಧೆಯಲ್ಲಿ ನೀವು 2021 ರ ಡಿಸೆಂಬರ್ 31 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Comments are closed.