ನವದೆಹಲಿ : ಕೊರೊನಾ ಸಂಕಷ್ಟದ ಕಾಲದಲ್ಲಿ ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಈಗಾಗಲೇ ಕೊರೊನಾ ಎರಡನೇ ಅಲೆ ಬರೋಬ್ಬರಿ 800 ವೈದ್ಯರನ್ನು ಬಲಿ ಪಡೆದಿದೆ ಎಂದು ಐಎಂಎ ಹೇಳಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ನಮಗಾಗಿ ಶ್ರಮಿಸುವ ವೈದ್ಯರಿಗೆ ವೈದ್ಯ ದಿನಾಚರಣೆ ಯ ದಿನದಂದು ನಮನ ಸಲ್ಲಿಸ ಬೇಕಾಗಿದೆ.

ಕೊರೊನಾ ಎರಡನೇ ಅಲೆ ದೇಶವನ್ನೇ ಇನ್ನಿಲ್ಲದಂತೆ ಬಾಧಿಸಿದೆ. ಕರ್ನಾಟಕದ 9 ಮಂದಿ ಸೇರಿ 798 ವೈದ್ಯರು ಕೊರೋನಾ ವೈರಸ್ಗೆ ಬಲಿಯಾಗಿದ್ದಾರೆ. ದೆಹಲಿ 128, ಬಿಹಾರ 115, ಉತ್ತರ ಪ್ರದೇಶ 79, ಮಹಾರಾಷ್ಟ್ರ 24, ಕೇರಳ 24, ಕರ್ನಾಟಕ 9, ಪುದುಚೇರಿ ಯಲ್ಲಿ ಓರ್ವ ವೈದ್ಯರು ಬಲಿಯಾಗಿದ್ದಾರೆ.

ಇಂದು ದೇಶದಾದ್ಯಂತ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗು ತ್ತಿದೆ. ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬಿಧನ್ ಚಂದ್ರ ರಾಯ್ ಅವರ ಜನ್ಮದಿನಾಚರಣೆ ಯನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ವೈದ್ಯರ ದಿನಾಚರಣೆಯ ಹಿನ್ನೆಲೆಯಲ್ಲಿಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.