ಯುಎಇಯ ಗೋಲ್ಡ್ ವೀಸಾ ಅರ್ಹತೆ ವಿಸ್ತರಣೆ: ಯಾರಿಗೆಲ್ಲಾ ಸಿಗುತ್ತೆ ಗೊತ್ತಾ ಈ ವೀಸಾ ?

ದುಬೈ : ಯುಎಇನಲ್ಲಿ ನೆಲೆಸುವವರಿಗೆ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಲ್ಡನ್ ವೀಸಾ ಅರ್ಹತೆಯನ್ನು ವಿಸ್ತರಿಸಿದೆ. ಸರಳೀಕೃತ ವೀಸಾ ಪದ್ದತಿಯಿಂದಾ ಭಾರತೀಯರಿಗೆ ಹೆಚ್ಚು ಅನುಕೂಲವಾಗಲಿದೆ.

ಕೆಲವು ಉದ್ಯೋಗಿಗಳಿಗೆ 10 ವರ್ಷಗಳ ವಾಸ್ತವ್ಯಕ್ಕೆ ಅವಕಾಶ ನೀಡುವ ಗೋಲ್ಡನ್ ವೀಸಾ ಅರ್ಹತೆಯನ್ನು ಯುಎಇಯು ಇನ್ನೂ ಕೆಲವು ನಿರ್ದಿಷ್ಟ ವೃತ್ತಿಪರರಿಗೆ, ವಿಶೇಷ ಶಿಕ್ಷಣ ಪದವಿಗಳನ್ನು ಹೊಂದಿರುವವರು ಮತ್ತಿತರರಿಗೆ ವಿಸ್ತರಿಸಲಾಗಿದೆ.

ಯುಎಇನಲ್ಲಿ ವಾಸಿಸುವ ವಿದೇಶಿಯರಿಗೆ ಸಾಮಾನ್ಯವಾಗಿ ಉದ್ಯೋಗಕ್ಕೆ ಸಂಬಂಧಿಸಿ ಕೆಲವೇ ವರ್ಷಗಳ ವೀಸಾವನ್ನು ನೀಡಲಾಗುತ್ತಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಯುಎಇ ಸರಕಾರವು ವೀಸಾ ನೀತಿಯನ್ನು ಸರಳೀಕರಿಸಿದ್ದು, ಕೆಲವು ನಿರ್ದಿಷ್ಟ ರೀತಿಯ ಹೂಡಿಕೆದಾರರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ದೀರ್ಘಾವಧಿಯ ವಾಸ್ವವ್ಯಕೆ ಅನುಮತಿ ನೀಡಲಾರಂಭಿಸಿದೆ.

ಎಲ್ಲಾ ರೀತಿಯ ಡಾಕ್ಟರೇಟ್ ಪದವೀಧರರು, ವೈದ್ಯರು, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಪ್ರೊಗ್ರಾಮಿಂಗ್, ಇಲೆಕ್ಟ್ರಿಕಲ್ ಹಾಗೂ ಬಯೋ ಟೆಕ್ನಾಲಜಿ ಎಂಜಿನಿಯರ್ಗಳು ಗೋಲ್ಡನ್ ವೀಸಾ ಪಡೆಯಲು ಇನ್ನು ಮುಂದೆ ಅರ್ಹರಾಗುತ್ತಾರೆ ಎಂದು ಯುಎಇನ ಉಪಾಧ್ಯಕ್ಷ ಹಾಗೂ ದುಬೈನ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ತಿಳಿಸಿದ್ದಾರೆ.

ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಭಾರೀ ದತ್ತಾಂಶ ಸಂಗ್ರಹಣೆ ಹಾಗೂ ಸಾಂಕ್ರಾಮಿಕ ರೋಗ ಶಾಸ್ತ್ರ ವಿಭಾಗಗಳಲ್ಲಿ ವಿಶೇಷ ಪದವಿಗಳನ್ನು ಹೊಂದಿರುವವರು ಕೂಡಾ ಗೋಲ್ಞನ್ ವೀಸಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಯುಎಇನಲ್ಲಿ ವಾಸವಾಗಿದ್ದು, ಉನ್ನತ ರ್ಯಾಂಕ್ ಪಡೆದಿರುವ ಹೈಸ್ಕೂಲ್ ವಿದ್ಯಾರ್ಥಿಗಳು ಹಾಗೂ 3.8 ಅಥವಾ ಅದಕ್ಕಿಂತ ಅಧಿಕ ಗ್ರೇಡ್ ಪಾಯಿಂಟ್ ಆವರೇಜ್ (ಜಿಪಿಎ) ಪಡೆದಿರುವ ಕೆಲವು ನಿರ್ದಿಷ್ಟ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಕೂಡಾ ಗೋಲ್ಡನ್ ವೀಸಾಕ್ಕೆ ಅರ್ಹರಾಗಲಿದ್ದಾರೆ.

Comments are closed.