Fuel Price : ಬೆಂಗಳೂರಲ್ಲಿ ಶತಕ ಬಾರಿಸಿದ ಪೆಟ್ರೋಲ್

ಬೆಂಗಳೂರು : ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100.23 ರೂಪಾಯಿ ಆಗಿದ್ದು, ಈ ಮೂಲಕ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ನೂರು ರೂಪಾಯಿ ಗಡಿದಾಟಿದ್ದರೂ ಕೂಡ, ಬೆಂಗಳೂರಲ್ಲಿ ಮಾತ್ರ 90 ರೂಪಾಯಿ ಆಸುಪಾಸಿನಲ್ಲಿತ್ತು. ನಿನ್ನೆ ಪೆಟ್ರೋಲ್ ಬೆಲೆ 99.95 ರೂ. ಆಗಿದ್ರೆ ಡಿಸೇಲ್ ಬೆಲೆ 92.38 ರೂಪಾಯಿಯಿತ್ತು. ಆದ್ರಿಂದು ಪೆಟ್ರೋಲ್ ಬಲೆಯೆಲ್ಲಿ 28 ಪೈಸೆ ಏರಿಕೆ ಕಂಡಿದೆ. ಈ ಮೂಲಕ ಪೆಟ್ರೋಲ್ ಬೆಲೆ ನೂರರ ಗಡಿದಾಟಿದೆ.

ಪೆಟ್ರೋಲ್ ಬೆಲೆ ಬೆಂಗಳೂರಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇನ್ನು ಡಿಸೇಲ್ ಬೆಲೆಯಲ್ಲಿಯೂ ಏರಿಕೆಯನ್ನು ಕಾಣುತ್ತಿದ್ದು, ಡಿಸೇಲ್ ಲೀಟರ್ ಗೆ 44 ಪೈಸೆ ಏರಿಕೆ ಕಂಡಿದ್ದು, ಒಂದು ಲೀಟರ್ ಡಿಸೇಲ್ ಗೆ 93.02 ರೂಪಾಯಿಯಿದೆ.

ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಮಾತ್ರವಲ್ಲದೇ ಡಿಸೇಲ್ ಬೆಲೆ ಕೂಡ ನೂರರ ಗಡಿದಾಟಿದೆ. ಸದ್ಯದಲ್ಲಿಯೇ ಡಿಸೇಲ್ ಬೆಲೆ ಕೂಡ ರಾಜ್ಯದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಕೊರೊನಾ ಸೋಂಕಿನಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ಜನತೆಗೆ ಇದೀಗ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

Comments are closed.