Excise policy case : ಅಬಕಾರಿ ನೀತಿ ಪ್ರಕರಣ : ಫಾರ್ಮಾ ಕಂಪನಿಯ ಮುಖ್ಯಸ್ಥ ಸೇರಿ ಇಬ್ಬರ ಬಂಧನ

ದೆಹಲಿ : (Excise policy case)ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿಯ ಟಾಪ್‌ ಫಾರ್ಮಾ ಕಂಪನಿಯ ಮೇಲೆ ದಾಳಿ ನಡೆಸಿದ್ದು , ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಸೇರಿದ ಇಬ್ಬರು ಉದ್ಯಮಿಗಳನ್ನು ಗುರುವಾರ ಬಂಧಿಸಿದೆ. ಅವರಲ್ಲಿ ಒಬ್ಬರು ಫಾರ್ಮಾ ಕಂಪನಿ ಮುಖ್ಯಸ್ಥರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎ.ಎನ್‌.ಐ. ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೆಹಲಿ ಅಬಕಾರಿ ನೀತಿ 2021-22(Excise policy case) ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪೆರ್ನೋಡ್ ರಿಕಾರ್ಡ್‌ನ ಬೆನೊಯ್ ಬಾಬು ಮತ್ತು ಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಎಂಬ ಇಬ್ಬರನ್ನು ಬಂಧಿಸಿದ್ದು , ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಲಾಗಿದೆ.

ಮನಿ ಲಾಂಡರಿಂಗ್‌ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಇದುವರೆಗೆ ಹಲವು ದಾಳಿಗಳನ್ನು ನಡೆಸಿದ್ದು , ಸೆಪ್ಟೆಂಬರ್‌ ತಿಂಗಳಿನಲ್ಲಿ ಮದ್ಯ ತಯಾರಿಕಾ ಕಂಪನಿ ಇಂಡೋಸ್ಪಿರಿಟ್‌ನ ವ್ಯವಸ್ಥಾಪಕ ಹಾಗೂ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಲಾಯಿತು.

ಇದನ್ನೂ ಓದಿ : Bus Accident : ಬಸ್‍ಗಳ ನಡುವೆ ಭೀಕರ ಅಪಘಾತ ; ಮೂವರು ಸಾವು, 17 ಮಂದಿಗೆ ಗಾಯ

ಇದನ್ನೂ ಓದಿ : DY Chandrachud : ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ

ಇದನ್ನೂ ಓದಿ : Tirupati Couple Suicide : ತಿರುಪತಿಯ ವಸತಿಗೃಹದಲ್ಲಿ ಪ್ರೇಮಿಗಳ ಆತ್ಮಹತ್ಯೆ

ಇ.ಡಿ. ಏಜೆನ್ಸಿಯು ಈ ತಿಂಗಳ ಆರಂಭದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಪಿಎ ಆವರಣದ ಮೇಲೆ ದಾಳಿ ನಡೆಸಿದ್ದು , ನಂತರ ಅವರನ್ನು ಹಣ ಅಕ್ರಮ ವರ್ಗಾವಣೆ ಕುರಿತಂತೆ ಇಲಾಖೆ ಪ್ರಶ್ನಿಸಿತು .ಮನಿ ಲಾಂಡರಿಂಗ್‌ ಪ್ರಕರಣ ದಾಖಲಾದ ನಂತರ ಉಪಮುಖ್ಯಮಂತ್ರಿ ಮತ್ತು ದೆಹಲಿ ಸರ್ಕಾರದ ಕೆಲವು ಅಧಿಕಾರಿಗಳ ಕಚೇರಿಗಳ ಮೇಲೆಯೂ ಸಿಬಿಐ ದಾಳಿ ನಡೆಸಿತ್ತು.

2021 ರ ನವೆಂಬರ್‌ ನಲ್ಲಿ ದೆಹಲಿ ಸರ್ಕಾರ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು . ಈ ನೀತಿಯಲ್ಲಿ ವ್ಯಾಪಕ ಹಗರಣ ನಡೆದಿವೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರ ಈ ನೀತಿಯನ್ನು ಹಿಂಪಡೆದಿತ್ತು .ನಂತರ ಈ ಹಿಂದೆ ದೆಹಲಿಯ ಅಬಕಾರಿ ನೀತಿ ಅನುಷ್ಠಾನದಲ್ಲಿ ನಡೆದಿರುವ ಅಕ್ರಮ ಹಾಗೂ ದುರ್ಬಳಕೆಗೆ ಸಂಬಂಧಿಸಿದಂತೆ ಇಡಿ ಮತ್ತು ಸಿಬಿಐ ಅಧಿಕಾರಿಗಳಿಗೆ ತನಿಖೆ ನಡೆಸಲು ಲೆಫ್ಟಿನೆಂಟ್‌ ಗವರ್ನರ್‌ ಶಿಫಾರಸ್ಸು ಮಾಡಿದ್ದರು .

(Excise policy case) In connection with the Delhi Excise policy scam, the officials of the Enforcement Directorate raided a top pharma company in Delhi and arrested two businessmen belonging to Andhra Pradesh and Telangana on Thursday. One of them is the head of a pharma company, ANI quoted sources as saying. The news agency reported.

Comments are closed.