Bharat Jodo In Ballari: ಭಾರತ್ ಜೋಡೋಗೆ 38ನೇ ದಿನ.. 1000 ಕಿಲೋಮೀಟರ್ ಯಾತ್ರೆ ಪೂರ್ಣ.. ಬಳ್ಳಾರಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಬಳ್ಳಾರಿ : Bharat Jodo In Ballari ಕಾಂಗ್ರೆಸ್ ನಾಯಕ ರಾಯಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಳ್ಳಾರಿಗೆ ಎಂಟ್ರಿ ಕೊಡುವುದರ ಮೂಲಕ 38ನೇ ದಿನಕ್ಕೆ ಕಾಲಿಟ್ಟಿದೆ ಜೊತೆ ಜೊತೆಗೆ ಕನ್ಯಾಕುಮಾರಿಯಿಂದ ಆರಂಭವಾದ  ರಾಹುಲ್ ಅವರ ಭಾರತ್ ಜೋಡೋ ಯಾತ್ರೆ ಇಂದು 1000 ಕಿಲೋ ಮೀಟರ್ ಅನ್ನೂ ಪೂರ್ಣಗೊಳಿಸಲಿದೆ. ಅಲ್ದೆ ಇಡೀ ಕಾಂಗ್ರೆಸ್ ಪಾಳೆಯಕ್ಕೆ ರಾಜಕೀಯ ಪುನರ್ಜನ್ಮ ನೀಡಿರುವ ಬಳ್ಳಾರಿಯಲ್ಲಿಂದು ಶಕ್ತಿ ಪ್ರದರ್ಶನಕ್ಕೂ ವೇದಿಕೆ ಸಜ್ಜಾಗಿದೆ.

ಸೆಪ್ಟೆಂಬರ್ 8 ರಂದು ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಭಾರತ್ ಜೋಡೋಯಾತ್ರೆ ಆರಂಭಿಸಿದ್ದು ಇಂದಿಗೆ 38ನೇ ದಿನಕ್ಕೆ ಕಾಲಿಟ್ಟಿದೆ. ರಾಹುಲ್ ಪಾದಯಾತ್ರೆ ಸೆಪ್ಟೆಂಬರ್ 30ರಂದು ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಕರ್ನಾಟಕವೊಂದರಲ್ಲೇ ರಾಹುಲ್ 16 ನೇ ದಿನದ ಪಾದಯಾತ್ರೆ ಮುಂದುವರಿದೆ. ಇಂದು ಬೆಳಗ್ಗೆ ಬಳ್ಳಾರಿ ಹಲಕುಂದಿಯ ಮಠದಿಂದ ಪಾದಯಾತ್ರೆ ಆರಂಭವಾಗಿದ್ದು ರಾಹುಲ್ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಾಥ್ ನೀಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಳ್ಳಾರಿಯ ಕಮ್ಮ ಭವನದ ಎದುರು ಇಂದಿನ ಯಾತ್ರೆಯ ಮೊದಲ ವಿರಾಮ ಇರಲಿದ್ದು, ಸಂಜೆ 4 ಗಂಟೆಗೆ ಬಳ್ಳಾರಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು : ಬಳ್ಳಾರಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. ಬಳ್ಳಾರಿ ಜೊತೆಗೆ ಕಾಂಗ್ರೆಸ್ ಪಕ್ಷದ ನಂಟು ತುಂಬಾನೇ ಬೆಸೆದು ಕೊಂಡಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಲೋಕಸಭೆಗೆ ಆಯ್ಕೆ ಆಗಿದ್ದು ಬಳ್ಳಾರಿಯಿಂದಲೇ. ಸಿದ್ದರಾಮಯ್ಯ ಸರ್ಕಾರ ರಚನೆಗೂ ಬಳ್ಳಾರಿ ಪಾದಯಾತ್ರೆಯೇ ಕಾರಣವಾಗಿದೆ. ಇಂಥಾ ಬಳ್ಳಾರಿಯಿಂದಲೇ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಇದನ್ನ ಟ್ವೀಟ್ ಮೂಲಕವೇ ಕಾಂಗ್ರೆಸ್ ಘಟಕ ಹಂಚಿಕೊಂಡಿದೆ.

ಸಂಜೆ ನಡೆಯೋ ಸಮಾವೇಶದಲ್ಲಿ 3 ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದ್ದು. ಈಗಾಗಲೇ ಕಾಂಗ್ರೆಸ್ ಎಲ್ಲ ಸಿದ್ಧತೆಗಳನ್ನ ಪೂರ್ಣಗೊಳಿಸಿದೆ. ಸಮಾವೇಶದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಚತ್ತೀಸ್ ಗಢ ಸಿಎಂ ಭೂಪೇಶ್ ಭಘೇಲಾ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರೆಲ್ಲರೂ ಭಾಗಿಯಾಗಲಿದ್ದಾರೆ. ಈಗಾಗಲೇ ಡಿ.ಕೆ.ಶಿವಕುಮಾರ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಬಿಜೆಪಿಗೆ ಕೌಂಟರ್ ಕೊಡುತ್ತೆ ‘ಕೈ’ : ಭಾರತ್ ಜೋಡೋ ಯಾತ್ರೆ ಬೆನ್ನಲ್ಲೆ ರಾಜ್ಯ ಬಿಜೆಪಿ ನಾಯಕರು ನಾಯಕರು ಸಹ ಜನಸಂಕಲ್ಪ ಯಾತ್ರೆ ಮೂಲಕ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ರಂಗು ತುಂಬಿದ್ದಾರೆ. ಅದರಲ್ಲೂ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ನಿರ್ಧಾರದ ಮೂಲಕ ಚುನಾವಣೆ ವರ್ಷದಲ್ಲಿ ಕಾಂಗ್ರೆಸ್ ಮಣಿಸೋಕೆ ಬ್ರಹ್ಮಾಸ್ತ್ರವನ್ನೇ ಹೂಡಿದ್ದಾರೆ. ಅಲ್ದೆ ಮೊನ್ನೆ ಮೂರು ದಿನ ನಡೆದ ಜನಸಂಕಲ್ಪ ಯಾತ್ರೆಯನ್ನ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಸಿ ಕಾಂಗ್ರೆಸ್ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ. ಇದೀಗ ಇದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಯಾತ್ರೆ ಸಾಗುತ್ತಿದೆ. ಹೀಗಾಗಿ ಬಿಜೆಪಿಗೆ ಕಾಂಗ್ರೆಸ್ ನಾಯಕರು ಅದ್ಹೇಗೆ ಪ್ರತ್ಯುತ್ತರ ಕೊಡುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: Why Gujarat election not announced..? ಹಿಮಾಚಲ ಪ್ರದೇಶ ಓಕೆ… ಗುಜರಾತ್ ಎಲೆಕ್ಷನ್ ದಿನಾಂಕ ಘೋಷಣೆ ಆಗಲಿಲ್ಲ ಏಕೆ..?

ಇದನ್ನೂ ಓದಿ: Kantara: ಕೆಜಿಎಫ್​ 2, ಆರ್​ಆರ್​ಆರ್​ ಸಿನಿಮಾಗಳ ರೇಟಿಂಗ್​ ದಾಖಲೆಯನ್ನು 

Bharat Jodo In Ballari Rahul Yatra Day 38 Nears 1,000km mark, all geared up for Ballari rally

Comments are closed.