ಗುಜರಾತ್ : Jignesh Mevani : 2016ರಲ್ಲಿ ಗುಜರಾತ್ ವಿಶ್ವ ವಿದ್ಯಾಲಯ ಸಮೀಪ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ದಲಿತ ನಾಯಕ ಹಾಗೂ ಶಾಸಕ ಜಿಗ್ನೇಶ್ ಮೇವಾನಿಗೆ ಗುಜರಾತ್ನ ಅಹಮದಾಬಾದ್ನಲ್ಲಿರುವ ಸ್ಥಳೀಯ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದಲ್ಲಿ ಜಿಗ್ನೇಶ್ ಮೇವಾನಿ ಜೊತೆಯಲ್ಲಿ ಇನ್ನೂ 18 ಮಂದಿಗೆ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಗುಜರಾತ್ನಲ್ಲಿ ಪಕ್ಷೇತರ ಶಾಸಕನಾಗಿರುವ ಜಿಗ್ನೇಶ್ ಮೇವಾನಿ 2016ರಲ್ಲಿ ತಮ್ಮ ಬೆಂಬಲಿಗರ ಜೊತೆಯಲ್ಲಿ ಸೇರಿಕೊಂಡು ಗುಜರಾತ್ನ ವಿಶ್ವವಿದ್ಯಾಲಯದಲ್ಲಿರುವ ಲಾ ಭವನ್ ಕಟ್ಟಡಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಹೆಸರನ್ನು ಇಡಬೇಕೆಂದು ಆಗ್ರಗಿಸಿ ಗುಜರಾತ್ನ ವಿಶ್ವ ವಿದ್ಯಾಲಯ ಸಮೀಪದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು ಈ ಪ್ರತಿಭಟನೆಯಲ್ಲಿ ಭಾಗಿಯಾದವರಿಗೆ ಗುಜರಾತ್ನ ಅಹಮದಾಬಾದ್ನಲ್ಲಿರುವ ಸ್ಥಳೀಯ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 700 ರೂಪಾಯಿ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.
ಇದು ಮಾತ್ರವಲ್ಲದೇ ಶಾಸಕ ಜಿಗ್ನೇಶ್ ಮೇವಾನಿ ಮೇ ತಿಂಗಳಲ್ಲಿ ಅನುಮತಿ ಪಡೆಯದೇ ಆಜಾದಿ ಮೆರವಣಿಗೆ ನಡೆಸಿದ್ದ ಒಂಬತ್ತು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಮೆಹ್ಸನಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂರು ತಿಂಗಳು ಜೈಲು ಶಿಕ್ಷೆಯನ್ನು ನೀಡಿತ್ತು. ಇದಾದ ಬಳಿಕ ಇದೀಗ ಮತ್ತೆ ಜಿಗ್ನೇಶ್ ಮೇವಾನಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಜಿಗ್ನೇಶ್ ಮೇವಾನಿ ನೇತೃತ್ವದ ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್ನ ಕೆಲವು ಸದಸ್ಯರು ಹಾಗೂ ಎನ್ಸಿಪಿ ಪದಾಧಿಕಾರಿ ರಷ್ಮಾ ಪಟೇಲ್ ಸೇರಿದಂತೆ ಹತ್ತು ಮಂದಿ 2017ರ ಜುಲೈ ತಿಂಗಳಲ್ಲಿ ಭಾರತೀಯ ದಂಡ ಸಂಹಿತೆ 143ರ ಅಡಿಯಲ್ಲಿ ಅಕ್ರಮ ಕೂಡುವಿಕೆ ನಡೆಸಿದ್ದ ಪ್ರಕರಣದಲ್ಲಿ ದೋಷಿ ಎಂದು ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಜೆಎ ಪರ್ಮಾರ್ ಆದೇಶ ನೀಡಿದ್ದರು. ಆದರೆ ಈ ಪ್ರಕರಣ ಸಂಬಂಧ ಅರ್ಜಿ ಹೈಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ಜಿಗ್ನೇಶ್ ಮೇವಾನಿ ದೋಷಿ ಎಂದು ನೀಡಲಾಗಿದ್ದ ತೀರ್ಪನ್ನು ತಡೆ ಹಿಡಿಯಲಾಗಿದೆ.
ಇದನ್ನು ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ
ಇದನ್ನೂ ಓದಿ : Ipl 2023: ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಔಟ್ : ಟ್ರೆವೋರ್ ಬೇಲಿಸ್ ಇನ್
Dalit leader Jignesh Mevani sentenced to six months in jail