Trending : ಮೆಟ್ರೋದಲ್ಲಿ ಪ್ರಯಾಣಿಸಿದ ಮಂಗ..! ವೈರಲ್ ಆಯ್ತು ವಿಡಿಯೋ

ದೆಹಲಿ : ದೇಶದಲ್ಲಿ ಮೆಟ್ರೋ ಸೇವೆ ಆರಂಭವಾಗಿ ಹಲವು ವರ್ಷಗಳೇ ಕಳೆದಿದೆ. ಆದ್ರೆ ಬಹುತೇಕ ಮಂದಿ ಮೆಟ್ರೋ ರೈಲು ಹತ್ತಿಲ್ಲ. ಆದ್ರೆ ಮಂಗವೊಂದು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಎಂಜಾಯ್ ಮಾಡಿದೆ. ಮಂಗನ ಮೆಟ್ರೋ ಪ್ರಯಾಣದ ವಿಡಿಯೋ ಇದೀಗ ವೈರಲ್ ಆಗಿದೆ.

ದೆಹಲಿಯ ಆನಂದ ವಿಹಾರ್ ನಿಂದ ದ್ವಾರಕಾ ನಡುವಿನ ಬ್ಲೂಲೈನ್ ಮೆಟ್ರೋದಲ್ಲಿ ಮಂಗ ಪ್ರಯಾಣ ಬೆಳೆಸಿದಿದೆ. ಮೆಟ್ರೋ ರೈಲು ಸಂಚಾರ ಮಾಡೋದಕ್ಕೆ ಶುರು ಮಾಡಿದ ಮಂಗ, ಪ್ರಯಾಣಿಕರ ಜೊತೆಗೆ ಕುಳಿತು ಪ್ರಯಾಣಿಸಿದೆ. ರೈಲಿನ ಸೀಟಿನ ಮೇಲೆ ಕುಳಿತಿದ್ದ ಮಂಗ ಕಂಬಿಗಳನ್ನು ಹಿಡಿದು ಹಾರಾಡಿದೆ. ಮೆಟ್ರೋದಲ್ಲಿ ಮಂಗ ಎಂಜಾಯ್ ಮಾಡುತ್ತಿದ್ರೆ, ಜನರು ಮಂಗನ ಮಂಗನಾಟವನ್ನು ನೋಡಿ ಖುಷಿಪಟ್ಟಿದ್ದಾರೆ.

https://www.youtube.com/watch?v=_Aw5dHTMdyo

ಆದರೆ ಮೆಟ್ರೋ ರೈಲಿನ ಒಳಗೆ ಮಂಗ ಹೇಗೆ ಬಂದಿದೆ ಅನ್ನೋದು ಅಧಿಕಾರಿಗಳಿಗೆ ಗೊತ್ತಿಲ್ಲ. ಯಮುನಾ ನಿಲ್ದಾಣದ ಬಳಿಯಲ್ಲಿ ಮಂಗ ಮೆಟ್ರೋ ಹತ್ತಿರುವ ಸಾಧ್ಯತೆಯಿದೆ. ಇದೀಗ ಅಧಿಕಾರಿಗಳು ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಅಂತಿಮವಾಗಿ ಮಂಗ ರೈಲಿನಿಂದ ಹೊರ ಹೋಗಿದೆ.

Comments are closed.