presidents takes oath : ಜುಲೈ 25ರಂದೇ ದೇಶದ ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸುವುದೇಕೆ : ಇಲ್ಲಿದೆ ಕಾರಣ

presidents takes oath : ದೇಶದ 15ನೇ ರಾಷ್ಟ್ರಪತಿಯಾಗಿ ಇಂದು ದ್ರೌಪದಿ ಮುರ್ಮು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ. ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇಂದು ದೇಶದ ಪ್ರಥಮ ಪ್ರಜೆಯ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷದ ಅಭ್ಯರ್ಥಿ ಯಶವಂತ್​ ಸಿನ್ಹಾರನ್ನು ಸೋಲಿಸುವ ಮೂಲಕ ದ್ರೌಪದಿ ಮುರ್ಮ ರಾಷ್ಟ್ರಪತಿ ಭವನಕ್ಕೆ ಬಲಗಾಲು ಇಟ್ಟಿದ್ದಾರೆ.


ಭಾನುವಾರಂದು ಹಿಂದಿನ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ತಮ್ಮ ಅಧಿಕಾರಾವಧಿಯನ್ನು ಪೂರೈಸುವ ಮೂಲಕ ದ್ರೌಪದಿ ಮುರ್ಮಾರಿಗೆ ಅಧಿಕಾರವನ್ನು ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ. ಇಂದು ದ್ರೌಪದಿ ಮುರ್ಮರಿಗೆ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎನ್​. ವಿ ರಮಣ ಪ್ರಮಾಣ ವಚನ ಭೋದಿಸಿದರು. ದ್ರೌಪದಿ ಮುರ್ಮ ಇಂದೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸುವ ಹಿಂದೆ ದೇಶದ ಒಂದು ಇತಿಹಾಸವಿದೆ. ಕಳೆದ 45 ವರ್ಷಗಳಿಂದ ದೇಶದಲ್ಲೊಂದು ಸಂಸ್ಕೃತಿ ಪಾಲನೆಯಾಗಿದ್ದು ಕಳೆದ 10 ರಾಷ್ಟ್ರಪತಿಗಳು ಜುಲೈ 25ರಂದೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


ಅಂದಹಾಗೆ ಜುಲೈ 25ರಂದೇ ದೇಶದ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಯಾವ ಕಾನೂನಿನಲ್ಲಿಯೂ ಬರೆದಿಲ್ಲ. ಆದರೆ 1977ರಲ್ಲಿ ಜುಲೈ 25ರಂದು ಆರಂಭವಾದ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಇಲ್ಲಿಯವರೆಗೂ ಮುಂದುವರಿದಿಕೊಂಡು ಬಂದಿದೆ. ದೇಶದ ಆರನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.ಅಂದಿನಿಂದ ಈ ಪದ್ಧತಿ ದೇಶದಲ್ಲಿ ನಡೆದುಕೊಂಡು ಬರುತ್ತಲೇ ಇದೆ.


ಗ್ಯಾನಿ ಜೈಲ್​ ಸಿಂಗ್, ಆರ್​.ವೆಂಕಟರಾಮನ್​, ಶಂಕರ್​ ದಯಾಳ್​ ಶರ್ಮಾ,ಕೆ.ಆರ್​ ನಾರಾಯಣನ್​, ಎ.ಪಿಜೆ ಅಬ್ದುಲ್​ ಕಲಾಂ, ಪ್ರತಿಭಾ ಪಾಟೀಲ್​, ಪ್ರಣಬ್​ ಮುಖರ್ಜಿ, ರಾಮನಾಥ್​ ಕೋವಿಂದ್ ಇವರೆಲ್ಲರೂ ದೇಶದ ರಾಷ್ಟ್ರಪತಿಗಳಾಗಿ ಜುಲೈ 25ರಂದೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್​ 1950ರ ಜನವರಿ 26ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ . ಸರ್ವೇಪಲ್ಲಿ ರಾಧಾಕೃಷ್ಣನ್​ 1963ರ ಮೇ 13ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಇದನ್ನು ಓದಿ : terrorist arrested : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್​

ಇದನ್ನೂ ಓದಿ : Droupadi Murmu takes oath : ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ

draupadi murmu why presidents takes oath only on july 25

Comments are closed.