ಕೊರೊನಾ ಎಫೆಕ್ಟ್ : ರಾಜ್ಯದಲ್ಲಿ ಮಾರಾಟಕ್ಕಿದೆ 10 ಸಾವಿರ ಹೋಟೆಲ್ ..!!!

ಬೆಂಗಳೂರು : ಕಳೆದ ಎರಡು ವರ್ಷಗಳಲ್ಲಿ ಹೇರಿಕೆ‌ ಯಾದ ಕೊರೊನಾ ಲಾಕ್ ಡೌನ್ ಇದೀಗ ಹೋಟೆಲ್ ಉದ್ಯಮಕ್ಕೆ ಹೊಡೆತಕೊಟ್ಟಿದೆ. ನಷ್ಟಕ್ಕೆ ಸಿಲುಕಿರುವ 10 ಸಾವಿರಕ್ಕೂ ಅಧಿಕ ಮಾಲೀಕರು ಹೋಟೆಲ್ ಮಾರಾಟಕ್ಕೆ ಮುಂದಾಗಿದ್ದಾರೆ.

ರಾಜಧಾನಿ ಬೆಂಗಳೂರಲ್ಲಿರುವ 25 ಸಾವಿರ ಹೋಟೆಲ್ ಸೇರಿದಂತೆ ರಾಜ್ಯದಲ್ಲಿ 75 ಸಾವಿರಕ್ಕೂ ಅಧಿಕ ಹೋಟೆಲ್ ಗಳಿವೆ. ಆದರೆ ಕೊರೊನಾ ಹೊಡೆತಕ್ಕೆ ಹೋಟೆಲ್ ಮಾಲೀಕರು ತತ್ತರಿಸಿ ಹೋಗಿ ದ್ದಾರೆ. ಸಣ್ಣಪುಟ್ಟ ಹಾಗೂ ಮಧ್ಯಮ ಕ್ರಮಾಂಕ ಶ್ರೇಣಿಯ ಹೋಟೆಲ್‌ ಗಳು. ಒಂದಕ್ಕಿಂತ ಹೆಚ್ಚು ಹೋಟೆಲ್‌ಗಳನ್ನು ಹೊಂದಿರುವ ಕೆಲ ಮಾಲೀಕರು ಕೂಡ ನಷ್ಟನಿಭಾಯಿಸಲು ತಮ್ಮ ಒಂದೋ, ಎರಡೋ ಹೋಟೆಲ್‌ಗಳನ್ನು ಮಾರಾಟಕ್ಕಿಟ್ಟಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.


ತಮಿಳುನಾಡಿನಲ್ಲಿ ಶೇ. 30 ರಷ್ಟು ಹೋಟೆಲ್ ಗಳನ್ನು ಮಾಲೀಕರು ಇಟ್ಟಿದ್ದಾರೆ. ಆದರೆ ಅಲ್ಲಿಗೆ ಹೋಲಿಕೆ ಮಾಡಿದ್ರೆ ರಾಜ್ಯದಲ್ಲಿ ಶೇ. 15 ರಷ್ಟು ಮಾತ್ರ. ಲಾಕ್ ಡೌನ್ ವೇಳೆಯಲ್ಲಿ ಸರಕಾರಗಳು ಪಾರ್ಸೆಲ್ ಗೆ ಮಾತ್ರವೇ ಅವಕಾಶ ನೀಡಿತ್ತು. ಆದರೆ ಜನರು ಮನೆಯಿಂದ ಹೊರಗೆ ಬರಲು ಭಯಪಟ್ಟಿ ದ್ದಾರೆ. ಇದರಿಂದಾಗಿ ಸಣ್ಣ ಹಾಗೂ ಮಧ್ಯಮ ಹೋಟೆಲ್ ಗಳು ನಷ್ಟಕ್ಕೆ ಸಿಲುಕಿವೆ. ಆದರೆ ಪ್ರತಿಷ್ಠಿತ ಸ್ಟಾರ್ ಹೋಟೆಲ್ ಗಳು ಕ್ವಾರಂಟೈನ್ ಸೇರಿಂದಂತೆ ವು ರೀತಿಯ ಲಾಭ ಪಡೆದುಕೊಂಡಿವೆ.

ಕೊರೊನಾ ಮೊದಲ ಅಲೆಯ ಹೊತ್ತಲ್ಲೇ 6 ಸಾವಿರ ಹೋಟೆಲ್ ಗಳು ಬಾಗಿಲು ಮುಚ್ಚಿತ್ತು. ಇದೀಗ ಮತ್ತಷ್ಟು ಹೋಟೆಲ್ ಗಳು ಮಾರಾಟಕ್ಕೆ ಇಟ್ಟಿದ್ರೆ, ಕೆಲವು ಮಾಲೀಕರು ಲೀಸ್ ಮೇಲೆ ನೀಡಲು ಮುಂದಾಗಿ ದ್ದಾರೆ. ರಾಜ್ಯ ಸರಕಾರ ಈ ಬಾರಿಗೆ ಹೇರಿಕೆ ಮಾಡಿದ ಅನಧಿಕೃತ ಲಾಕ್ ಡೌನ್ ಹೋಟೆಲ್ ಉದ್ಯಮಕ್ಕೆ ಬರೆ ಕೊಟ್ಟಿದೆ. ಮೊದಲ ಅವಧಿಯಲ್ಲಿ ಲಾಕ್ ಡೌನ್ ಹೇರಿಕೆ ಮಾಡಿ ಸಾಲದ ಮರುಪಾವತಿ ಅವಧಿಗೆ ವಿನಾಯಿತಿ ನೀಡಿತ್ತು. ಆದರೆ ಈ ಬಾರಿ ರಾಜ್ಯ ಸರಕಾರ ಅಧಿಕೃತವಾಗಿ ಲಾಕ್ ಡೌನ್ ಘೋಷಣೆ ಮಾಡಿಲ್ಲ. ಜೊತೆಗೆ ಸಾಲದ ಮರುಪಾವತಿಗೆ ವಿನಾಯಿತಿ ನೀಡಿಲ್ಲ. ಅಷ್ಟೇ ಯಾಕೆ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡುವ ಕಾರ್ಯವನ್ನೂ ಮಾಡಿಲ್ಲ.

ಬ್ಯಾಂಕುಗಳು ಒಂದೆಡೆ ಸಾಲ ವಸೂಲಾತಿಗೆ ಮುಂದಾಗಿವೆ. ಇನ್ನೊಂದು ಕಡೆ ಆರ್ಥಿಕ ಸಂಕಷ್ಟದಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಸಿಬಿಲ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಹೊಸ ಸಾಲವೂ ಸಿಗುತ್ತಿಲ್ಲ. ಸರಕಾರ ಮಾಡಿದ ಎಡವಟ್ಟು ಹೋಟೆಲ್ ಮಾಲೀಕರು, ಕಾರ್ಮಿಕರ ಬದುಕಿಗೆ ಕೊಳ್ಳಿಯಿಟ್ಟಿದೆ. ಸರಕಾರ ಇನ್ನಾದ್ರೂ ಎಚ್ಚೆತ್ತು ಹೋಟೆಲ್ ಮಾಲೀಕರು, ಕಾರ್ಮಿಕರ ನೆರವಿಗೆ ಧಾವಿಸಬೇಕಾಗಿದೆ.

Comments are closed.