Ayodhya Ram Mandir : ರಾಮಮಂದಿರ ನಿರ್ಮಾಣ ಸಮಿತಿಗೆ ಶಾಕ್ : ದೇಣಿಗೆ ಮೊತ್ತದ 22 ಕೋಟಿ ರೂ. ಚೆಕ್ ತಿರಸ್ಕೃತ

ನವದೆಹಲಿ : ಅಯೋಧ್ಯೆಯಲ್ಲಿ ಹಿಂದೂ ಧರ್ಮದ ಪ್ರತೀಕವಾದ ಶ್ರೀರಾಮ ಮಂದಿರ ನಿರ್ಮಾಣಕ್ಕೆ (Ayodhya Ram Mandir) ಸಿದ್ಧತೆ ನಡೆದಿದೆ. ದೇಶದಾದ್ಯಂತ ಕೋಟ್ಯಾಂತರ ಜನರು ಈ ಪುಣ್ಯ ಕಾರ್ಯಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಆದರೆ ಈಗ ಆ ದೇಣಿಗೆಗಳ ಪೈಕಿ ಬರೋಬ್ಬರಿ 22 ಕೋಟಿ ರೂಪಾಯಿ ಮೌಲ್ಯದ ಚೆಕ್ ಗಳು ಬೌನ್ಸ್ ಆಗಿರೋ ಸಂಗತಿ ಬಯಲಿಗೆ ಬಂದಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ದೇಶದಾದ್ಯಂತ ವಿವಿಧ ಸಂಘಟನೆಗಳು ವಂತಿಗೆ,ದೇಣಿಗೆ ಸಂಗ್ರಹಿಸಿ ನೀಡಿದ್ದವು. ಈ ಪೈಕಿ 22 ಕೋಟಿ ಮೌಲ್ಯದ ಚೆಕ್ ಗಳು ವಿವಿಧ ಕಾರಣಕ್ಕೆ ತಿರಸ್ಕೃತಗೊಂಡಿವೆ.

ಅಂದಾಜು 22 ಕೋಟಿಗೂ ಅಧಿಕ ಮೊತ್ತದ ಚೆಕ್ ತಿರಸ್ಕರಿಸುವ ಸಂಗತಿಯನ್ನು ಸ್ವತಃ ಶ್ರೀರಾಮಂದಿರ ನಿರ್ಮಾಣ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀರಾಮ ಜನ್ಮ ಭೂಮಿಟ್ರಸ್ಟ್ ಖಚಿತಪಡಿಸಿದೆ. ಇದುವರೆಗೂ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣಕ್ಕೆ 5400 ಕೋಟಿಗೂ ಹೆಚ್ಚು ಹಣ ದೇಣಿಗೆ ಬಂದಿದೆ ಎನ್ನಲಾಗಿದೆ. ಸೋಮವಾರ ಲಭ್ಯವಾಗ್ತಿರೋ ಮಾಹಿತಿ ಪ್ರಕಾರ ಕಳೆದ ವರ್ಷದ ಜನವರಿ ಮತ್ತು ಮಾರ್ಚ್ ನಡುವೆಯ ಮೂರು ತಿಂಗಳ ಅಭಿಯಾನದಲ್ಲಿಯೇ 3500 ಕೋಟಿ ಮೊತ್ತದ ದೇಣಿಗೆಯನ್ನು ಸಂಗ್ರಹಿಸಲಾಗಿದೆ ಎಂದು ಟ್ರಸ್ಟ್ ನ ಮೂಲಗಳೇ ಅಧಿಕೃತ ಮಾಹಿತಿ ನೀಡಿವೆ.

ಇನ್ನೂ 22 ಕೋಟಿ ರೂಪಾಯಿ ಮೌಲ್ಯದ ಚೆಕ್ ತಿರಸ್ಕರಿಸಲ್ಪಟ್ಟಿರೋದರ ಬಗ್ಗೆ ಸ್ವತಃ ಟ್ರಸ್ಟ್ ನ ಸದಸ್ಯರು ಮಾಹಿತಿ ನೀಡಿದ್ದು, ಅಂದಾಜು 1500 ಚೆಕ್ ಗಳು ತಾಂತ್ರಿಕ ಕಾರಣದಿಂದ ಬೌನ್ಸ್ ಆಗಿವೆ. ಈಗಾಗಲೇ ಚೆಕ್ ನೀಡಿರೋರನ್ನು ಮತ್ತೆ ಸಂರ್ಪಕಿಸಿದ್ದು, ಹೊಸತಾಗಿ ದೇಣಿಗೆ ನೀಡೋ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ರಾಮ‌ಜನ್ಮಭೂಮಿ ಟ್ರಸ್ಟ್ ನ ಪದಾಧಿಕಾರಿಗಳ ಪ್ರಕಾರ 2024 ರ ಜನವರಿಯ 24 ರ ವೇಳೆಗೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆಯಂತೆ.

ಒಟ್ಟಿನಲ್ಲಿ 2025 ರ ವೇಳೆಗೆ ಶ್ರೀರಾಮಮಂದಿರ ಸಂಪೂರ್ಣ ಸಿದ್ಧಗೊಂಡು ಜನರ ವೀಕ್ಷಣೆಗೆ, ದರ್ಶನಕ್ಕೆ ಲಭ್ಯವಾಗಬಹುದೆಂದು ನೀರಿಕ್ಷಿಸಲಾಗುತ್ತಿದೆ. 2020 ರ ಅಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ್ ಮೋದಿ ಶ್ರೀರಾಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಈ ಮಧ್ಯೆ ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ 2024 ರ ಲೋಕಸಭಾ ಚುನಾವಣೆಗೂ ಮುನ್ನವೇ ಶ್ರೀರಾಮಮಂದಿರ ನಿರ್ಮಾಣಪೂರ್ಣಗೊಂಡು ಜನರ ದರ್ಶನ ಲಭ್ಯವಾಗಬೇಕೆಂದು ಆಗ್ರಹಿಸುತ್ತಿವೆ.

ಇದನ್ನೂ ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

ಇದನ್ನೂ ಓದಿ : Yellow Alert : ಕರ್ನಾಟಕ, ಕರಾವಳಿಯಲ್ಲಿ 4 ದಿನ ಬಾರೀ ಮಳೆ : ಯೆಲ್ಲೋ ಅಲರ್ಟ್‌ ಘೋಷಣೆ

donation amount of Rs 22 crore check rejected to Ayodhya Ram Mandir construction committee

Comments are closed.