Earthquake : ಅಂಡಮಾನ್‌ನಲ್ಲಿ ಭೂಕಂಪ : 5 ತೀವ್ರತೆ ದಾಖಲು

ನವದೆಹಲಿ : ಅಂಡಮಾನ್‌ ನಿಕೋಬಾರ್‌ನಲ್ಲಿ ಪ್ರಬಲ ಭೂಕಂಪನ (Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪವು ಬುಧವಾರ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ವರದಿ ಮಾಡಿದೆ. ಬೆಳಿಗ್ಗೆ 5:40 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಅದರ ಆಳವು 10 ಕಿ.ಮೀ. ಎಂದು ತಿಳಿದು ಬಂದಿದೆ.

ಭೂಕಂಪನ ನಿಕೋಬಾರ್ ದ್ವೀಪಗಳನ್ನು ತಲ್ಲಣಗೊಳಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5 ತೀವ್ರತೆಯ ಭೂಕಂಪ, ಯಾವುದೇ ಪ್ರಾಣಹಾನಿ ಇಲ್ಲ ಎಂದು ತಿಳಿದು ಬಂದಿದೆ. ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ ಅಕ್ಷಾಂಶ: 9.32 ಮತ್ತು ರೇಖಾಂಶ: 94.03, ಅನುಕ್ರಮವಾಗಿ ಕಂಡುಬಂದಿದೆ.

ಇದನ್ನೂ ಓದಿ : Flipkart Big Savings Day Sale : ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ : ಆಗಸ್ಟ್ 4 – 9 ರವರೆಗೆ ರಿಯಾಯಿತಿ ದರದಲ್ಲಿ ಐಫೋನ್ ಮಾರಾಟ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಳೆದ 5 ದಿನಗಳಲ್ಲಿ ಎರಡನೇ ಬಾರಿಗೆ 5.0 ತೀವ್ರತೆಯ ಭೂಕಂಪ ದಾಖಲಾಗಿದೆ. ಭೂಕಂಪನವು 69 ಕಿಮೀ ಆಳವನ್ನು ಹೊಂದಿದ್ದು, 10.75 ಅಕ್ಷಾಂಶ ಮತ್ತು 93.47 ರೇಖಾಂಶದ ನಿರ್ದೇಶಾಂಕಗಳಲ್ಲಿ ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ. ಆದರೆ ರಾಯಿಟರ್ಸ್ ವರದಿಯ ಪ್ರಕಾರ, ಭೂಕಂಪದ ಆಳವು ರಿಕ್ಟರ್ ಮಾಪಕದಲ್ಲಿ 6.0 ರ ತೀವ್ರತೆಯೊಂದಿಗೆ 10 ಕಿ.ಮೀ.ಗಳಷ್ಟು ಆಳವಾಗಿದೆ ಎಂದು ತಿಳಿಸುವ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ಸ್ವಲ್ಪ ವಿಭಿನ್ನವಾದ ಮಾಹಿತಿಯನ್ನು ಒದಗಿಸಿದೆ.

Earthquake of magnitude 5.0 jolts Andaman and Nicobar Island

Comments are closed.