ಮುಂಬೈ : ದೇಶದ 12 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಭೀತಿ ಎದುರಾಗಿದೆ. ಈ ರಾಜ್ಯಗಳಲ್ಲಿ ಬರೋಬ್ಬರಿ 51 ಪ್ರಕರಣ ದಾಖಲಾಗಿದ್ದು, ಅದ್ರಲ್ಲೂ ಮಹಾರಾಷ್ಟ್ರದಲ್ಲಿಯೇ ಬರೋಬ್ಬರಿ 22 ಪ್ರಕರಣ ದಾಖಲಾಗಿರೋದು ಅತಂಕ ಮೂಡಿಸಿದೆ.
ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಂಕಿತ ಸುಮಾರು 45000ಕ್ಕೂ ಅಧಿಕ ಮಂದಿಯ ಮಾದರಿಯನ್ನು ತಪಾಸಣೆಗೆ ಒಳಪಡಿಸ ಲಾಗಿದ್ದು, ಈ ಪೈಕಿ 51 ಮಂದಿಯಲ್ಲಿ ಡೆಲ್ಟಾ ಫ್ಲಸ್ ಸೋಂಕು ಇರುವುದು ದೃಢಪಟ್ಟಿದೆ.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ 22 ಪ್ರಕರಣ ಗಳು ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ಒಂಬತ್ತು, ಮಧ್ಯಪ್ರದೇಶದಲ್ಲಿ ಏಳು, ಕೇರಳದಲ್ಲಿ ಮೂರು, ಪಂಜಾಬ್ ಮತ್ತು ಗುಜರಾತ್‌ನಲ್ಲಿ ತಲಾ ಎರಡು ಪ್ರಕರಣಗಳು ಪತ್ತೆ ಯಾಗಿವೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ನಿರ್ದೇಶಕ ಸುಜೀತ್ ಸಿಂಗ್ ತಿಳಿಸಿದ್ದಾರೆ.
ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಮತ್ತು ಕರ್ನಾಟಕದಲ್ಲಿ ತಲಾ ಒಂದು ಪ್ರಕರಣ ಈ ರೂಪಾಂತರದ (ಡೆಲ್ಟಾ ಪ್ಲಸ್) ಪ್ರಕರಣಗಳು ಬಹಳ ಸೀಮಿತ ಸಂಖ್ಯೆಯಲ್ಲಿವೆ. ಭಾರತದಲ್ಲಿ, ಬಹಳ ಸೀಮಿತ ಪ್ರಕರಣಗಳಿವೆ (ಡೆಲ್ಟಾ ಪ್ಲಸ್‌ನ). 12 ಜಿಲ್ಲೆಗಳಲ್ಲಿ ಸುಮಾರು 50 ಪ್ರಕರಣಗಳು ಕಂಡುಬಂದಿದೆ ಎಂದಿದ್ದಾರೆ.