Cow Hug Day: ಹಸುಗಳ ಅಪ್ಪುಗೆಯಿಂದ ನಿವಾರಣೆಯಾಗುತ್ತೆ ಮಾನಸಿಕ ಒತ್ತಡ

ಭಾರತದಲ್ಲಿ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಈ ದಿನವನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ‘ಹಸು ಅಪ್ಪುಗೆಯ ದಿನ’ (Cow Hug Day) ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಹಸು ಅಪ್ಪುಗೆಯ ದಿನದ ಬೆನ್ನಲ್ಲೇ ಸಾಕಷ್ಟು ಮೀಮ್ಸ್ ಗಳು, ಹಾಸ್ಯದ ತುಳುಕುಗಳು ಹರಿದಾಡಲು ಆರಂಭಿಸಿವೆ. ಆದರೆ ಇವುಗಳ ಹೊರತಾಗಿ ಹಸುಗಳನ್ನು ಅಪ್ಪುವುದರಿಂದ ಆರೋಗ್ಯದ ದೃಷ್ಟಿಯಿಂದ ಹಲವು ಅನುಕೂಲಗಳಿವೆ (cow hugging has benefits) ಅನ್ನೋದು ಹಲವರಿಗೆ ಗೊತ್ತೇ ಇಲ್ಲಾ.

ಸಾಕು ಪ್ರಾಣಿಗಳನ್ನು ಒತ್ತಡ ನಿವಾರಕ ಎಂದು ಕರೆಯಲಾಗುತ್ತದೆ. ಬಹುತೇಕರು ಮನೆಗಳಲ್ಲಿ ನಾಯಿ, ಬೆಕ್ಕುಗಳನ್ನು ಸಾಕುವುದರ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ಈ ಪ್ರಾಣಿಗಳು ಮನುಷ್ಯನ ಒತ್ತಡವನ್ನು ನಿವಾರಣೆ ಮಾಡುತ್ತವೆ. ಇನ್ನೂ ಹಲವರು ಉದ್ಯೋಗದ ದೃಷ್ಟಿಯಿಂದ ಹಸುಗಳನ್ನು ಸಾಕುತ್ತಾರೆ. ಹಾಲು ಕೊಡುವುದು ಮಾತ್ರವಲ್ಲ, ಆರೋಗ್ಯ, ಔಷಧದ ದೃಷ್ಟಿಯಿಂದಲೂ ಹಸುಗಳು ಹೆಚ್ಚು ಪ್ರಯೋಜನಕಾರಿ. ಅದ್ರಲ್ಲೂ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಅನ್ನೋದು ಸಂಶೋಧನೆಗಳಿಂದಲೇ ದೃಢಪಟ್ಟಿವೆ.

ನೆದರ್‌ಲ್ಯಾಂಡ್ಸ್‌ನಲ್ಲಿ, ಡಚ್‌ನಲ್ಲಿ ಹಸುವನ್ನು ತಬ್ಬಿಕೊಳ್ಳುವುದು (koe knuffelen ) ಅಭ್ಯಾಸವು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮನುಷ್ಯನ ಹಲವು ಮಾನಸಿಕ ಸಮಸ್ಯೆಗಳನ್ನು ನಿತ್ಯವೂ ಹಸುಗಳ ಅಪ್ಪುಗೆ ಪಡೆಯುವುದರಿಂದ ನಿವಾರಿಸಿಕೊಳ್ಳಬಹುದಾಗಿದೆ.2020ರಿಂದೀಚೆಗೆ ಬಹುತೇಕ ರಾಷ್ಟ್ರಗಳಲ್ಲಿ ಒತ್ತಡಕ್ಕೆ ಒಳಗಾದವರು ಹಸುಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಹಸುಗಳ ಪಾಲನೆ, ಪೋಷಣೆ ಇಲ್ಲಾ ಹಸುಗಳ ಜೊತೆಗೆ ನಿತ್ಯವೂ ಮೂರು ಗಂಟೆಗಳ ಕಾಲ ಕಾಲ ಕಳೆಯುವುದರಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ : Cow hug day: ಫೆಬ್ರವರಿ 14 ಪ್ರೇಮಿಗಳ ದಿನದ ಬದಲು “ಕೌ ಹಗ್‌ ಡೇ” ದಿನವನ್ನಾಗಿ ಆಚರಿಸಿ: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ

