Minister BC Patil :ರಾಹುಲ್ ಗಾಂಧಿ ಭಾರತದ ನೆಲ ವಿಷ ಎಂದಿದ್ದವರ ಮನೆಗೆ ಹೋಗಿ ಕಾಲಿಗೆ ಬಿದ್ದಿದ್ದಾರೆ: ಸಚಿವ ಬಿ.ಸಿ ಪಾಟೀಲ್

ಚಿತ್ರದುರ್ಗ : Minister BC Patil : ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ‘ಭಾರತ್ ಜೋಡೋ ಯಾತ್ರೆ’ಗೆ ಎಂಟು ದಿನಗಳು ಪೂರ್ಣಗೊಂಡಿವೆ. ಈ ಯಾತ್ರೆ ಬಗ್ಗೆ ಪರ ವಿರೋಧ ಚರ್ಚೆ, ಹೇಳಿಕೆಗಳು, ಪ್ರತಿಕ್ರಿಯೆಗಳು ಕೇಳಿ ಬರುತ್ತಿದೆ. ಇದೀಗ ವಿಚಾರದಲ್ಲಿ ರಾಜ್ಯ ಸಚಿವರು ಸಹ ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನದ್ದು ಇದು ಭಾರತ್ ಜೊಡೋ ಯಾತ್ರೆ ಅಲ್ಲ, ಭಾರತ್ ತೋಡೋ ಯಾತ್ರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ್ ಅವರು ರಾಹುಲ್ ಗಾಂಧಿ ಕೇರಳದಲ್ಲಿ ಒರ್ವ ಪಾದ್ರಿ ಮನೆಗೆ ಹೋಗಿದ್ದರು. ಭಾರತದ ನೆಲ ವಿಷ ಎಂದಿದ್ದವರ ಮನೆಗೆ ಹೋಗಿ ಕಾಲು ಬಿದ್ದಿದ್ದರು ಎಂದು ಬಿ.ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ರಾಹುಲ್ ಗಾಂಧಿಗೆ ದೇಶದ ಬಗ್ಗೆ ಎಷ್ಟು ಭಕ್ತಿ, ಪ್ರೀತಿಯಿದೆ ಎಂದು ತಿಳಿಯುತ್ತದೆ. ಬಿಜೆಪಿ ಅಂಥ ಚಿಲ್ಲರೆ ಕೆಲಸಕ್ಕೆ ಯಾವತ್ತೂ ಕೈಹಾಕಲ್ಲ ಎಂದು ಪಾಟೀಲ್ ಹೇಳಿದರು.

ಭ್ರಷ್ಟಾಚಾರದ ತನಿಖೆ ಮಾಡಿ ಗಲ್ಲಿಗೆ ಹಾಕಿ ಎಂದು ಡಿಕೆಶಿ ಸವಾಲಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಬಿ.ಸಿ.ಪಾಟೀಲ್ ಡಿಕೆಶಿ ವಿರುದ್ಧ ಪ್ರಕರಣದ ತನಿಖೆ ನಡೆಯುತ್ತಿದೆ
ಭ್ರಷ್ಟರಾಗಿದ್ದರೆ ಕ್ರಮ, ಇಲ್ಲದಿದ್ದರೆ ಬಿಡುಗಡೆ ಆಗುತ್ತದೆ ಎಂದು ಹೇಳಿದರು. ಇನ್ನು 8 ಜನ ರಾಜೀನಾಮೆ ನೀಡಿದರೆ ಸರ್ಕಾರ ಬೀಳುತ್ತದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾವ ಶಾಸಕರೂ ರಾಜೀನಾಮೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಈಗಾಗಲೇ ನಾವು ಚುನಾವಣೆ ಕಡೆ ದಾಪುಗಾಲು ಹಾಕುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರದ ಕುರಿತಾಗಿಯೂ ಸಚಿವ ಬಿ.ಸಿ ಪಾಟೀಲ್ ಇದೇ ಸಂದರ್ಭ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ಇರುವಂತಹ ಗೊಂದಲ, ಸಮಸ್ಯೆಗಳನ್ನು ಸಿಎಂ ಬಗೆಹರಿಸುತ್ತಾರೆ. ವೀರಶೈವ ಲಿಂಗಾಯತರಿಗೆ ಕೇಂದ್ರದಲ್ಲಿ ಓಬಿಸಿ ಕೇಳುವುದು ಒಳಿತು. ನಾನು ಈ ಬಗ್ಗೆ ಸಿಎಂ ಬೊಮ್ಮಾಯಿ ಅವರಿಗೂ ಮನವಿ ಮಾಡುತ್ತೇನೆ ಎಂದು ಬಿ.ಸಿ ಪಾಟೀಲ್ ಹೇಳಿದರು.

ಇದನ್ನು ಓದಿ : Jignesh Mevani :ದಲಿತ ನಾಯಕ ಜಿಗ್ನೇಶ್​ ಮೇವಾನಿಗೆ ಆರು ತಿಂಗಳು ಜೈಲು ಶಿಕ್ಷೆ

ಇದನ್ನೂ ಓದಿ : Mukesh Ambani :ತಿರುಮಲ ವೆಂಕಟೇಶ್ವರ ದೇಗುಲಕ್ಕೆ 1.5 ಕೋಟಿ ರೂಪಾಯಿ ಕಾಣಿಕೆ ಸಲ್ಲಿಸಿದ ಮುಕೇಶ್​ ಅಂಬಾನಿ

Rahul Gandhi has gone to the house of those who are poison to the soil of India: Minister BC Patil

Comments are closed.