Ball Tampering : ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್: ರವೀಂದ್ರ ಜಡೇಜಾ ಮಾಡಿದ್ದೇನು ? ಇಲ್ಲಿದೆ ಸಂಪೂರ್ಣ ವಿವರ

ನಾಗ್ಪುರ : ( Ball Tampering ): ಆಸ್ಟ್ರೇಲಿಯಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಆಸ್ಟ್ರೇಲಿಯಾ (India vs Australia ) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಐದು ವಿಕೆಟ್ ಕಬಳಿಸುವ ಮೂಲಕ ರವೀಂದ್ರ ಜಡೇಜಾ ಭರ್ಜರಿ ಪುನರಾಗಮನ ಮಾಡಿದ್ದಾರೆ. 22 ಓವರ್‌ ಬೌಲಿಂಗ್ ಮಾಡಿರುವ ಜಡೇಜಾ 47 ರನ್ ನೀಡಿ 5 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತವು ಆಸ್ಟ್ರೇಲಿಯಾವನ್ನು 177ರನ್ ಗಳಿಗೆ ಕಟ್ಟಿಹಾಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 177 ರನ್‌ಗಳಿಗೆ ಸರ್ವ ಪತನ ಕಂಡಿತ್ತು. ನಂತರ ಬ್ಯಾಟಿಂಗ್ ನಡೆಸಿರುವ ಭಾರತ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರನ್ನು ಕಳೆದುಕೊಂಡು, ಮೊದಲ ದಿನದ ಅಂತ್ಯಕ್ಕೆ 77ರನ್ ಗಳಿಸಿದೆ. ಅತಿಥೇಯ ಭಾರತ ತಂಡ 100 ರನ್‌ಗಳ ಹಿನ್ನೆಲೆಯಲ್ಲಿದ್ದು, ಆಸ್ಟ್ರೇಲಿಯಾ ವಿರುದ್ದ ಬಿಗಿ ಹಿಡಿತ ಸಾಧಿಸಿದೆ. ಈ ನಡುವಲ್ಲೇ ಮೊದಲ ಟೆಸ್ಟ್ ಪಂದ್ಯದ ವೇಳೆಯಲ್ಲಿ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ಅವರ ವಿಡಿಯೋವೊಂದು ಇದೀಗ ಬಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ರವೀಂದ್ರ ಜಡೇಜಾ ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಅನ್ನೋ ಆರೋಪಗಳಿಗೆ ಎಡೆ ಮಾಡಿಕೊಟ್ಟಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಾರೀ ಸದ್ದು ಮಾಡುತ್ತಿದೆ. ಇನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್ ಕೂಡ ಪ್ರತಿಕ್ರಿಯಿಸಿದ್ದಾರೆ. ಅಲೆಕ್ಸ್ ಕ್ಯಾರಿ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆಯಲ್ಲಿ ಆಸ್ಟ್ರೇಲಿಯಾ ಕೇವಲ 120 ರನ್‌ಗಳಿಸಿತ್ತು. ಆಸ್ಟ್ರೇಲಿಯಾ ಈಗಾಗಲೇ ಅರ್ಧದಷ್ಟು ತಂಡವನ್ನು ಕಳೆದುಕೊಂಡಿದ್ದಾಗ ಈ ಘಟನೆ ನಡೆದಿದೆ. ಕ್ಯಾಮರಾಮನ್ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಅನ್ನು ಒಟ್ಟಿಗೆ ಸೆರೆಹಿಡಿಯಿತು. ಈ ವೇಳೆಯಲ್ಲಿ ಇಬ್ಬರ ನಡುವೆ ಏನು ನಡೆದಿದೆ ಅನ್ನೋದು ಸ್ಪಷ್ಟವಾಗಿಲ್ಲ.

ಆದರೆ ರವೀಂದ್ರ ಜಡೇಜಾ ತೋರು ಬೆರಳನ್ನು ಉಜ್ಜಿಕೊಂಡು ಬೌಲಿಂಗ್ ಮುಂದುವರಿಸಿದರು. ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಪೈನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇನ್ನು ಆಸ್ಟ್ರೇಲಿಯಾದ ಪ್ರಮುಖ ಮಾಧ್ಯಮ FOX ಕ್ರಿಕೆಟ್ ಇಡೀ ಘಟನೆಯ ಕುರಿತು ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಸಿರಾಜ್ ಕೂಡ ಪ್ರತಿಕ್ರಿಯಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನಡೆದಿರುವ ಈ ಘಟನೆ ಚರ್ಚೆಗೆ ಅವಕಾಶ ಕಲ್ಪಿಸಿದೆ.

ಮೊದಲ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿರುವ ರವೀಂದ್ರ ಜಡೇಜಾ ತಮ್ಮ ಪ್ರದರ್ಶನದಿಂದ ರೋಮಾಂಚನಗೊಂಡಿದೆ ಎಂದಿದ್ದಾರೆ. ನಾನು ಬೌಲಿಂಗ್ ಮಾಡಿದ ರೀತಿ ನನಗೆ ಸಂತೋಷವನ್ನು ಕೊಟ್ಟಿದೆ. ಐದು ತಿಂಗಳ ನಂತರ ನಾನು ಟೆಸ್ಟ್ ಕ್ರಿಕೆಟ್ ಆಡುವುದು ನನಗೆ ಕಠಿಣ ಎನಿಸಿದೆ. ಅದಕ್ಕೆ ನಾನು ಸಿದ್ದತೆ ಮಾಡಿಕೊಂಡಿದ್ದೆ. ಎನ್ ಸಿಎಯಲ್ಲಿ ಸಾಕಷ್ಟು ಕೌಶಲಗಳನ್ನು ಕರಗತ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : Mayank Agarwal Double Century: ಮಯಾಂಕ್ ಮ್ಯಾಜಿಕ್; ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಕರ್ನಾಟಕ ಕ್ಯಾಪ್ಟನ್

ಇದನ್ನೂ ಓದಿ : Ravindra Jadeja : ಕಂಬ್ಯಾಕ್ ಪಂದ್ಯದಲ್ಲೇ ಜಡೇಜಾ ಭರ್ಜರಿ ಬೌಲಿಂಗ್, ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಕಾಂಗರೂಗಳು

Ball Tampering in India vs Australia match what Ravindra Jadeja did complete details here

Comments are closed.