ಗೋವಾ : Dudhsagar Water falls ಗೋವಾ ಮತ್ತು ಕರ್ನಾಟಕ ಗಡಿಭಾಗದಲ್ಲಿರುವ ನಯನಮನೋಹರ ದೂದ್ ಸಾಗರ್ ಫಾಲ್ಸ್ ಬಳಿ ಶುಕ್ರವಾರ ಅವಘಢ ಸಂಭವಿಸಿದೆ. ಫಾಲ್ಸ್ ಬಳಿಕ ಟ್ರೆಕ್ಕಿಂಗ್ ಗೆ ಬಳಸಲಾಗುವ ಕೇಬಲ್ ಬ್ರಿಡ್ಜ್ ಕುಸಿದು ಪ್ರವಾಸಿಗರು ಪರದಾಡುವಂತಾಗಿದೆ.
ಕಳೆದ ಕೆಲದಿನಗಳಿಂದ ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ ಆಗುತ್ತಿದೆ. ಬೆಳಗಾವಿ ಹಾಗೂ ಗೋವಾದಲ್ಲೂ ನಿರಂತರ ಮಳೆ ಸುರಿಯುತ್ತಿದೆ. ಹೀಗಾಗಿ ದೂದ್ ಸಾಗರ್ ಫಾಲ್ಸ್ ಹಾಲಿನಂತೆ ಧುಮ್ಮಿಕ್ಕೋ ನಯನ ಮನೋಹರ ದೃಶ್ಯವನ್ನ ಕಾಣಲು, ಪಕೃತಿ ಸೊಬಗನ್ನ ಸವಿಯಲು ಪ್ರವಾಸಿಗರ ದಂಡೇ ಜಲಪಾತಕ್ಕೆ ಆಗಮಿಸುತ್ತಿದೆ. ಆದ್ರೆ ಶುಕ್ರವಾರ ಜಲಪಾತದ ಬಳಿ ಟ್ರೆಕ್ಕಿಂಗ್ ಗೆ ಬಳಸಲಾಗುವ ಕೇಬಲ್ ಬ್ರಿಡ್ಜ್ ತುಂಡಾಗಿ ಬಿದ್ದಿದೆ. ನಿರಂತರ ಮಳೆಯಿಂದಾಗಿ ಜಲಪಾತದಿಂದ ಧುಮ್ಮಿಕ್ಕೋ ನೀರಿನ ಪ್ರಮಾಣ ಜಾಸ್ತಿಯಾಗಿದ್ದು, ಕೇಬಲ್ ಬ್ರಿಡ್ಜ್ ಮುಳುಗಿ ಹೋಗಿತ್ತು. ಇದೇ ವೇಳೆ ಪ್ರವಾಸಿಗರು ಕೇಬಲ್ ಬ್ರಿಡ್ಜ್ ಬಳಸಿ ಕಾಡಿನ ಮತ್ತೊಂದು ತುದಿಗೆ ಹೋಗಿದ್ರು. ಆದ್ರೆ ನೀರಿನ ಹರಿವು ಹೆಚ್ಚಾಗಿ, ನೀರಿನ ರಭಸಕ್ಕೆ ಸೇತುವೆ ತುಂಡಾಗಿದ್ದು, ಹೋದ ಪ್ರವಾಸಿಗರು ವಾಪಸ್ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ರು.
ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯ ದೃಷ್ಟಿ ರಕ್ಷಣಾ ಪಡೆ, ಸೇತುವೆ ಮತ್ತೊಂದು ಭಾಗದಲ್ಲಿ ಸಿಲುಕಿದ್ದ ಪ್ರವಾಸಿಗರನ್ನ ರಕ್ಷಿಸಿದ್ದಾರೆ. ಅಲ್ದೆ ತೀವ್ರವಾಗಿ ಮಳೆ ಬೀಳುತ್ತಿರುವ ಕಾರಣ ಕೇವಲ ರೈಲು ಹಳಿಯ ಭಾಗದಿಂದಲೇ ಫಾಲ್ಸ್ ನೋಡಬೇಕಾಗಿ ಸ್ಥಳೀಯ ಆಡಳಿತ ಮನವಿ ಮಾಡಿದ್ದು. ಫಾಲ್ಸ್ ನ ದುರ್ಗಮ ಪ್ರದೇಶಗಳಿಗೆ ಇಳಿಯಬಾರದು ಅಂತಾ ಸೂಚಿಸಲಾಗಿದೆ. ಅಲ್ದೆ ಕೆಲ ದಿನಗಳವರೆಗೆ ದೂದ್ ಸಾಗರ್ ಫಾಲ್ಸ್ ನೋಡಲು ಬರೋದು ಬೇಡ ಅಂತಾ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: Why Gujarat election not announced..? ಹಿಮಾಚಲ ಪ್ರದೇಶ ಓಕೆ… ಗುಜರಾತ್ ಎಲೆಕ್ಷನ್ ದಿನಾಂಕ ಘೋಷಣೆ ಆಗಲಿಲ್ಲ ಏಕೆ..?
ಇದನ್ನೂ ಓದಿ: Kantara: ಕೆಜಿಎಫ್ 2, ಆರ್ಆರ್ಆರ್ ಸಿನಿಮಾಗಳ ರೇಟಿಂಗ್ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ ‘ಕಾಂತಾರ’
Dudhsagar Water falls Over 40 rescued at Dudhsagar waterfalls after cable bridge collapses