Miss Diva Universe 2022 : ಕರ್ನಾಟಕದ ದಿವಿತಾ ರೈ ಮುಡಿಗೇರಿದ ಮಿಸ್​ ದಿವಾ ಯೂನಿವರ್ಸ್​ 2022 ಕಿರೀಟ

Miss Diva Universe 2022 : 2022ನೇ ಸಾಲಿನ ಮಿಸ್​ ದಿವಾ ಯೂನಿವರ್ಸ್​ ಕಿರೀಟವನ್ನು ಕರ್ನಾಟಕದವರೇ ಆದ ಮಂಗಳೂರು ಮೂಲದ ದಿವಿತಾ ರೈ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯ ಸಮಾರಂಭದಲ್ಲಿ ದಿವಿತಾ ರೈ ಮಿಸ್​ ಯೂನಿವರ್ಸ್​ ಇಂಡಿಯಾ ಆಗಿ ಹೊರ ಹೊಮ್ಮಿದ್ದಾರೆ. 2021ನೇ ಸಾಲಿನ ಮಿಸ್ ಯೂನಿವರ್ಸ್ ಆಗಿರುವ ಹರ್ನಾಜ್​ ಸಂಧು ದಿವಿತಾ ರೈಗೆ ಕಿರೀಟವನ್ನು ತೊಡಿಸಿದ್ದಾರೆ.ಇನ್ನು ಇದೇ ವೇಳೆ ತೆಲಂಗಾಣದ ಪ್ರಜ್ಞಾ ಅಯ್ಯಗಾರಿಯನ್ನು ಮಿಸ್​ ದೀವಾ ಸೂಪರ್​ ನ್ಯಾಷನ್​​ 2022 ಎಂದು ಘೋಷಿಸಲಾಗಿದೆ. ಮಿಸ್​ ಯೂನಿವರ್ಸ್​ನ ಅಧಿಕೃತ ಇನ್​ಸ್ಟಾಗ್ರಾಂ ಪೇಜ್​​ನಲ್ಲಿ ಹರ್ನಾಜ್​ ದಿವಿತಾ ರೈಗೆ ಕಿರೀಟವನ್ನು ಹಸ್ತಾಂತರಿಸುತ್ತಿರುವ ಸುಂದರ ಕ್ಷಣದ ವಿಡಿಯೋವನ್ನು ಶೇರ್​ ಮಾಡಿದೆ.


ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಹರ್ನಾಜ್​ ಸಂಧು 2022ನೇ ಸಾಲಿನ ಮಿಸ್​ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದಿವಿತಾರ ಮುಡಿಗೆ ಕಿರೀಟವನ್ನು ತೊಡಿಸಿದರು. ದಿವಿತಾರಿಗೆ ಕಿರೀಟವನ್ನು ತೊಡಿಸುವ ಮುನ್ನ ಹರ್ನಾಜ್​ ಸಂಧು ತಮ್ಮ ಕಿರೀಟಕ್ಕೆ ಮುತ್ತಿಟ್ಟಿದ್ದಾರೆ. ಕಿರೀಟ ತೊಡಿಸಿದ ಬಳಿಕ ಇಬ್ಬರು ಸುಂದರಿಯರು ವೇದಿಕೆಯ ಮೇಲೆ ಕ್ಯಾಟ್​ವಾಕ್​ ಮಾಡಿದ್ದಾರೆ.


ಮಂಗಳೂರು ಮೂಲದವರಾದ ದಿವಿತಾ ರೈ ತಮ್ಮ ತಂದೆಯ ವೃತ್ತಿಯ ಕಾರಣದಿಂದಾಗಿ ದೇಶದ ಹಲವಾರು ನಗರಗಳಲ್ಲಿ ವಾಸ ಮಾಡಿದ್ದಾರೆ. 23 ವರ್ಷದವರಾದ ದಿವಿತಾ ವೃತ್ತಿಯಲ್ಲಿ ವಾಸ್ತುಶಿಲ್ಪಿ ಹಾಗೂ ಮಾಡೆಲ್​ ಆಗಿದ್ದಾರೆ. ಇದರ ಜೊತೆಯಲ್ಲಿ ಬ್ಯಾಡ್ಮಿಂಟನ್​, ಚಿತ್ರಕಲೆ, ಸಂಗೀತ ಆಲಿಸುವುದು, ಓದುವುದು ಹೀಗೆ ಅನೇಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಮಿಸ್​ ದೀವಾ ಯೂನಿವರ್ಸ್ ಕಿರೀಟವನ್ನು ತೊಟ್ಟಿರುವ ದಿವಿತಾ ರೈ 71ನೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.


ಮಿಸ್ ದಿವಾ ಯೂನಿವರ್ಸ್ 2022 ಕಿರೀಟವನ್ನು ಗೆದ್ದ ನಂತರ, ದಿವಿತಾ ಮಿಸ್ ಯೂನಿವರ್ಸ್‌ನ ಅಧಿಕೃತ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ನನಗೆ ಅತೀವ ಸಂತಸವಾಗಿದೆ. ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಬಳಿ ನಿಜವಾಗಿಯೂ ಪದಗಳು ಸಿಗುತ್ತಿಲ್ಲ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ .


, ಮಿಸ್ ದಿವಾ ಯೂನಿವರ್ಸ್ 2022 ಸ್ಪರ್ಧೆಯಲ್ಲಿ ಅನೇಕ ತಾರೆಯರು ಮತ್ತು ಮಾಜಿ ಸೌಂದರ್ಯ ಸ್ಪರ್ಧೆಯ ವಿಜೇತರು ಹಾಜರಿದ್ದರು. ಮಿಸ್ ಯೂನಿವರ್ಸ್ 2000 ಲಾರಾ ದತ್ತಾ, ಮಿಸ್ ಇಂಡಿಯಾ 1964 ಮೆಹರ್ ಕ್ಯಾಸ್ಟೆಲಿನೊ, ಮಿಸ್ ಇಂಡಿಯಾ 1980 ಸಂಗೀತಾ ಬಿಜಲಾನಿ ಮತ್ತು ಮಿಸ್ ಇಂಡಿಯಾ ಯೂನಿವರ್ಸ್ 2004 ತನುಶ್ರೀ ದತ್ತಾ ಕೂಡ ಈವೆಂಟ್‌ನಲ್ಲಿ ಕಾಣಿಸಿಕೊಂಡರು.

ಇದನ್ನು ಓದಿ : Rescue of the bull : ಮೋರಿಯಲ್ಲಿ ಬಿದ್ದು ಒದ್ದಾಡಿದ ಹೋರಿಗೆ ಪುರ್ನಜನ್ಮ : ಮೈನವಿರೇಳಿಸುವಂತಿದೆ ರಕ್ಷಣಾ ಕಾರ್ಯಾಚರಣೆ

ಇದನ್ನೂ ಓದಿ : Maruga Mutt : ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಮತ್ತಷ್ಟು ಸಂಕಷ್ಟ : ಬಂಧನ ಭೀತಿಯಲ್ಲಿ ಸ್ವಾಮೀಜಿ

Divita Rai of Karnataka becomes Miss Diva Universe 2022, Harnaaz Sandhu crowns her successor in emotional video: Watch

Comments are closed.