College girl molested : ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ, ಆಟೋದಲ್ಲಿ ದರದರನೇ ಎಳೆದೊಯ್ದು ಬಿಸಾಡಿದ ದುರುಳ.. ಬೆಚ್ಚಿ ಬೀಳಿಸೋ ದೃಶ್ಯ ಸೆರೆ

ಥಾಣೆ, ಮಹಾರಾಷ್ಟ್ರ 🙁 College girl molested ) 21 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಆಟೋ ಚಾಲಕನೊಬ್ಬ ಕಿರುಕುಳ ನೀಡಿ ಆಟೋದಲ್ಲಿ ಎಳೆದೊಯ್ದು ಬೀಸಾಡಿದ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ 21 ವರ್ಷದ ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗ. ರಸ್ತೆಯ ಬದಿಯಲ್ಲಿ ನಿಂತಿದ್ದ ಆಟೋ ಚಾಲಕ ಕೆಟ್ಟ ಪದಗಳಿಂದ ಆಕೆಯನ್ನ ಕರೆದಿದ್ದಾನೆ. ಇದ್ರಿಂದ ಕೆರಳಿದ ವಿದ್ಯಾರ್ಥಿನಿ ಆಟೋ ಡ್ರೈವರ್ ನನ್ನ ಪ್ರಶ್ನಿಸಿದ್ದಾಳೆ. ಅವನನ್ನು ಪ್ರಶ್ನಿಸಿದಾಗ, ಅವನು ಅವಳ ಕೈಯನ್ನು ಹಿಡಿದು ಎಳೆದ್ದಿದಾನೆ. ಇಷ್ಟಾದರೂ ಎದೆಗುಂದದ ವಿದ್ಯಾರ್ಥಿನಿ ಆಟೋ ಡ್ರೈವರ್ ಜೊತೆ ಮಾತಿನ ಚಕಮಕಿ ನಡೆಸಿದ್ದಾಳೆ. ಬಳಿಕ ಮಾತಿಗೆ ಮಾತು ಬೆಳೆದ ಜಗಳದ ಹಂತಕ್ಕೆ ಹೋಗಿದೆ. ಆಗ ಸ್ಥಳದಿಂದ ಎಸ್ಕೇಪ್ ಆಗಲು ಆಟೋ ಡ್ರೈವರ್ ಯತ್ನಿಸಿದ್ದಾನೆ. ಹೀಗಿದ್ದರೂ ವಿದ್ಯಾರ್ಥಿನಿ ಆಟೋ ಚಾಲಕನ್ನ ಹಿಡಿದು ಹೊರಗೆಳೆಯಲು ನೋಡಿದ್ದಾಳೆ. ಕೂಡಲೇ ಆಟೋ ಸ್ಟಾರ್ಟ್ ಮಾಡಿಕೊಂಡು ಮುಂದೆ ಹೋಗಿದ್ದಾನೆ. ಹೀಗಿದ್ದರೂ ವಿದ್ಯಾರ್ಥಿನಿ ಆತನನ್ನ ಬಿಟ್ಟಿಲ್ಲ. ಆದ್ರೆ ಆಟೋ ಚಾಲಕ ವಿದ್ಯಾರ್ಥಿನಿಯನ್ನ ಸುಮಾರು 500 ಮೀಟರ್ ವರೆಗೂ ಆಟೋ ಪಕ್ಕ ದರ ದರನೇ ಎಳೆದೊಯ್ದು ಬಿಸಾಡಿದ್ದಾನೆ.

ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಹಾಗೂ ಎಳೆದೊಯ್ದು ಬಿಸಾಡಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲಾತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವಿದ್ಯಾರ್ಥಿನಿ  ಆಟೋ ಚಾಲಕನ್ನ ಹಿಡಿಯಲು ಯತ್ನಿಸಿದ್ದಾಳೆ. ಆದ್ರೆ ಆತ ಆಟೋ ಸ್ಟಾರ್ಟ್ ಮಾಡಿ ಮುಂದೆ ಹೋಗಿದ್ದಾನೆ  ಹೀಗಾಗಿ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆಟೋ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 354 ಮತ್ತು ಇತರ ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು. ತಲೆ ಮರೆಸಿಕೊಂಡಿರೋ ಆಟೋ ಚಾಲಕನ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : Dudhsagar Water falls : ದೂದ್ ಸಾಗರ್ ಫಾಲ್ಸ್ ನಲ್ಲಿ ಕೇಬಲ್ ಬ್ರಿಡ್ಜ್ ಕುಸಿದು ಅವಾಂತರ.. 40 ಪ್ರವಾಸಿಗರ ರಕ್ಷಣೆ

ಇದನ್ನೂ ಓದಿ : Bharat Jodo In Ballari: ಭಾರತ್ ಜೋಡೋಗೆ 38ನೇ ದಿನ.. 1000 ಕಿಲೋಮೀಟರ್ ಯಾತ್ರೆ ಪೂರ್ಣ.. ಬಳ್ಳಾರಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಇದನ್ನೂ ಓದಿ : Why Gujarat election not announced..? ಹಿಮಾಚಲ ಪ್ರದೇಶ ಓಕೆ… ಗುಜರಾತ್ ಎಲೆಕ್ಷನ್ ದಿನಾಂಕ ಘೋಷಣೆ ಆಗಲಿಲ್ಲ ಏಕೆ..?

College girl molested Maharashtra College Student Molested, Dragged By Auto Driver

Comments are closed.