ಇನ್ನು ಹಸುವಿನ ಕಡ್ಲಿಂಗ್ ಥೆರಪಿ ಟ್ರೆಂಡ್ ಅಮೇರಿಕಾದಲ್ಲಿ ಹೆಚ್ಚು ಜನಪ್ರಿಯವಾಗಿದೆ, ಅಲ್ಲದೇ ವ್ಯಾಪಾರದ ದೃಷ್ಟಿಯಿಂದಲೂ ಈ ಥೆರಪಿಯನ್ನು ಮಾಡುವ ಜನರಿದ್ದಾರೆ. ನೀವು ಹಸುವಿನ ಜೊತೆ ಮುದ್ದಾಡಿದಾಗ, ನಿಮ್ಮ ಮೆದುಳು ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡುತ್ತದೆ.ಅದು ನಿಮಗೆ ಹಸುವಿನೊಂದಿಗಿನ ಬಾಂಧವ್ಯ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. ನೀವು ಹಸುವಿನ ಜೊತೆ ಮುದ್ದಾಡಿದಾಗ, ನಿಮ್ಮ ಮೆದುಳು ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಹಸುಗಳನ್ನು ಅಪ್ಪಿಕೊಳ್ಳುವುದು – ಅದು ಪ್ರಾಣಿ ಅಥವಾ ಮನುಷ್ಯ – ಬಂಧ, ಪ್ರೀತಿ, ಸಂತೋಷ ಮತ್ತು ಕಡಿಮೆ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ ಅನ್ನುವುದು ವಿಶ್ವದಾದ್ಯಂತ ನಡೆದಿರುವ ಹಲವು ಸಂಶೋಧನೆಗಳಿಂದ ಬಯಲಾಗಿದೆ.

ಹಸುವಿನ ನಿಧಾನಗತಿಯ ಹೃದಯ ಬಡಿತ, ಬೆಚ್ಚಗಿನ ದೇಹದ ಉಷ್ಣತೆ ಮತ್ತು ದೊಡ್ಡ ಗಾತ್ರದ ಕಾರಣ, ಹಸುವನ್ನು ತಬ್ಬಿಕೊಳ್ಳುವುದು ಮಾನವರಿಗೆ ಹಿತವಾದ ಅನುಭವವನ್ನು ನೀಡುತ್ತದೆ. ಅಲ್ಲದೇ ಎಷ್ಟೇ ಮಾನಸಿಕ ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಿಗೂ ಕೂಡ ವಿಶ್ರಾಂತಿ ನೀಡುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಕೇರಿಂಗ್ ಸೈನ್ಸಸ್‌ನಲ್ಲಿನ ‘ಮಾನಸಿಕ ಆರೋಗ್ಯದಲ್ಲಿ ಪ್ರಾಣಿಗಳ ಸಹಾಯದ ಚಿಕಿತ್ಸೆಯ ಪ್ರಯೋಜನಗಳು’ ಎಂಬ ಶೀರ್ಷಿಕೆಯ ಲೇಖನದ ಪ್ರಕಾರ, ಪ್ರಾಣಿಗಳ ಸಂಪರ್ಕವು ಜನರ ಯೋಗಕ್ಷೇಮಕ್ಕೆ ಅಪಾರವಾದ ಕೊಡುಗೆಗಳನ್ನು ನೀಡುತ್ತದೆ. “ಪ್ರಾಣಿಗಳೊಂದಿಗೆ ಸಂಪರ್ಕಿಸಿದಾಗ, ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳಂತಹ ನರಪ್ರೇಕ್ಷಕಗಳು ಬಿಡುಗಡೆಯಾಗುತ್ತವೆ ಎಂದು ತಜ್ಞರು ಸೂಚಿಸಿದ್ದಾರೆ. ಇದು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನ್‌ಗಳ ಸ್ರವಿಸುವಿಕೆಯನ್ನು ಕಡಿಮೆ ಮಾಡುವಾಗ ಸಂತೋಷ ಮತ್ತು ಶಾಂತತೆಯ ಭಾವನೆಯನ್ನು ಉಂಟುಮಾಡುತ್ತದೆ, ಇದು ರಕ್ತವನ್ನು ಕಡಿಮೆ ಮಾಡಲು ಮತ್ತಷ್ಟು ಕೊಡುಗೆ ನೀಡುತ್ತದೆ.

