ಜಾರ್ಖಂಡ್ : ದಿಯೋಘರ್ ರೋಪ್‌ವೇ ಅಪಘಾತದಲ್ಲಿ ( Deoghar Cable Cars Accident) ಇಬ್ಬರು ಸಾವನ್ನಪ್ಪಿ 14 ಮಂದಿ ಅಪಾಯದಲ್ಲಿ ಸಿಲುಕಿರುವ ಘಟನೆ ದಿಯೋಘರ್‌ನ ಬಾಬಾ ಬೈದ್ಯನಾಥ ದೇವಾಲಯದ ಸಮೀಪವಿರುವ ತ್ರಿಕುತ್ ಪಹಾರ್‌ನಲ್ಲಿ ರೋಪ್‌ವೇನಲ್ಲಿ (Cable Cars Accident) ನಡೆದಿದೆ. ಇದೀಗ ಅಪಾಯದಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಭಾರತೀಯ ವಾಯುಪಡೆ ನಡೆಸುತ್ತಿದೆ.
ದಿಯೋಘರ್ ರೋಪ್‌ವೇ ಅಪಘಾತ ಪ್ರಕರಣದಲ್ಲಿ ಇದುವರೆಗೆ 30 ಕ್ಕೂ ಹೆಚ್ಚು ಜನರನ್ನು ಭಾರತೀಯ ವಾಯುಪಡೆ (IAF) ರಕ್ಷಿಸಿದೆ, ಆದರೆ 14 ಜನರು ಇನ್ನೂ ಕೇಬಲ್ ಕಾರುಗಳಲ್ಲಿ ಸಿಲುಕಿದ್ದಾರೆ. ನಿನ್ನೆ ಪಾರುಗಾಣಿಕಾ ಹೆಲಿಕಾಫ್ಟರ್‌ನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದರು.
ಅಪಘಾತಕ್ಕೆ ಒಳಗಾಗಿರುವ ಕೇಬಲ್ ಕಾರುಗಳಲ್ಲಿ ಒಟ್ಟು 14 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಮೂರು ಕೇಬಲ್ ಕಾರ್‌ಗಳಲ್ಲಿ ತಲಾ ಮೂವರು ಪ್ರವಾಸಿಗರಿದ್ದರೆ, ಒಂದರಲ್ಲಿ ಗರುಡ್ ಕಮಾಂಡೋ ಜೊತೆಗೆ ಇಬ್ಬರು ಪ್ರವಾಸಿಗರಿದ್ದಾರೆ. ರಾಮನವಮಿಯ ನಿಮಿತ್ತ ನೂರಾರು ಪ್ರವಾಸಿರುವ ಇಲ್ಲಿನ ಬೈದ್ಯನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ರೋಪ್ ವೇ ಬಳಿಸಿದ್ದಾರೆ ಎನ್ನಲಾಗುತ್ತಿದೆ.
ದುರಂತಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಇನ್ನು ಐಎಎಫ್ ಹೆಲಿಕಾಪ್ಟರ್‌ನಿಂದ ಮನುಷ್ಯ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿ ಚಾಪರ್‌ನಿಂದ ನೇತಾಡುವ ಹಗ್ಗವನ್ನು ಹಿಡಿದಿರುವುದನ್ನು ಕಾಣಬಹುದು. ಆದರೆ, ಒಳಗೆ ಎಳೆದುಕೊಳ್ಳುವಷ್ಟರಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಕುರ್ಚಿಗೆ ಕಟ್ಟಲಾದ ಮಹಿಳೆಯೊಬ್ಬರು ಕೇಬಲ್ ಕಾರ್ ಒಂದರಿಂದ ನೇತಾಡುವ ಹಗ್ಗದಿಂದ ಕೆಳಕ್ಕೆ ಜಾರಿದ್ದರು. ಆದರೆ ಬಾಲಕಿಯೋರ್ವಳನ್ನು ರಕ್ಷಣೆ ಮಾಡಲಾಗಿದೆ.
Operations are underway by #IAF to rescue stranded tourists and passengers on #Jharkhand ropeway at Trikut hill near Deoghar.
— Indian Air Force (@IAF_MCC) April 11, 2022
Nineteen tourists have been rescued till now by #IAF Mi17 V5 & Cheetah helicopters with Garud Commandos. #HarKaamDeshKeNaam pic.twitter.com/gYrH1zIkTl
ಇದನ್ನೂ ಓದಿ : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ : 6 ಮಂದಿ ಕಾರ್ಮಿಕರು ಸಾವು
ಇದನ್ನೂ ಓದಿ : Srikakulam : ಶ್ರೀಕಾಕುಳಂನಲ್ಲಿ ಭೀಕರ ರೈಲು ಅಪಘಾತ : ಐವರು ಸಾವು
Deoghar Cable Cars Accident : 2 Dead, 14 hang on for life as rescue in Jharkhand