Dr. Veerendra Heggade : ರಾಜ್ಯಸಭಾ ಸದಸ್ಯರಾಗಿ ಡಾ.ವೀರೇಂದ್ರ ಹೆಗ್ಗಡೆ ಪ್ರಮಾಣ ವಚನ ಸ್ವೀಕಾರ

ದೆಹಲಿ : Veerendra Heggade : ರಾಜ್ಯಸಭಾದ ನೂತನ ಸದಸ್ಯನಾಗಿ ಡಾ. ವಿರೇಂದ್ರ ಹೆಗ್ಗಡೆಯವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಖಾವಂದರು ದೇವರ ಹೆಸರಿನಲ್ಲಿ ರಾಜ್ಯ ಸಭಾ ಸದಸ್ಯನಾಗಿ ಪದಗ್ರಹಣ ಮಾಡಿದರು. ಸಂಸತ್ತಿನಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು ಇದರ ಜೊತೆಯಲ್ಲಿ ಮೇಲ್ಮನೆಯಲ್ಲಿ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ.

ದೆಹಲಿಯಲ್ಲಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿನ್ನೆಯೇ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ನಿನ್ನೆಯೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಂಗೀತ ಸಂಯೋಜಕ ಇಳಯರಾಜ, ಮಾಜಿ ಒಲಿಂಪಿಕ್ ಅಥ್ಲೀಟ್​ ಪಿ.ಟಿ ಉಷಾ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ನಿನ್ನೆ ಪಿ.ಟಿ ಉಷಾ ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ .

ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಎಂಬ ಹೆಸರಿನ ನಾನು ರಾಜ್ಯಸಭಾ ಸದಸ್ಯನಾಗಿ ನಾಮ ನಿರ್ದೇಶನ ಹೊಂದಿದ್ದು ಕಾನೂನಿನ ಮೂಲಕ ಸ್ಥಾಪಿತವಾದ ಭಾರತ ಸಂವಿಧಾನದ ವಿಷಯದ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ ಎಂದು, ಭಾರತದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು, ನಾನು ಈಗ ಕೈಗೊಳ್ಳಲಿರುವ‌ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ.

ರತ್ನ ವರ್ಮ ಹೆಗ್ಗಡೆ ಹಾಗೂ ರತ್ನಮ್ಮ ಹೆಗ್ಗಡೆ ದಂಪತಿಗಳ ಪುತ್ರ ಡಾ.ವಿರೇಂದ್ರ ಹೆಗ್ಗಡೆ 1948ರ ನವೆಂಬರ್​ 23ರಂದು ಜನಿಸಿದ್ದಾರೆ. ತುಳು ವಂಶ ಪೆರ್ಗಡೆ ರಾಜವಂಶದವರಾದ ಇವರು ಧರ್ಮಸ್ಥಳದ ಇತಿಹಾಸದ ಪ್ರಸಿದ್ಧ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಂಶಪಾರಂಪರ್ಯ ಧರ್ಮಾಧಿಕಾರಿಯಾಗಿದ್ದಾರೆ.

ಇದನ್ನು ಓದಿ : Virat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್

ಇದನ್ನೂ ಓದಿ : cm bommai : ರಾಜ್ಯದಲ್ಲಿ ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ ಚಟುವಟಿಕೆ : ಮಹತ್ವದ ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : cm bommai : ರಾಜ್ಯದಲ್ಲಿ ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ ಚಟುವಟಿಕೆ : ಮಹತ್ವದ ಸುಳಿವು ನೀಡಿದ ಸಿಎಂ ಬೊಮ್ಮಾಯಿ

dr Veerendra Heggade taking oath as rajya sabha member

Comments are closed.