Delhi Rajpath : ‘ರಾಜ್ ಪಥ್’ ಇನ್ಮುಂದೆ ‘ಕರ್ತವ್ಯ’ಪಥ್

ನವದೆಹಲಿ : Delhi Rajpath ದೇಶದ ಮತ್ತೊಂದು ಐತಿಹಾಸಿಕ ಸ್ಥಳದ ಹೆಸರನ್ನ ಕೇಂದ್ರ ಸರ್ಕಾರ ಸೋವಮವಾರ ಬದಲಾವಣೆ ಮಾಡಲು ಮುಂದಾಗಿದೆ. ದದೆಹಲಿಯ ರಾಷ್ಟ್ರಪತಿ ಭವನದ ಮತ್ತು ಸಂಸತ್ತಿನ ಮಧ್ಯದ ರಸ್ತೆಯ ಹೆಸರು ‘ರಾಜ್ ಪಥ್’ಅನ್ನು ‘ಕರ್ತವ್ಯ ಪಥ್ ’ ಅಂತಾ ಹೆಸರು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಬ್ರಿಟಿಷ್ ಪರಂಪರೆಯನ್ನ ಸಾರುವ ಹೆಸರುಗಳನ್ನ, ವಿಷಯಗಳನ್ನ ಪ್ರಧಾನಿ ನರೇಂದ್ರ ಮೋದಿ ನೆತೃತ್ವದ ಬಿಜೆಪಿ ಸರ್ಕಾರ ಮಾಡಿದೆ.

ಬ್ರಿಟಿಷರ ಕಾಲದಲ್ಲಿ KING’S WAY ಅಂತಾ ಕರೆಯುತ್ತಿದ್ದ ದಾರಿ ಮುಂದೆ ರಾಜ್ ಪಥವಾಗಿ ಬದಲಾಗಿತ್ತು. 1947ರಿಂದ ಇದು ರಾಜ್ ಪಥ ಅಂತಾನೇ ಫೇಮಸ್ ಆಗಿತ್ತು. ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಇದೇ ‘ರಾಜ್ ಪಥ್ ‘ ನಲ್ಲಿ ದೇಶದ ಸೈನಿಕರ ಶಕ್ತಿ ಅನಾವರಣ ಆಗ್ತಿತ್ತು. ಗಣರಾಜ್ಯೋತ್ಸವದ ದಿನ ರಾಜ್ ಪಥ್ ನಲ್ಲಿ ದೇಶದ ಎಲ್ಲ ಸೇನಾ ತುಕಡಿಗಳ ಆಕರ್ಷಕ ಪಥ ನಡೆಯತ್ತಿತ್ತು. ಅಷ್ಟೇ ಅಲ್ಲದೇ ಎಲ್ಲ ರಾಜ್ಯಗಳ ಕಲೆ, ಸಂಸ್ಕೃತಿ ಬಿಂಬಿಸಿರುವ ಸ್ತಬ್ಧ ಚಿತ್ರಗಳ ಅನಾವರ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತದೆ. ಇನ್ಮುಂದೆಯೂ ಎಂದಿನಂತೆ ಪಥಸಂಚಲನ ನಡೆಯುತ್ತೆ ಆದ್ರೆ ‘ರಾಜ್ ಪಥ’ದ ಹೆಸರು ‘ಕರ್ತವ್ಯ ಪಥವಾಗಿ’ ಬದಲಾಗಿರುತ್ತದೆ ಎಂದು ಮಾಧ್ಯಗಗಳು ವರದಿ ಮಾಡಿವೆ.

ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳನ್ನು, ವಿಚಾರಗಳನ್ನ ತೊಡೆದು ಹಾಕುವ ಕುರಿತು ಪ್ರಧಾನಿ ಮೋದಿ ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣ ಮಾಡಿದ್ರು. ‘ನಾವು ವಸಾಹತುಶಾಹಿ ಯುಗದ ಮನಸ್ಥಿತಿಯನ್ನು ತ್ಯಜಿಸಬೇಕಾಗಿದೆ. ಬದಲಾಗಿ, ನಾವು ನಮ್ಮ ಸಾಮರ್ಥ್ಯಗಳ ಮೇಲೆ ಅವಲಂಬಿತರಾಗಬೇಕೇಂದು ಪ್ರಧಾನಿ ಮೋದಿ ಹೇಳಿದ್ರು. ಹೀಗಾಗಿ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ರಸ್ತೆ ಮತ್ತು ಪ್ರದೇಶವನ್ನು ಇನ್ನು ಮುಂದೆ ಕರ್ತವ್ಯ ಪಥ ಎಂದು ಕರೆಯಲಾಗುವುದು.

ಈಗಾಗಲೇ ಇಂಡಿಯಾ ಗೇಟ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಪ್ರಧಾನಿ ಅವರ ನಿವಾಸದ ದಾರಿಗೆ ಇದ್ದ ಹೆಸರು ರೇಸ್ ಕೋರ್ಸ್ ರಸ್ತೆಯನ್ನ ಲೋಕ ಕಲ್ಯಾಣ್ ಮಾರ್ಗ ಅಂತಾ ಬದಲಾಯಿಸಲಾಗಿದೆ. ಇದೀಗ ರಾಜ್ ಪಥ್, ಕರ್ತವ್ಯ ಪಥ್ ಆಗಿ ಬದಲಾಗಲಿದೆ. ಮಂಗಳವಾರ ದೆಹಲಿ ಮುನ್ಸಿಪಲ್ ಕೌನ್ಸಿಲ್ ಸಭೆ ನಡೆಯಲಿದ್ದು, ಸಭೆಯಲ್ಲಿ ಈ ಹೆಸರಿಗೆ ಅಂತಿಮ ಮುದ್ರೆ ಬೀಳಲಿದೆ.

ಇದನ್ನೂ ಓದಿ : close the liquor shop : ಮದ್ಯದಂಗಡಿ ಬಂದ್​ ಮಾಡಿಸಲು ಮದ್ಯ ಸೇವಿಸಿ ಪ್ರತಿಭಟನೆಗೆ ಕುಳಿತ ಭೂಪ

ಇದನ್ನೂ ಓದಿ : Heavy Rain in Bangalore : ರಣಮಳೆಗೆ ಮುದ್ದೆಯಾದ ಬೆಂಗಳೂರು

Delhi Rajpath- Modi Government changing  the name of Kings way or Delhi rajpath

Comments are closed.