ಮುಂಬೈ: ಕೊರೊನಾ ವೈರಸ್ ಎರಡನೇ ಅಲೆಯ ಅಬ್ಬರ ಸ್ವಲ್ಪ ಕಡಿಮೆಯಾಗುತ್ತಲೇ ಇದೀಗ ಮೂರನೇ ಅಲೆಯ ಆತಂಕ ಶುರುವಾಗಿದೆ. ಮುಂದಿನ ಎರಡರಿಂದ ನಾಲ್ಕು ವಾರಗಳಲ್ಲಿ ಕೊರೊನಾ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಭೀಕರವಾಗಿತ್ತು. ಮಾತ್ರವಲ್ಲ ಮರಣ ಮೃದಂಗವನ್ನೇ ಬಾರಿಸಿತ್ತು. ಅಕ್ಟೋಬರ್ ತಿಂಗಳಲ್ಲಿ ಮೂರನೇ ಅಲೆ ಆರಂಭವಾಗುತ್ತೆ ಅಂತಾ ಈ ಹಿಂದೆ ತಜ್ಞರು ಎಚ್ಚರಿಕೆಯನ್ನು ನೀಡಿದ್ದರು. ಆದ್ರೀ ಕೊರೊನಾ ಮೂರನೇ ಅಲೆ ಮುಂದಿನ ಎರಡರಿಂದ ನಾಲ್ಕು ವಾರಗಳಲ್ಲಿ ಅಪ್ಪಳಿಸಲಿದೆ ಎಂದು ಎಚ್ಚರಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ್ದ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತಗ್ಗಿದ ಹಿನ್ನೆಲೆಯಲ್ಲಿ 5ನೇ ಹಂತದಲ್ಲಿ ಅನ್ ಲಾಕ್ ಜಾರಿ ಮಾಡಲಾಗಿದೆ. ಆದ್ರೀಗ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದೆ ಇದ್ರೆ ಮೂರನೇ ಅಲೆ ಬೇಗನೆ ಬರುವ ಸಾಧ್ಯತೆಯಿದೆ. ಎರಡನೇ ಅಲೆಗಿಂತ ಮೂರನೇ ಅಲೆ ಅತೀ ವೇಗವಾಗಿ ಹರಡುವ ಸಾಧ್ಯತೆಯಿದ್ದು, ಹೆಚ್ಚು ಜನರನ್ನು ಹೆಮ್ಮಾರಿ ಕಾಡುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಕೋವಿಡ್ ಕಾರ್ಯ ಪಡೆದ ರಾಜ್ಯ ಸರಕಾರಕ್ಕೆ ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಬವ್ ಠಾಕ್ರೆ ನೇತೃತ್ವದಲ್ಲಿ ಕೋವಿಡ್ ಕಾರ್ಯ ಪಡೆಯ ಸಭೆ ನಡೆಯಿತು. ಸಭೆಯಲ್ಲಿ ತಜ್ಞರು ಸರಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. ಅಲ್ಲಲೇ ಮೂರನೇ ಅಲೆ ಅಪ್ಪಳಿಸುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ವಿದೇಶಗಳಲ್ಲಿ ಈಗಾಗಲೇ ಮೂರನೇ ಅಲೆ ಆರಂಭವಾಗಿದೆ. ಅಲ್ಲದೇ ಬಹುತೇಕ ರಾಷ್ಟ್ರಗಳಲ್ಲಿ ಎರಡನೇ ಅಲೆ ಕಡಿಮೆಯಾದ ಎರಡರಿಂದ ಮೂರು ವಾರಗಳಲ್ಲಿಯೇ ಮೂರನೇ ಅಲೆ ಕಾಣಿಸಿಕೊಂಡಿತ್ತು. ಇದೀಗ ದೇಶದಲ್ಲಿಯೂ ಅದೇ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಕಾರ್ಯಪಡೆಯ ಸದಸ್ಯ ಡಾ.ಶಶಾಂಕ್ ಜೋಷಿ ತಿಳಿಸಿದ್ದಾರೆ