ಇದನ್ನೂ ಓದಿ : Cow National animal : ಹಸುವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿ ; ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಪ್ರಾಣಿ-ಸಹಾಯದ ಚಿಕಿತ್ಸೆಯು ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ಪೂರಕವಾದ ವಿಧಾನವಾಗಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹಲವಾರು ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ. ಖಿನ್ನತೆ, ಸ್ವಲೀನತೆ, ಬುದ್ಧಿಮಾಂದ್ಯತೆ, ಸ್ಕಿಜೋಫ್ರೇನಿಯಾದಂತಹ ರೋಗನಿರ್ಣಯವನ್ನು ಹೊಂದಿರುವ ರೋಗಿಗಳಲ್ಲಿ ಇದರ ಅನುಷ್ಠಾನವು ಅವರ ವ್ಯಕ್ತಿತ್ವ, ನಡವಳಿಕೆ ಮತ್ತು ದೈಹಿಕ ಆರೋಗ್ಯದಲ್ಲಿ ಬದಲಾವಣೆಗಳನ್ನು ಸಾಧಿಸಬಹುದು ಎಂದು ಲೇಖನದಲ್ಲಿ ಹೇಳಲಾಗಿದೆ. ಭಾರತದಲ್ಲಿ ಗೋವುಗಳನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂಬ ಭಾವನೆಯಿದೆ. ಬಹುತೇಕರ ಮನೆಗಳಲ್ಲಿ ಇಂದಿಗೂ ಹಸುಗಳನ್ನು ಹೈನುಗಾರಿಕೆಯ ಉದ್ದೇಶದ ಹೊರತಾಗಿಯೂ ಸಾಕುವ ಪರಿಪಾಠವಿದೆ. ಇನ್ನು ಗ್ರಾಮೀಣ ಭಾಗದಲ್ಲಿನ ಜನರು ಹಸುಗಳನ್ನು ತಮ್ಮ ಮಕ್ಕಳಂತೆಯೇ ಸಾಕಿ, ಸಲಹುತ್ತಾರೆ. ಹಸುಗಳ ಪಾಲನೆ ಪೋಷಣೆ ಮಾಡುವವರು ಪ್ರತಿನಿತ್ಯವೂ ಕೂಡ ಹಸುಗಳನ್ನು ತಬ್ಬಿಕೊಳ್ಳುತ್ತಾರೆ. ಹೀಗೆ ಹಸುಗಳನ್ನು ತಬ್ಬಿಕೊಳ್ಳುವುದರಿಂದ ಬಹುತೇಕರಿಗೆ ರಿಲ್ಯಾಕ್ಸ್ ಸಿಕ್ಕಿದೆ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಗರ, ಮಹಾನಗರಗಳಲ್ಲಿ ವಾಸಿಸುವ ಜನರಿಗೆ ಇದು ಹೊಸದಾಗಿ ಕಾಣಿಸುತ್ತದೆಯಷ್ಟೆ.

ಇನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಹಸುಗಳ ಅಪ್ಪುಗೆಯ ದಿನದ ಮಹತ್ವವನ್ನು ತನ್ನ ಮನವಿಯಲ್ಲಿ ಹೇಳಿಕೊಂಡಿದೆ. ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು, ನಮ್ಮ ಜೀವನವನ್ನು ಉಳಿಸಿಕೊಳ್ಳುತ್ತದೆ ಮತ್ತು ಜಾನುವಾರು ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ತಾಯಿ, ಎಲ್ಲವನ್ನು ನೀಡುವವಳು, ಮಾನವೀಯತೆಗೆ ಐಶ್ವರ್ಯವನ್ನು ಒದಗಿಸುವ ಅದರ ಪೋಷಣೆಯ ಸ್ವಭಾವದಿಂದಾಗಿ ಇದನ್ನು ‘ಕಾಮಧೇನು’ ಮತ್ತು ‘ಗೌಮಾತಾ’ ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತದ ಹಲವಾರು ಸಂಸ್ಕೃತಿಗಳಲ್ಲಿ ಹಸುವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.ಜಾಗತಿಕವಾಗಿ, ಗ್ರಾಮೀಣ ಭಾಗಗಳಲ್ಲಿಯೂ ಹಸುಗಳನ್ನು ಸಾಕುವ ಸಂಸ್ಕೃತಿ ಇರುವಲ್ಲೆಲ್ಲಾ, ಭಾವನಾತ್ಮಕ ಮತ್ತು ಮಾನಸಿಕ ಮಟ್ಟದಲ್ಲಿ ಹಸುಗಳೊಂದಿಗೆ ಬಾಂಧವ್ಯವನ್ನು ಹೊಂದಿದೆ. ಪಶ್ಚಿಮದಲ್ಲಿ, ಹಸುವನ್ನು ಅಪ್ಪಿಕೊಳ್ಳುವುದು ಇಂದು ಜನಪ್ರಿಯ ಕ್ಷೇಮ ಪ್ರವೃತ್ತಿಯಾಗಿದೆ ಮತ್ತು ಭಾರತವು ಹೊಸ ಹೆಸರಿನೊಂದಿಗೆ ಆಚರಿಸುತ್ತಿದೆ ಅಷ್ಟೇ ಎಂದಿದೆ.

ಪ್ರೇಮಿಗಳ ದಿನಾಚರಣೆಯ ದಿನದಂದೇ ಕೌವ್ ಹಗ್ ಡೇ ಆಚರಿಸಲು ಮನವಿ ಮಾಡಿರುವುದು ಇದೀಗ ವಿವಾದವನ್ನು ಹುಟ್ಟುಹಾಕಿದೆ. ಆದರೆ ದನಗಳನ್ನು ತಬ್ಬಿಕೊಳ್ಳುವುದು ಹಲವು ರೀತಿಯಲ್ಲಿ ಸಹಕಾರಿಯಾಗುತ್ತಿದೆ ಅನ್ನೋದನ್ನು ಜಾಗತಿಕವಾಗಿಯೂ ಒಪ್ಪಿಕೊಂಡಿದ್ದಾರೆ. ಮನೆಯಲ್ಲಿ ಮುದ್ದಿನಿಂದ ಸಾಕುವ ದನವನ್ನು ವರ್ಷದಲ್ಲೊಮ್ಮೆಯಾದ್ರೂ ತಬ್ಬಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಅಂತಾ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

cow hugging has benefits Valentines day Declared Animal Welfare Board of India Cow Hug Day

Comments are closed.