ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ನಡುವಲ್ಲೇ ರಾಜ್ಯದಾದ್ಯಂತ ಹವಾನಿಯಂತ್ರಿತ ಬಸ್ ಗಳ ಓಡಾಟಕ್ಕೆ ಕೆಎಸ್ಆರ್ ಟಿಸಿ ನಿರ್ಧಾರ ಮಾಡಿದೆ. ಆರಂಭಿಕ ಹಂತದಲ್ಲಿ 8 ಕಡೆಗಳಿಗೆ ಬಸ್ ಸಂಚಾರ ಆರಂಭಿಸಲಿದೆ.

ಕೊರೊನಾ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ಬಸ್ ಗಳ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿತ್ತು.
ಬೆಂಗಳೂರಿನಿಂದ ಮಂಗಳೂರು, ಕುಂದಾಪುರ, ಮೈಸೂರು, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ವಿರಾಜಪೇಟೆಗೆ ಬಸ್ ಸಂಚಾರ ಮಾಡಲಿದೆ.

ಪರಿಸ್ಥಿತಿಯನ್ನು ನೋಡಿಕೊಂಡು ಹಂತ ಹಂತವಾಗಿ ಇತರ ಜಿಲ್ಲೆಗಳಿಗೂ ಹವಾನಿಯಂತ್ರಿತ ಬಸ್ ಸಂಚಾರ ಆರಂಭಿಸುವುದಾಗಿ ಕೆಎಸ್ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.