ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಲಘ ಭೂಕಂಪನ ಸಂಭವಿಸಿದೆ. ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ, 2.1 ರಷ್ಟು ದಾಖಲಾಗಿದೆ.
ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಮಧ್ಯಾಹ್ನ 12:02 ಗಂಟೆಗೆ ಮೇಲ್ಮೈಯಿಂದ 7 ಕಿ.ಮೀ ಆಳದಲ್ಲಿ ಅಪ್ಪಳಿಸಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಅಲ್ಲದೇ ಯಾವುದೇ ರೀತಿಯಲ್ಲಿಯೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ದೆಹಲಿ ಐದು ಭೂಕಂಪನ ವಲಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ದೆಹಲಿಯು ಭೂಕಂಪದ ಕೇಂದ್ರಬಿಂದು ವಾಗಿರುವುದು ಅಪರೂಪ. ಆದಾಗ್ಯೂ, ಮಧ್ಯ ಏಷ್ಯಾ ದವರೆಗೆ ಅಥವಾ ಹೆಚ್ಚಿನ ಭೂಕಂಪನ ವಲಯ ವಾಗಿರುವ ಹಿಮಾಲಯನ್ ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದಾಗ ನಗರವು ನಡುಕವನ್ನು ಅನುಭವಿಸುತ್ತದೆ. ಫೆಬ್ರವರಿ ಯಲ್ಲಿ, ತಜಿಕಿಸ್ತಾನದಲ್ಲಿ 6.3 ತೀವ್ರತೆ ಯ ಭೂಕಂಪನ ಸಂಭವಿಸಿದ ನಂತರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಸೆಕೆಂಡುಗಳ ಕಾಲ ತೀವ್ರ ನಡುಗಿತ್ತು.
ದೇಶದಲ್ಲಿ ಇದುವರೆಗೆ ಅಕ್ಟೋಬರ್ 10,1956 ರಂದು 6.7 ರ ತೀವ್ರತೆ ಯ ಬುಲಂದ್‌ಶಹರ್ ಮತ್ತು 1966 ರ ಆಗಸ್ಟ್ 15 ರಂದು 5.8 ರ ತೀವ್ರತೆಯ ಮೊರ್ಡಾ ಬಾದ್‌ನಲ್ಲಿ ಸಂಭವಿಸಿವೆ.